ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯವೇ ಮುಖ್ಯವಾಗಿದ್ದು, ಯೋಗಾಭ್ಯಾಸ ಮಾಡುವುದರಿಂದ ದೈನಂದಿನ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳುವ ಮೂಲ ನಮ್ಮ ಬದುಕನ್ನು ಹಸನುಗೊಳಿಸಿಕೊಳ್ಳಣ ಎಂದು ಶಿಕ್ಷಕ ಹೆಚ್.ಪಿ.ಜಗದೀಶ್ ತಿಳಿಸಿದರು.
ಹುಳಿಯಾರಿನ ಕನಕದಾಸ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖರ್ ಅವರ ಮನೆಯಲ್ಲಿ ಕನ್ನಡಸಾಹಿತ್ಯ ಪರಿಷತ್ ವತಿಯಿಂದ ಅಯೋಜಿಸಿದ್ದ ಮನೆಮನೆಗಳಲ್ಲಿ ಕನ್ನಡ ಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ "ಯೋಗದಿಂದ ಆರೋಗ್ಯ" ವಿಷಯವನ್ನು ಕುರಿತು ಅವರು ಉಪನ್ಯಾಸ ನೀಡಿದರು.
ಯೋಗಪಿತಾಮಹರೆನಿಸಿದ ಪತಂಜಲಿಯವರು ತಿಳಿಸಿರುವಂತೆ ಅಷ್ಟಾಂಗ ಯೋಗಗಳನ್ನು ಕುರಿತಂತೆ ವಿವರಣೆ ನೀಡಿದರು ಕಾಯೇನ ವಾಚಾ ಮನಸಾ ಎಂಬ ತ್ರಿಕರಣಗಳಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.
ದಬ್ಬಗುಂಟೆ ಪ್ರೌಢಶಾಲೆಯ ಶಿಕ್ಷಕ ಟಿ.ನಾಗೇಂದ್ರಪ್ಪ ಅಧ್ಯಕ್ಷತೆವಹಿಸಿ ಮಾತನಾಡಿದರ್.ಹುಟ್ಟಿದ್ದ ಮಕ್ಕಳು ಮುಂದೆ ಹೇಗೆ ಸಮಾಜದಲ್ಲಿ ಬಾಳಬೇಕೆಂಬುದನ್ನು ತಾಯಿಯೊಬ್ಬಳು ತನ್ನ ಎದೆಹಾಲುಣಿಸುವಾಗ ಹೇಳುವ ನುಡಿಗಳ ಬಗ್ಗೆ ತಿಳಿಸಿದರು. ಶೈಲಜಾ ಪ್ರಾರ್ಥಿಸಿ, ಚಂದ್ರಶೇಖರ್ ಸ್ವಾಗತಿಸಿ, ನಾರಾಯಣಪ್ಪ ನಿರೂಪಿಸಿ, ಯಲ್ಲಪ್ಪ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ