ಹುಳಿಯಾರು ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕೆಂಕೆರೆ ಗ್ರಾಮ ಪಂಚಾಯ್ತಿ ಒಟ್ಟು ೧೭ ಸ್ಥಾನ ಹೊಂದಿದ್ದು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನ ಬಿಸಿಎಂ-ಬಿ ವರ್ಗದ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದೆ.
ಕೆಂಕೆರೆ ಪಂಚಾಯ್ತಿಯು ಒಟ್ಟು ೫ ಬ್ಲಾಕ್ ಗಳಾಗಿ ವಿಂಗಡಣೆಯಾಗಿದ್ದು ೮ ಜನ ಮಹಿಳೆಯರು ಆರಿಸಿಬಂದಿದ್ದು ಅದರಲ್ಲಿ ನಾಲ್ವರು ಬಿಸಿಎಂ-ಬಿ ವರ್ಗದವರಾದರೆ ಇಬ್ಬರು ಬಿಸಿಎಂ-ಅ ವರ್ಗದವರು ಹಾಗೂ ಇಬ್ಬರು ಪರಿಶಿಷ್ಟಜಾತಿಯವರಾಗಿದ್ದಾರೆ.
.ಬಿಸಿಎಂ-ಬಿ ವರ್ಗಕ್ಕೆ ಅಧ್ಯಕ್ಷ ಸ್ಥಾನ ಬಂದಿದ್ದು ಹಾಲಿ ಗೆದ್ದಿರುವ ಮಹಿಳೆಯರಲ್ಲಿ ಬಿಸಿಎಂ-ಬಿ ಯಿಂದ ಗೆದ್ದಿರುವ ಮಹಿಳೆ ಒಬ್ಬರೇ ಆಗಿದ್ದರೂ ಸಹ ನಿಯಮದಂತೆ ಈ ವರ್ಗಕ್ಕೆ ಸೇರಿ ಸಾಮಾನ್ಯ ಮಹಿಳೆ ಸ್ಥಾನದಿಂದಲೂ ಗೆದ್ದು ಬಂದಿದ್ದರೂ ಸಹ ಬಿಸಿಎಂ-ಬಿ ಯಿಂದಲೂ ಸ್ಪರ್ಧಿಸುವ ಅವಕಾಶವಿರುವುದರಿಂದ ಇವರುಗಳ ಸಂಖ್ಯೆ ಒಟ್ಟು ನಾಲ್ಕಾಗಿದೆ. ೫ ನೇ ಬ್ಲಾಕ್ ನಿಂದ ಗೆದ್ದಿರುವ ಜಯಮ್ಮ, ೧ನೇ ಬ್ಲಾಕ್ ನಲ್ಲಿ ಆಶಾ, ೨ನೇ ಬ್ಲಾಕ್ ನಲ್ಲಿ ವಿಜಯಕುಮಾರಿ ಹಾಗೂ ೪ನೇ ಬ್ಲಾಕ್ ನಲ್ಲಿ ಮಂಗಳಮ್ಮ ಇವರುಗಳು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಪಂಚಾಯ್ತಿಯ ಒಟ್ಟು ೧೭ ಸದಸ್ಯರ ಪೈಕಿ ಹೆಚ್ಚು ಮಂದಿ ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದರೂ ಸಹ ಅವರೊಳಗೆ ಮೂಲ ಬಿಜೆಪಿ ಹಾಗೂ ಕೆಜೆಪಿ ಎರಡು ಗುಂಪುಗಳನ್ನು ಮಾಡಿಕೊಂಡಿರುವುದರಿಂದ ತಿಕ್ಕಾಟ ಕಂಡುಬಂದಿದ್ದು ಯಾರಿಗೆ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬುದು ಕೌತುಕತೆ ಉಂಟು ಮಾಡಿದೆ. ಬಿಜೆಪಿ ಬೆಂಬಲಿತ ಆಶಾ ಅವರನ್ನು ಮೊದಲು ಅಧ್ಯಕ್ಷರನ್ನಾಗಿ ಮಾಡಿ ನಂತರ ೨೦ ತಿಂಗಳಂತೆ ಉಳಿದವರಿಗೆ ಅಧ್ಯಕ್ಷ ಸ್ಥಾನದ ಹಂಚಿಕೆಯ ಮಾತುಗಳು ಸಹ ಕೇಳಿಬರುತ್ತಿವೆ.
ಕೆಲ ಸದಸ್ಯರು ಇದರ ಗೋಜಿಗೆ ಹೋಗದೆಯಿದ್ದು ಅಧ್ಯಕ್ಷರ ಆಯ್ಕೆಯ ದಿನಾಂಕದಂದು ನೋಡೋಣ ಎನ್ನುತ್ತಿದ್ದಾರೆ. ಎಲ್ಲೆಡೆ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಕುರ್ಚಿ ಹಿಡಿಯಲು ಬೆಂಬಲಿಗರನ್ನು ಪ್ರವಾಸ ಮತ್ತೊಂದರಲ್ಲಿ ತೊಡಗಿಕೊಂಡು ಬಿರುಸಿನ ಚಟುವಟಿಕೆ ಕಂಡುಬಂದರೆ ಇಲ್ಲಿ ಮಾತ್ರ ಯಾರಾದರೂ ಸರಿ ನಮ್ಮವರೆ ಆಗುತ್ತಾರಲ್ಲ ಎಂಬ ಮನೋಭಾವದಲ್ಲಿ ಕಾದುನೋಡುವ ತಂತ್ರಕ್ಕೆ ಶರಣಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ