ಗ್ರಾ.ಪಂ.ಯ ನೂತನ ಸದಸ್ಯರಾಗಿ ಆಯ್ಕೆಯಾದ ಎರಡೇ ದಿನಕ್ಕೆ ತಮ್ಮ ಬ್ಲಾಕ್ ನಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಗ್ರಾ.ಪಂ.ಯಿಂದ ಬರುವ ಅನುದಾನಕ್ಕೆ ಕಾದುಕೂರದೆ ಸ್ವಂತ ಖರ್ಚಿನಲ್ಲೇ ಕೆಲಸ ಮಾಡುವಲ್ಲಿ ೬ ನೇ ಬ್ಲಾಕ್ ನ ಸದಸ್ಯರಾದ ಕೋಳಿಶ್ರೀನಿವಾಸ್ ಹಾಗೂ ರಾಘವೇಂದ್ರ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
![]() |
ಹುಳಿಯಾರಿನ ೬ ನೇ ಬ್ಲಾಕ್ ನಲ್ಲಿ ಆಯ್ಕೆಯಾದ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ಕೆಲಸ ಮಾಡಿಸಿರುವುದು.
|
ಪಟ್ಟಣದೆಲ್ಲೆಡೆ ಕಸದ ರಾಶಿರಾಶಿ ಬಿದ್ದಿದ್ದು, ಚರಂಡಿ ತುಂಬ ಹೂಳು ತುಂಬಿ ದುರ್ನಾತ ಬೀರುತ್ತಿದ್ದರೂ ಸಹ ಈ ಹಿಂದೆ ಇದ್ದ ಸದಸ್ಯರು ಗಮನಗೊಡದೆ ಇದ್ದು, ಇದೀಗ ಆಯ್ಕೆಯಾಗಿರುವ ನೂತನವಾಗಿ ಆಯ್ಕೆಯಾದ ಸದಸ್ಯರ ಪೈಕಿ ಕೆಲವರು ಹೊಸಹುಮ್ಮಸ್ಸಿನಿಂದ ತಮ್ಮ ಬ್ಲಾಕ್ ಗಳಲ್ಲಿ ಕೆಲಸ ಕಾರ್ಯ ಮಾಡಿಸಲು ಮುಂದಾಗಿದ್ದಾರೆ.
ಪಟ್ಟಣದ ೬ ನೇ ಬ್ಲಾಕ್ ನಲ್ಲಿ ವಾಸವಿ ಶಾಲೆಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕ ಕೊಳಯಿಯೊಂದರ ಬಳಿ ನೀರು ಪೋಲಾಗುತ್ತಿದ್ದು ರಸ್ತೆಯಲ್ಲೆಲ್ಲಾ ಹರಿದು ಕೆಸರುಂಟಾಗುತ್ತಿತ್ತು. ಈ ಬಗ್ಗೆ ಗ್ರಾ.ಪಂ.ಯವರ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಪ್ರಯೋಜವಾಗಿರರಿಲ್ಲ. ಇದೀಗ ನೂತನ ಸದಸ್ಯರಾಗಿ ಆಯ್ಕೆಯಾದ ಸದಸ್ಯರು ಈ ಕೊಳಾಯಿಯ ಸುತ್ತ ಪ್ಲಾಟ್ ಫಾರಂ ಕಟ್ಟಿ ನೀರು ವ್ಯರ್ಥವಾಗಿ ರಸ್ತೆಯಲ್ಲಿ ಹರಿಯುವುದನ್ನು ತಪ್ಪಿಸಿದ್ದಾರೆ. ಹೆಚ್ಚಾದ ನೀರು ಪೈಪ್ ಮೂಲಕ ಚರಂಡಿ ಸೇರುವ ವ್ಯವಸ್ಥೆ ಸಹ ಮಾಡಿದ್ದಾರೆ.
ಚುನಾವಣೆಯಲ್ಲಿ ಗೆಲ್ಲುವ ತನಕ ಆ ಕೆಲಸ, ಈ ಕೆಲಸ ಮಾಡಿಸುವುದಾಗಿ ಹೇಳುವ ಅಭ್ಯರ್ಥಿಗಳು ಗೆದ್ದ ನಂತರ ಇತ್ತ ಗಮನ ಹರಿಸುವುದಿಲ್ಲ ಇಂತಹ ಸನ್ನಿವೇಶದಲ್ಲಿ ೬ ನೇ ಬ್ಲಾಕ್ ನ ಸದಸ್ಯರು ಚುನಾವಣೆ ಸಂದರ್ಭದಲ್ಲಿ ಹೇಳಿದಂತೆ ಇದೀಗ ತಮ್ಮ ಬ್ಲಾಕ್ ನಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿದ್ದಾರೆ. ಇವರಂತೆಯೇ ಪಟ್ಟಣದ ಆಯಾಯ ಬ್ಲಾಕ್ ನ ಸದಸ್ಯರೂ ಸಹ ಸ್ವಯಂಪ್ರೇರಣೆಯಿಂದ ತಮ್ಮ ಬ್ಲಾಕ್ ಗಳಲ್ಲಿರುವ ಸಮಸ್ಯೆಗಳ ನಿವಾರಣೆಗೆ ಮುಂದಾದರೆ ಪಟ್ಟಣದ ಬಹುತೇಕ ಸಮಸ್ಯೆ ಬಗೆಹರಿಯಲಿದೆ.
ನಾವು ಚುನಾವಣೆಯಲ್ಲಿ ಸ್ಪರ್ಧಿಸುವ ವೇಳೆ ಮತದಾರರಿಗೆ ಭರವಸೆ ನೀಡುವಂತೆ, ಗೆದ್ದ ನಂತರ ಆ ಭರವಸೆಗಳನ್ನು ಈಡೇರಿಸಬೇಕು. ಅದಕ್ಕೆ ಪಂಚಾಯ್ತಿಯಿಂದ ಬರುವ ಅನುದಾನವನ್ನು ಕಾಯುತ್ತಾ ಕೂತರೆ ದಿನಗಳು ಉರುಳುತ್ತವೆ. ಪಂಚಾಯ್ತಿಯಿಂದ ಬರುವ ಅನುದಾನವನ್ನು ಕಾಯುವ ಬದಲು ಸಣ್ಣಪುಟ್ಟ ಕೆಲಸಗಳನ್ನು ತಮ್ಮ ಸ್ವಂತ ಖರ್ಚಿನಲ್ಲೇ ಮಾಡಿ ಜನಕ್ಕೆ ಹೇಳಿದಂತೆ ನಡೆಯಲು ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ತಮ್ಮ ೬ ಬ್ಲಾಕ್ ನಲ್ಲಿರುವ ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳು, ಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಲು ಮುಂದಾಗುವುದಾಗಿ ಸದಸ್ಯರಾದ ಕೋಳಿಶ್ರೀನಿವಾಸ್ ತಿಳಿಸುತ್ತಾರೆ.
ಒಟ್ಟಾರೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವವರು ತಮ್ಮ ಬ್ಲಾಕ್ ಗಳಲ್ಲಿ ಹೊಸಹುಮ್ಮಸ್ಸಿನಿಂದ ಕಾರ್ಯ ಮಾಡುತ್ತಿರುವುದು ಸ್ವಾಗತಾರ್ಹವಾಗಿದ್ದು, ಇದೇ ಹುಮ್ಮಸ್ಸು, ಜವಬ್ದಾರಿ ಮುಂದಿನ ೫ ವರ್ಷವೂ ಇರುತ್ತದೆಯೋ, ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ