ರಾಜ್ಯಾದ್ಯಂತ (ತಾ.೨) ಮಂಗಳವಾರ ೨ ನೇ ಹಂತದ ಗ್ರಾಮಪಂಚಾಯ್ತಿ ಚುನಾವಣೆಯ ಮತದಾನ ನಡೆಯಲಿದ್ದು ಹುಳಿಯಾರು ಗ್ರಾ.ಪಂ ಸೇರಿದಂತೆ ಹೋಬಳಿಯ ವಿವಿಧ ಗ್ರಾ.ಪಂ.ಗಳಲ್ಲಿ ಬೆಳಿಗ್ಗೆ ೭ ರಿಂದ ಸಂಜೆ ೫ ರವರೆಗೆ ಮತದಾನ ನಡೆಯಲಿದೆ.
ಹುಳಿಯಾರಿನ ಎಂಪಿಎಸ್ ಶಾಲೆಯ ಮತಕೇಂದ್ರಕ್ಕೆ ಬ್ಯಾಲೆಟ್ ಪೇಪರ್ ಹಾಗೂ ಬೂತ್ ಸಮೇತ ಸೋಮವಾರ ಆಗಮಿಸಿದ ಚುನಾವಣಾ ಸಿಬ್ಬಂದಿಗಳು. |
ಹುಳಿಯಾರು ಗ್ರಾ.ಪಂ.ನ ೧೩ ಬ್ಲಾಕ್ ಗಳಿಗೆ ೩೯ ಸದಸ್ಯರ ಆಯ್ಕೆಗಾಗಿ ೧೬೨ ಮಂದಿ ಚುನಾವಣಾ ಕಣದಲ್ಲಿದ್ದು ೧೪ ಮತಕೇಂದ್ರಗಳಲ್ಲಿ ಮತದಾನ ನಡೆಯಲಿದೆ.
ಪಟ್ಟಣದ ಎಂಪಿಎಸ್ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ ೩೫ ರಿಂದ ೪೪ ರವರೆಗಿದ್ದು ಇಲ್ಲಿ ೧ ನೇಬ್ಲಾಕ್ ನಿಂದ ೮ ನೇ ಬ್ಲಾಕ್ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಉರ್ದುಶಾಲೆಯ ಮತಕೇಂದ್ರದಲ್ಲಿ ಮತಗಟ್ಟೆ ಸಂಖ್ಯೆ ೪೬ ಮತ್ತು ೪೬ ರಲ್ಲಿ ೯ ಹಾಗೂ ೧೦ ನೇ ಬ್ಲಾಕ್ ನವರು ಮತಚಲಾಯಿಸಬಹುದಾಗಿದೆ. ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ಮತಕೇಂದ್ರದ ಮತಗಟ್ಟೆ ಸಂಖ್ಯೆ ೪೭ ಮತ್ತು ೪೮ ರಲ್ಲಿ ೧೧ ನೇ ಬ್ಲಾಕ್ , ೧೨ನೇ ಬ್ಲಾಕ್ ಹಾಗೂ ೧೩ ನೇ ಬ್ಲಾಕ್ ನ ಮತದಾನ ನಡೆಯಲಿದೆ. ಮತದಾರರು ಮತಗಟ್ಟೆಗೆ ಬರುವಾಗ ತಪ್ಪದೇ ಎಪಿಕ್ ಗುರ್ತಿನ ಚೀಟಿಯನ್ನು ತರಬೇಕು ಹಾಗೂ ಇಲ್ಲದಿದ್ದಲ್ಲಿ ಪೋಟೋ ಸಹಿತ ಇತರ ಗುರ್ತಿನ ಚೀಟಿಗಳನ್ನು ತಂದು ತೋರಿಸುವ ಮುಲಕ ಮತದಾನ ಮಾಡಬಹುದಾಗಿದೆ ಎಂದು ಗ್ರಾಮಲೆಕ್ಕಾಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ