ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಗೊಲ್ಲರಹಟ್ಟಿಯ ೪ ನೇ ಬ್ಲಾಕ್ ನಲ್ಲಿ ಅತ್ತೆ-ಸೊಸೆ ಇಬ್ಬರೂ ಗ್ರಾಮ ಪಂಚಾಯ್ತಿಯ ಚುನಾವಣಾ ಸ್ಪರ್ಧಿಸಿದ್ದು ಇದೀಗ ಮತ ಎಣಿಕೆಯ ನಂತರ ಸೊಸೆ ವಿರುದ್ದ ಅತ್ತೆಗೆ ಜಯಸಿಕ್ಕಿದೆ.
ಗೊಲ್ಲರಹಟ್ಟಿಯ ರುದ್ರಪ್ಪಅವರ ಪತ್ನಿ ಮಂಗಳಮ್ಮ ೧೮೯ ಮತಗಳನ್ನು ಪಡೆಯುವ ಮೂಲಕ ತನ್ನ ಸೊಸೆ ಸತೀಶ್ ಅವರ ಪತ್ನಿ ಮಂಜುಳಾ (೮೩ಮತ )ಅವರಿಗಿಂತ ೧೦೬ ಅಧಿಕ ಮತಗಳನ್ನು ಪಡೆದಿದ್ದಾರೆ. ಇವರಿಬ್ಬರಿಗೆ ಸ್ಪರ್ಧೆವೊಡಿದ್ದ ಅದೇ ಗ್ರಾಮದ ಕೊಟ್ರೇಶ್ ಅವರ ಪತ್ನಿ ವೀಣಾ(೨೫ಮತ) ಹಾಗೂ ನಟರಾಜ್ ಅವರ ಪತ್ನಿ ಪವಿತ್ರ (೧೭೨ಮತ) ಪಡೆದಿದ್ದಾರೆ. ಒಟ್ಟಾರೆ ಅತ್ತೆ-ಸೊಸೆಯ ಹಣಾಹಣಿಯಲ್ಲಿ ಯಾರು ಗೆಲ್ಲುತ್ತಾರೆ ಎಂಬ ಮತದಾರರ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದಂತಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ