ಕುರಿಮೇಯಿಸಲು ಹೋಗಿದ್ದ ಬಾಲಕನೊಬ್ಬನಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಹೋಬಳಿಯ ದಸೂಡಿ ಗ್ರಾಮಪಂಚಾಯ್ತಿ ಶೇಷಪ್ಪನಹಳ್ಳಿ ರಸ್ತೆಬಳಿಯ ತೋಟದಲ್ಲಿ ಶನಿವಾರ ಘಟಿಸಿದೆ.
ಬಲ್ಲಪ್ಪನಹಟ್ಟಿಯ ಕೋಲ್ಗಾರ ಈರಪ್ಪನವರ ಮಗ ನಾಗರಾಜು(೧೬) ಮೃತ ದುರ್ದೈವಿಯಾಗಿದ್ದು, ಈತ ಹತ್ತನೇ ತರಗತಿಯಲ್ಲಿ ಓದುತ್ತಿದ್ದವನಾಗಿದ್ದು ಶನಿವಾರ ರಜಾದಿನವಾಗಿದ್ದರಿಂದ ಮಾಮೂಲಿಯಂತೆ ಕುರಿ ಮೇಯಿಸಲು ತೆರಳಿದ್ದಾನೆ. ದಸೂಡಿಯಿಂದ ಶೇಷಪ್ಪನಹಳ್ಳಿಗೆ ಹೋಗುವ ರಸ್ತೆ ಬಳಿಯ ಕಾಂತಣ್ಣ ಎಂಬುವರ ತೋಟದಲ್ಲಿ ಬೋರ್ ಹತ್ತಿರ ವಿದ್ಯುತ್ ತಂತಿ ತಗುಲಿದ ಪರಿಣಾಮ ಬಾಲಕ ಮೈಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ. ಪೋಲಿಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ