ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ತಾಲ್ಲೂಕ್ ಪಂಚಾಯ್ತಿ, ಕಂದಾಯ ಇಲಾಖೆ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ, ರೇಷ್ಮೆ,ಮೀನುಗಾರಿಕೆ,ಕೃಷಿ ಮಾರುಕಟ್ಟೆ,ಲೀಡ್ ಬ್ಯಾಂಕ್ ಹಾಗೂ ಆರಕ್ಷಕ ಇಲಾಖೆಯ ಸಹಭಾಗಿತ್ವದಲ್ಲಿ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಎಂಬ ಧ್ಯೇಯದೊಂದಿಗೆ " ಕೃಷಿ ಅಭಿಯಾನ-೨೦೧೫-೧೬" ಕಾರ್ಯಕ್ರಮ (ತಾ.೧೮) ಗುರುವಾರದಿಂದ ತಾ.೨೦ರ ಶನಿವಾರದವರೆಗೆ ಮೂರು ದಿನಗಳ ಕಾಲ ಹುಳಿಯಾರು ಹೋಬಳಿಯಾದ್ಯಂತ ನಡೆಯಲಿದೆ.
ತಾ.೧೮ರ ಗುರುವಾರದಂದು ಬರಕನಹಾಳ್, ದೊಡ್ಡಬಿದರೆ, ತಿಮ್ಲಾಪುರ,ಕೋರಗೆರೆ, ಯಳನಡು ಗ್ರಾಮಗಳಲ್ಲಿ, ತಾ.೧೯ರ ಶುಕ್ರವಾರ ದಸೂಡಿ,ಗಾಣಧಾಳು,ಹೊಯ್ಸಳಕಟ್ಟೆ,ಕೆಂಕೆರೆ ಗ್ರಾಮ ಪಂಚಾಯ್ತಿಯಲ್ಲಿ ಅಭಿಯಾನ ಕಾರ್ಯಕ್ರಮ ನಡೆಯಲಿದೆ. ಅಂದು ಕೃಷಿ ಮಾಹಿತಿ ಸಂಚಾರಿ ವಾಹನ ಹಾಗೂ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಸಹ ಆಗಮಿಸಲಿದ್ದಾರೆ. ರೈತರು ತಮ್ಮ ಸಮಸ್ಯೆಗಳನ್ನು ಅವರಲ್ಲಿ ತಿಳಿಸಿ ಮಾಹಿತಿ ಪಡೆಯಬಹುದಾಗಿದೆ.
ತಾ.೨೦ರ ಶನಿವಾರ ಹುಳಿಯಾರಿನ ಆಂಬೇಡ್ಕರ್ ಭವನದಲ್ಲಿ ಸಂವಾದ ಕಾರ್ಯಕ್ರಮವಿದ್ದು ಹೋಬಳಿ ವ್ಯಾಪ್ತಿಯ ಎಲ್ಲಾ ರೈತರು ಆಗಮಿಸಬಹುದಾಗಿದೆ. ಈ ವೇಳೆ ರೈತರು ತಾವು ಮಾಡೂತ್ತಿರುವ ಕೃಷಿಯಲ್ಲಿ ಎದುರಾಗುವ ಸಮಸ್ಯೆಗಳ ಬಗ್ಗೆ ಹಾಗೂ ಯಾವರೀತಿ ಕೃಷಿ ಕಾರ್ಯ ಮಾಡಬೇಕು, ಯಾವ ಬೆಳೆಯಿಂದ ಉತ್ತಮ ಇಳುವರಿ ಪಡೆಯಬಹುದು ಹಾಗೂ ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಇರುವ ವಿವಿಧ ಯೋಜನೆಗಳ ಬಗ್ಗೆ ಸಂವಾದ ನಡೆಯಲಿದ್ದು ಹೋಬಳಿ ವ್ಯಾಪ್ತಿಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಭಿಯಾನದ ಸದುಪಯೋಗ ಪಡೆಸಿಕೊಳ್ಳುವಂತೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್.ಹೊನ್ನದಾಸೇಗೌಡ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ