ಇಲ್ಲಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ವಿಶ್ವಯೋಗ ದಿನಾಚರಣೆ ಅಂಗವಾಗಿ ಶಾಲೆಯ ಕಾರ್ಯದಶಿ ಕವಿತಾ ಕಿರಣ್ ಕುಮಾರ್ ನೇತೃತ್ವದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಯೋಗ ಪ್ರದರ್ಶನ ನಡೆಸಿದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಶಾಲಾಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ಯೋಗಾಭ್ಯಾಸ ನಡೆಸಿದರು. |
ಪ್ರತಿ ದಿನ ಯೋಗಾಭ್ಯಾಸ ಹಾಗೂ ಧ್ಯಾನ ಮಾಡುವುದರಿಂದ ದೇಹ ಹಾಗೂ ಮನಸ್ಸು ಸದೃಡಗೊಳ್ಳಲಿದ್ದು ಉತ್ತಮ ಆರೋಗ್ಯ ಲಭಿಸಲಿದೆ. ವಿದ್ಯಾರ್ಥಿಗಳು ತಪ್ಪದೇ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚುವುದಲ್ಲದೆ ಹೆಚ್ಚಿನ ಅಭ್ಯಾಸಕ್ಕೆ ನೆರವಾಗಲಿದೆ. ಮಕ್ಕಳೊಂದಿಗೆ ಸೇರಿ ತಾವು ಯೋಗ ಮಾಡುತ್ತಿರುವುದು ಸಂತಸ ತಂದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ತಿಳಿಸಿದರು. ಈ ವೇಳೆ ಪ್ರಾಂಶುಪಾಲ ರವಿ, ಶಿಕ್ಷಕರಾದ ವಿಜಯ್, ಮಹಂತೇಶ್ ಹಾಗೂ ಶಿಕ್ಷಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ