ಹುಳಿಯಾರು: ಹೋಬಳಿ ಹೊಯ್ಸಳಕಟ್ಟೆ ಜಿ.ಪಂ ಸದಸ್ಯೆ ನಿಂಗಮ್ಮ ಅವರ ಪತಿ ವೈ.ಕೆ.ರಾಮಯ್ಯ ಬರಕನಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಂತ ಊರಾದ ಎರೆಹಳ್ಳಿ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿ ಮೀಸಲು ಸ್ಥಾನದಿಂದ ೨೦೬ ಮತಗಳನ್ನು ಪಡೆದು ಗ್ರಾ.ಪಂ.ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಇದೇ ಕ್ಷೇತ್ರದಿಂದ 2 ಬಾರಿ ಸದಸ್ಯರಾಗಿ ಒಮ್ಮೆ ಗ್ರಾ.ಪಂ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಹೆಂಡತಿ ನಿಂಗಮ್ಮ ಜಿ.ಪಂ.ಸದಸ್ಯೆಯಾಗಿದ್ದರೂ ಸಹ ರಾಮಯ್ಯ ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕಿಳಿಯುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದರು. ತಾವು ಈ ಹಿಂದೆ ಸದಸ್ಯರಾಗಿ, ಅಧ್ಯಕ್ಷರಾಗಿ ಮಾಡಿದ ಕಾರ್ಯವನ್ನು ಮೆಚ್ಚಿದ ಮತದಾರರು ತಮ್ಮನ್ನು ಮತ್ತೊಮ್ಮೆ ಆಯ್ಕೆಯಾಡಿದ್ದಾರೆ. ಅವರ ನಂಬಿಕೆಗೆ ತಕ್ಕಂತೆ ಗ್ರಾಮದ ಅಭಿವೃದ್ದಿ ಕಾರ್ಯಗಳನ್ನು ಮಾಡುವುದಾಗಿ ರಾಮಯ್ಯ ತಿಳಿಸುತ್ತಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ