ಹುಳಿಯಾರು ಹೋಬಳಿ ಯಳನಡು ಗ್ರಾಮಪಂಚಾಯ್ತಿಯ ತಮ್ಮಡಿಹಳ್ಳಿ ಗೊಲ್ಲರಹಟ್ಟಿಯ ಅಂಗನವಾಡಿ ಕೇಂದ್ರದಲ್ಲಿನ ಮತಗಟ್ಟೆ ಸಂಖ್ಯೆ ೧೭ ಸೋರುತ್ತಿದ್ದು ಸೋಮವಾರ ಆಗಮಿಸಿದ ಸಿಬ್ಬಂದಿಗಳು ಕೊಠಡಿ ಒಳಗೆ ಹೋಗಲು ಮಿನಾಮೇಷ ಎಣಿಸಿದರು.
ಹುಳಿಯಾರು ಹೋಬಳಿ ತಮ್ಮಡಿಹಳ್ಳಿಗೊಲ್ಲರಹಟ್ಟಿಯ ಮತಗಟ್ಟೆಯ ಛಾವಣಿಯ ಸಿಮೆಂಟ್ ಕಿತ್ತುಬಿದ್ದು ನೀರು ಸೋರಿ ಶಿಥಿಲವಾಗಿರುವುದು. |
ಭಾನುವಾರ ರಾತ್ರಿ ಬಂದ ಮಳೆಗೆ ಅಂಗನವಾಡಿ ಕೊಠಡಿಯ ಛಾವಣೆಯೆಲ್ಲಾ ಸೋರಿ, ಸಿಮೆಂಟ್ ಕಿತ್ತು ಬಿದ್ದು ಕೊಠಡಿಯಲ್ಲಿ ನೀರು ನಿಂತಿದೆ. ಒಂದು ವೇಳೆ ಸೋಮವಾರ ರಾತ್ರಿಯೂ ಮಳೆ ಬಂದರೆ ನಮ್ಮಗತಿಯೇನು, ಬೂತ್ ಹಾಗೂ ಮತಪತ್ರಗಳನ್ನು ಎಲ್ಲಿ ಸಂರಕ್ಷಿಸಿಡುವುದು ಎಂಬುದೇ ತೋಚದಂತಾಗಿದೆ ಎಂದು ಇಲ್ಲಿಗೆ ಆಗಮಿಸಿದ ಸಿಬ್ಬಂದಿ ದೂರಿದರು. ಶೌಚಾಲಯವೂ ಇಲ್ಲವೇ ಊರಿನವರನ್ನು ಕೇಳಿದರೆ ಬಯಲಿಗೆ ಹೋಗಬೇಕು ಎನ್ನುತ್ತಾರೆ. ಇಂತಹ ಹತ್ತಾರೂ ಸಮಸ್ಯೆ ಇರುವ ಮತಗಟ್ಟೆಯನ್ನು ಚುನಾವಣಾಧಿಕಾರಿಗಳು ಯಾವರೀತಿ ಗುರ್ತಿಸಿದ್ದಾರೆಂದು ಗೊಣಗಿದರು.
ಈಗಾಗಲೇ ಕಳೆದ ಐದಾರು ಬಾರಿ ವಿಧಾನಸಭೆ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಯ ಮತದಾನ ಇಲ್ಲಿಯೇ ನಡೆದಿದ್ದು ಶಿಥಿಲವಾಗಿರುವ ಮತಗಟ್ಟೆಯ ಸಮಸ್ಯೆಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಈ ಸಮಸ್ಯೆಯಿಂದಾಗಿ ಇಲ್ಲಿಗೆ ಬಂದ ಸಿಬ್ಬಂದಿಯವರು ಕೆಲಸ ಮಾಡಲು ಹಿಂದೇಟಾಕುವಂತಾಗಿದೆ ಎಂದು ಗ್ರಾ.ಪಂ ಮಾಜಿ ಸದಸ್ಯ ರಮೇಶ್ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ