ಗ್ರಾಮಪಂಚಾಯ್ತಿಯ ನೂತನ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯ ಮತಎಣಿಕೆಯ ಸಂಪೂರ್ಣ ಫಲಿತಾಂಶ ಶುಕ್ರವಾರ ರಾತ್ರಿ ಫಲಿತಾಂಶ ಹೊರಬಿದ್ದಿದೆ.
ಹುಳಿಯಾರಿನ ೫ನೇ ಬ್ಲಾಕ್ ನಿಂದ ಸ್ಪರ್ಧಿಸಿ ೫೦೩ ಮತಗಳನ್ನು ಪಡೆದು ಸತತ ೨ನೇಬಾರಿ ಆಯ್ಕೆಯಾದ ಗೀತಾಅಶೋಕ್ ಬಾಬು ಚುನಾವಣಾಧಿಕಾರಿಯಿಂದ ಪ್ರಮಾಣಪತ್ರ ಪಡೆಯುತ್ತಿರುವುದು. |
ಶುಕ್ರವಾರ ಬೆಳಿಗ್ಗಿನಿಂದ ಸಂಜೆ ವರೆಗೆ ೧ ನೇ ಬ್ಲಾಕ್ ನಿಂದ ೮ ನೇ ಬ್ಲಾಕ್ ವರೆಗೆ ಮಾತ್ರ ಮತಎಣಿಕೆ ನಡೆದು ಫಲಿತಾಂಶ ಹೊರಬಿದ್ದಿತ್ತು. ಸಂಜೆ ನಂತರ ಇನ್ನುಳಿದ ಬ್ಲಾಕ್ ಗಳ ಎಣಿಕೆ ಕಾರ್ಯ ನಡೆದು ರಾತ್ರಿ ೯.೩೦ರ ಸುಮಾರಿಗೆ ಎಲ್ಲಾ ಬ್ಲಾಕ್ ಗಳ ಫಲಿತಾಂಶದ ಘೋಷಣೆಯಾಯಿತು.
೫ ನೇ ಬ್ಲಾಕ್ ನ ೪ ಸ್ಥಾನಕ್ಕೆ (ಎಸ್ ಟಿ ಮಹಿಳೆ, ಬಿಸಿಎಂ-ಎ, ಬಿಸಿಎಂ-ಎ ಮಹಿಳೆ, ಸಾಮಾನ್ಯ ಮಹಿಳೆ) ಒಟ್ಟು ೧೪ ಮಂದಿ ಕಣದಲ್ಲಿದ್ದು ಎಸ್ಆರ್ ಎಸ್ ದಯಾನಂದ್(೪೧೯), ಗೀತಾಬಾಬು (50೩), ನಗೀನಾಬಾನು (2೫೭), ರಂಗಮ್ಮ (25೬) ವಿಜೇತರಾಗಿದ್ದಾರೆ. ೯ ನೇ ಬ್ಲಾಕ್ ನ ೪ ಸ್ಥಾನಕ್ಕೆ (ಬಿಸಿಎಂ-ಎ, ಬಿಸಿಎಂ-ಬಿ, ಸಾಮಾನ್ಯ, ಸಾಮಾನ್ಯ ಮಹಿಳೆ) ಒಟ್ಟು ೧೮ ಮಂದಿ ಸ್ಪರ್ಧಿಸಿದ್ದು ಎಚ್.ಆರ್.ವೆಂಕಟೇಶ್(೨೯೨),ಡಿಶ್ ಬಾಬು(೩೦೫), ಡಾಬಾ ಸುರೇಶ್(೩೫೮), ಬಿಂದುರಮೇಶ್ ಬಾಬು(೩೨೬), ೧೦ ನೇ ಬ್ಲಾಕ್ ನ ೪ ಸ್ಥಾನಕ್ಕೆ (ಎಸ್.ಸಿ.ಮಹಿಳೆ, ಬಿಸಿಎಂ-ಎ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ) ಒಟ್ಟು ೨೮ ಮಂದಿ ಸ್ಪರ್ಧಿಸಿದ್ದು ಅಹಮದ್ ಖಾನ್(೩೬೩), ಶಶಿಕಲಾ(೨೩೨), ಜಾನಕಮ್ಮ(೨೩೦), ಪುಟ್ಟಿಬಾಯಿ(೧೬೪), ೧೧ ನೇ ಬ್ಲಾಕ್ (೨ ಸ್ಥಾನಕ್ಕೆ ) ಸಾಮಾನ್ಯ,ಸಾಮಾನ್ಯ ಮಹಿಳೆ, ಒಟ್ಟು ೮ ಮಂದಿ ಸ್ಪರ್ಧಿಸಿದ್ದು ಎಸ್.ಹೆಚ್.ಲತಾ(೨೨೩),ನಾಗರಾಜ(೧೬೯), ೧೨ ನೇ ಬ್ಲಾಕ್ ನ ೨ ಸ್ಥಾನಕ್ಕೆ (ಬಿಸಿಎಂ-ಎ, ಸಾಮಾನ್ಯ ಮಹಿಳೆ) ಒಟ್ಟು ೫ ಮಂದಿ ಸ್ಪರ್ಧಿಸಿದ್ದು ಕಾಯಿಕುಮಾರಸ್ವಾಮಿ(೩೯೧), ಚಂದ್ರಮ್ಮ(೩೧೫), ೧೩ ನೇ ಬ್ಲಾಕ್ ನ ೪ ಸ್ಥಾನಕ್ಕೆ (ಬಿಸಿಎಂ-ಎ ಮಹಿಳೆ, ಬಿಸಿಎಂ-ಬಿ ಮಹಿಳೆ, ಸಾಮಾನ್ಯ ೨) ಒಟ್ಟು ೧೫ ಮಂದಿ ಸ್ಪರ್ಧಿಸಿದ್ದು ಸುಭದ್ರಬಾಯಿ(೩೨೪),ವಿ.ಎನ್.ಶಿವಾಜಿರಾವ್(೩೧೪), ಜಬೀನ್ ತಾಜ್(೨೨೦),ಹೆಚ್.ಚಂದ್ರಶೇಖರ್ ರಾವ್(೩೪೭) ಮತಗಳನ್ನು ಪಡೆಯುವ ಮೂಲಕ ವಿಜೇತರಾಗಿದ್ದಾರೆ.ರಾತ್ರಿ ೧೦ ಗಂಟೆಗೆ ಹುಳಿಯಾರಿಗೆ ಬಂದ ವಿಜೇತ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ತಮ್ಮ ಬ್ಲಾಕ್ ಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ