ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಗ್ರಾ.ಪಂ.ನ ಒಂದನೇ ಬ್ಲಾಕ್ ನಿಂದ ಸದಸ್ಯರಾಗಿ ಆಯ್ಕೆಯಾದ ಎಲ್.ಆರ್.ಚಂದ್ರಶೇಖರ್ ಹಾಗೂ ಎಂ.ಗಣೇಶ್ ಅವರನ್ನು ಅಭಿನಂದಿಸುವ ನಿಟ್ಟಿನಲ್ಲಿ ಪಟ್ಟಣದ ಆರ್ಯವೈಶ್ಯ ಮಂಡಳಿಯವರು ನಾಳೆ(ತಾ.೨೮) ಭಾನುವಾರ ಸಂಜೆ ವಾಸವಿ ಕಲ್ಯಾಣ ಮಂದಿರದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದಾರೆ.
ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಎಸ್.ನಟರಾಜ್ ಗುಪ್ತ ಅಧ್ಯಕ್ಷತೆವಹಿಸಲಿದ್ದು, ಸಮಾಜಸೇವಕ ಕೊರಟಗೆರೆಯ ಸಂಪಂಗಿಕೃಷ್ಣಯ್ಯ ಅಭಿನಂದನಾ ವಾಚನ ಮಾಡಲಿದ್ದಾರೆ. ರಾಜ್ಯ ಆರ್ಯವೈಶ್ಯ ಮಹಾಸಭಾದ ತುಮಕೂರು ಜಿಲ್ಲಾಸಮಿತಿಯ ಅಧ್ಯಕ್ಷ ಬಾಗೇಪಲ್ಲಿ ಎಸ್.ನಟರಾಜ್, ನಿರ್ದೇಶಕರಾದ ಹೆಚ್.ವಿ.ಗೋವಿಂರಾಜು ,ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಆರ್.ಲಕ್ಶ್ಮಿಕಾಂತ್ ಸೇರಿದಂತೆ ಇತರರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಭಿನಂದನಾ ಸಮಾರಂಭಕ್ಕೆ ಒಂದನೇ ಬ್ಲಾಕ್ ನ ಮತದಾರರು ಹಾಗೂ ಸಾರ್ವಜನಿಕರು ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ