ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಕೃಷಿ ಇಲಾಖೆ ನಿರ್ಲಕ್ಷದಿಂದ ಕೃಷಿಗೆ ಅಗತ್ಯವಾದ ಬಿತ್ತನೆ ಬೀಜದ ಕೊರತೆ ಉಂಟಾಗಿದೆ ಎಂದು ರೈತ ಸಂಘದ ಪುಟ್ಟಣ್ಣಯ್ಯ ಬಣದ ಅಧ್ಯಕ್ಷ ಹೊಸಳ್ಳಿ ಚಂದ್ರಪ್ಪ ದೂರಿದ್ದಾರೆ.
ರೈತರ ಕೃಷಿ ಕಾರ್ಯಕ್ಕೆ ಅಗತ್ಯವಾದ ರಾಗಿ, ತೊಗರಿ , ಅಲಸಂದೆ ಬಿತ್ತನೆ ಬೀಜ ಕೃಷಿ ಇಲಾಖೆಯಲ್ಲಿ ಲಭ್ಯವಿಲ್ಲದೆ ಹೊರಗಡೆ ಅಂಗಡಿಗಳಲ್ಲಿ ಕೇಳಿದಷ್ಟು ಬೆಲೆಕೊಟ್ಟು ತರುವ ಸ್ಥಿತಿ ಉಂಟಾಗಿದೆ. ಅಲ್ಲದೆ ಈಗಾಗಲೇ ಉತ್ತಮವಾಗಿ ಬೆಳೆ ಬಂದಿರುವ ಹೆಸರಿಗೆ ಕೀಟಬಾಧೆ ಉಂಟಾಗಿದ್ದು ಇವುಗಳ ನಿಯಂತ್ರಣಕ್ಕೆ ಅಗತ್ಯ ಔಷಧಿ ಸರಬರಾಜು ಮಾಡುವಲ್ಲಿ ಸಹ ವಿಫಲಾಗಿದೆ ಎಂದು ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಬೀಜ, ಔಷಧಿ , ಗೊಬ್ಬರವನ್ನು ಉಚಿತವಾಗಿ ನೀಡುವಂತೆ ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ