ಹುಳಿಯಾರು ಗ್ರಾಮ ಪಂಚಾಯ್ತಿಯ ೫ ನೇ ಬ್ಲಾಕ್ ನ ಮತಎಣಿಕೆಯಲ್ಲಿ ಗೊಂದಲಉಂಟಾಗಿ ನಂತರ ಲಾಟರಿ ಮೂಲಕ ಬಿಸಿಎಂ-ಎ ಮೀಸಲು ಸ್ಥಾನದ ಅಭ್ಯರ್ಥಿಯ ಆಯ್ಕೆ ನಡೆಯಿತು.
೫ ನೇಬ್ಲಾಕ್ ನ ಬಿಸಿಎಂ-ಎ ಮೀಸಲು (೧ ಸ್ಥಾನಕ್ಕೆ) ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ದಯಾನಂದ್ ಹಾಗೂ ಜಹೀರ್ ಸಾಬ್ ಇಬ್ಬರಿಗೂ ತಲಾ ೪೧೯ ಸಮ ಮತಗಳು ಬಂದಿದ್ದವು. ಒಟ್ಟು ೮೯೨ ಮತದಾನವಾಗಿದ್ದು ೨ ಮತಪತ್ರಗಳು ಕಡಿಮೆಯಾಗಿವೆ ಎಂಬುದು ಗೊಂದಲಕ್ಕೆ ಕಾರಣವಾಗಿತ್ತು. ನಂತರ ಅಧಿಕಾರಿಗಳು ಮತ್ತೊಮ್ಮೆ ಮತಪತ್ರಗಳನ್ನು ಎಣಿಕೆ ಮಾಡಿದಾಗ ಸರಿಯಾಗಿದ್ದವು. ಮತಪತ್ರಗಳು ಸರಿಯಾಗಿವೆ ಹಾಗೂ ಮತಎಣಿಕೆಯೂ ಸರಿಯಾಗಿದ್ದು ಇಬ್ಬರಿಗೂ ಸಮಾನ ಮತಗಳು ಬಂದಿರುವುದನ್ನು ಖಚಿತ ಮಾಡಿಕೊಂಡ ಚುನಾವಣಾಧಿಕಾರಿಗಳು ಲಾಟರಿ ಮೂಲಕ ಆಯ್ಕೆಗೆ ಮುಂದಾದರು. ಸಮಾನ ಮತಗಳನ್ನು ಪಡೆದ ದಯಾನಂದ್ ಹಾಗೂ ಜಹೀರ್ ಸಾಬ್ ಇಬ್ಬರಿಗೆ ಲಾಟರಿ ನಡೆದು ಲಾಟರಿಯಲ್ಲಿ ದಯಾನಂದ್ ಜಯಶೀಲರೆಂದು ಚುನಾವಣಾಧಿಕಾರಿ ಘೋಷಿಸಿದರು. ಈ ಬಗ್ಗೆ ಅಸಮಾಧಾನಗೊಂಡ ಜಹೀರ್ ಸಾಬ್ ಮತಎಣಿಕೆ ಕೇಂದ್ರದಲ್ಲಿಯೇ ಧರಣಿಗೆ ಮುಂದಾದರು. ಆದರೆ ಚುನಾವಣಾಧಿಕಾರಿಗಳು ಮತಎಣಿಕೆಯಲ್ಲಾಗಲಿ, ಲಾಟರಿ ಮಾಡುವಲ್ಲಾಗಲಿ ಯಾವುದೇ ಗೊಂದಲವಾಗಿಲ್ಲವೆಂದು ಜಹೀರ್ ಸಾಬ್ ಅವರ ಆರೋಪವನ್ನು ಕೈಬಿಟ್ಟಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ