ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಕಳೆದ ೨೦ ವರ್ಷದಿಂದ ಬತ್ತಿಹೋಗಿದ್ದ ಪುರಾತ ಕಾಲದ ಬಾವಿಗೆ ಇದೀಗ ನೀರು ಬಂದಿದ್ದು ಗ್ರಾಮದ ಜನರಲ್ಲಿ ಅಶ್ಚರ್ಯದ ಜೊತೆಗೆ ಸಂತಸವನ್ನುಂಟು ಮಾಡಿದೆ.
ಈ ಬಾವಿ ಪುರಾತನಕಾಲದ ಬಾವಿಯಾಗಿದ್ದು ಸಿಹಿನೀರಿನ ಬಾವಿ ಎಂದು ಪ್ರಸಿದ್ದಿ ಪಡೆತಿತ್ತು. ಬಾವಿ ಬತ್ತುವುದಕ್ಕು ಮೊದಲು ಕೆಂಕೆರೆ ಗ್ರಾಮದ ಪ್ರತಿ ಮನೆಯವರು ಈ ಬಾವಿಯಿಂದಲೇ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರು. ಗ್ರಾಮದೇವತೆ ಕಾಳಮ್ಮನ ಜಾತ್ರೆಯ ಅಂಗವಾಗಿ ನಡೆಯುವ ಅಗ್ನಿಕೊಂಡೋತ್ಸವ ಈ ಬಾವಿ ಬಳಿಯೇ ನಡೆದು ನಂತರ ಈ ಬಾವಿನೀರಿಂದಲೇ ಗಂಗಾಸ್ನಾನ ಮಾಡುತ್ತಿದ್ದರು. ಕಳಸ ಮಹೋತ್ಸವದಂದು ಪಟ್ಟದಕಳಸವನ್ನು ಇಂದಿಗೂ ಸಹ ಈ ಬಾವಿಹತ್ತಿರವೇ ಸ್ಥಾಪಿಸಿ ನಡೆಸಿಕೊಂಡು ಬರುತ್ತಿದ್ದಾರೆ.
ಕಳೆದ ೨೦ ವರ್ಷದ ಹಿಂದೆ ಏಕಾಏಕಿ ಈ ಬಾವಿಯಲ್ಲಿ ನೀರು ಬತ್ತಿದ್ದು ಜನರಲ್ಲಿ ಆತಂಕವನ್ನು ಉಂಟುಮಾಡಿತ್ತು. ಈ ಬಗ್ಗೆ ಗ್ರಾಮದೇವತೆಯನ್ನು ಕೇಳಿ ಹಲವಾರುಬಾರಿ ಬಾವಿಯ ಪುಣ್ಯಾಹಕಾರ್ಯ ಮಾಡಿದ್ದರೂ ಸಹ ನೀರು ಮಾತ್ರ ಬಂದಿರಲಿಲ್ಲ. ಇದನ್ನು ಕಂಡ ಗ್ರಾಮಸ್ಥರು ಬಾವಿ ಬತ್ತಿರುವುದು ಗ್ರಾಮಕ್ಕೆ ಶ್ರೇಯಸ್ಸಲ್ಲ ಇದರಿಂದ ಹೆಚ್ಚು ತೊಂದರೆಗಳಾಗಬಹುದು ಹಾಗೂ ಬರಗಾರವೂ ಉಂಟಾಗಬಹುದು ಎಂಬ ಭಯದಲ್ಲಿದ್ದರು. ಬಾವಿ ಬತ್ತಿದಾಗಿನಿಂದ ಈ ಭಾಗದಲ್ಲಿ ಉತ್ತಮ ಮಳೆಯಾಗಿಲ್ಲ ಸದಾ ನೀರು ತುಂಬಿರುತ್ತಿದ್ದ ಕೆರೆಗಳು ಬರಡಾಗಿದ್ದವು. ಅಲ್ಲದೆ ಕಳೆದ ಎರಡು ಮೂರ್ವದ ಹಿಂದೆ ಬರಗಾಲ ಉಂಟಾಗಿ ಕುಡಿಯುವ ನೀರಿಗೂ ಜನ ಕಿ.ಮೀ ದೂರ ಹೋಗುವಂತಾಗಿತ್ತು. ಈರೀತಿ ಆಗುವುದಕ್ಕೆ ಸಿಹಿನೀರು ಬಾವಿ ಬತ್ತಿದ್ದೆ ಕಾರಣ ಎಂದು ಜನ ಪ್ರಬಲವಾಗಿ ನಂಬಿದ್ದರು.
ಇದೀಗ ಈ ಬಾವಿಯಲ್ಲಿ ನಾಲ್ಕೈದು ಅಡಿಯಷ್ಟು ನೀರು ಬಂದಿರುವುದು ಜನರಲ್ಲಿ ಹೆಚ್ಚು ಸಂತಸ ತಂದಿದ್ದು ಕೆಂಕೆರೆಗೆ ಉತ್ತಮ ಕಾಲ ಬಂತು ಮುಂದಿನ ದಿನಗಳಲ್ಲಿ ಹೆಚ್ಚು ಮಳೆ , ಬೆಳೆಯಾಗುವ ನಿರೀಕ್ಷೆಹೊಂದಿದ್ದಾರೆ. ಬಾವಿಗೆ ನೀರು ಬಂದಿದೆ ಎಂಬ ಸುದ್ದಿ ಜನರಬಾಯಿಂದ ಬಾಯಿಗೆ ಗ್ರಾಮದ ತುಂಬೆಲ್ಲಾ ಹರಡಿ ಗ್ರಾಮದ ಸಾಕಷ್ಟು ಮಂದಿ ಬಾವಿ ಹತ್ತಿರ ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಕೆಲವರು ಪೂಜೆ ಸಹ ಸಲ್ಲಿಸಿದ್ದಾರೆ.
--------
ಎಷ್ಟೇ ಬರಗಾಲ ಬಂದರೂ ಸಹ ಸಿನೀರುಬಾವಿ ಮಾತ್ರ ಬತ್ತದೆ ನಮ್ಮೂರ ಜನಕ್ಕೆ ನೀರು ನೀಡುತಿತ್ತು ಎಂದು ನಮ್ಮ ಅಜ್ಜ ಹೇಳುತ್ತಿದ್ದರು ಅದರೆ ಅದೇಕೋ ಏನೋ ಕಳೆದ ೨೦ ವರ್ಷದ ಹಿಂದೆ ಬಾವಿ ಬತ್ತಿತ್ತು, ಇದೀಗ ಮತ್ತೆ ನೀರು ಬಂದಿರುವುದು ಹರ್ಷತಂದಿದ್ದು ಮತ್ತೆ ಯಾವತ್ತೂ ಬತ್ತದೆ ಇರಲೆಂದು ಆ ದೇವರಲ್ಲಿ ಪ್ರಾರ್ಥಿಸುವೆ : ಉಪರಿಗೈಯ್ಯನ ಕುಮಾರಣ್ಣ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ