ಹುಳಿಯಾರು ಹೋಬಳಿ ಕರ್ನಾಟಕ ರಕ್ಷಣಾ ವೇದಿಯ ಸಂಚಾಲಕ ಹಾಗೂ ಸ್ನೇಹಜೀವಿ ಹೋಟೆಲ್ ನ ಲಿಂಗಪ್ಪನಪಾಳ್ಯದ ಬೀರಪ್ಪ(೪೩) ಬುಧವಾರ ಮುಂಜಾನೆ ಕೊನೆಯುಸಿರೆಳೆದರು.
ಪಟ್ಟಣದಲ್ಲಿ ಸ್ನೇಹಜೀವಿ ಹೆಸರಿನ ಹೋಟೆಲ್ ನಡೆಸುತ್ತಿದ್ದ ಈತ ಬಸ್ ಏಜೆಂಟರ್ ಸಹ ಆಗಿದ್ದು ಜನರೊಂದಿಗೂ ಸಹ ಸ್ನೇಹಜೀವಿಯಾಗಿದ್ದರು. ದುರ್ಗಾಪರಮೇಶ್ವರಿ ದೇವಸ್ಥಾನದ ಗುಂಚಿಗೌಡರಾಗಿದ್ದ ಈತ ಕೆಂಚಮ್ಮನ ದೇವಸ್ಥಾನ ಸಮಿತಿಯ ಸದಸ್ಯರಾಗಿ ಅಲ್ಲದೆ ಕರ್ನಾಟಕ ರಕ್ಷಣಾ ವೇದಿಯ ಹೋಬಳಿ ಘಟಕದಲ್ಲಿ ಗೌರವಾಧ್ಯಕ್ಷರಾಗಿ ಸಕ್ರಿಯರಾಗಿದ್ದರು .ಕಳೆದ ರಾತ್ರಿ ಅಸ್ವಸ್ಥರಾದ ಇವರನ್ನು ತುಮಕೂರಿನ ಸಿದ್ದಾರ್ಥ ಆಸ್ಪತ್ರೆ ಕರೆದೊಯ್ದರು ಸಹ ಫಲಕಾರಿಯಾಗದೆ ಮುಂಜಾನೆ ಅಸುನೀಗಿದರು. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸ್ವಗ್ರಾಮ ಲಿಂಗಪ್ಪನಪಾಳ್ಯದಲ್ಲಿ ಅಂತಿಮಸಂಸ್ಕಾರ ನಡೆಯಿತು. ಖಾಸಗಿ ಬಸ್ ಏಜೆಂಟರ್ ಸೇವಾ ಛಾರಿಟಬಲ್ ಟ್ರಸ್ಟ್ ನಿಂದ ಮೃತರ ಅಂತಿಮ ಸಂಸ್ಕಾರಕ್ಕೆ ಮೂರು ಸಾವಿರರೂ ನೆರವು ನೀಡಲಾಯಿತು. ಅನೇಕ ಗಣ್ಯರು ಸೇರಿದಂತೆ ದೇವಸ್ಥಾನ ಸಮಿತಿಯವರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಪಂಚಾಯ್ತಿ ಸದಸ್ಯರುಗಳು ಮೃತರ ಅಂತಿಮ ದರ್ಶನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ