ಇತ್ತೀಚೆಗೆ ಹೋಬಳಿಯಾದ್ಯಂತ ಆಲಿಕಲ್ಲು ಮಳೆ ಬಿದ್ದು ಹೆಸರು ಬೆಳೆ ಹಾನಿಗೀಡಾದ ಹಿನ್ನಲೆಯಲ್ಲಿ ಹೋಬಳಿಯ ಮೇಲನಹಳ್ಳಿ ಗ್ರಾಮಕ್ಕೆ ಸಹಾಯಕ ಕೃಷಿ ಅಧಿಕಾರಿ ಎಚ್.ಹೊನ್ನದಾಸೇಗೌಡ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಮೇಲನಹಳ್ಳಿ ಹಾಗೂ ಗುರುವಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಮಳೆ ಬಿದ್ದು ಹೆಸರು ಬೆಳೆಗೆ ಹಾನಿಯಾಗಿತ್ತು. ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಮಾತನಾಡಿ ಸುಮಾರು 50 ಎಕರೆ ಪ್ರದೇಶದಲ್ಲಿ ಕಾಳು ಕಟ್ಟುವ ಹಾಗೂ ಹೂ ಬಿಡುವ ಹಂತದಲ್ಲಿದ್ದ ಹೆಸರು ಹಾನಿಗೊಳಗಾಗಿದೆ. ಈ ಬಗ್ಗೆ ಸಂಪೂರ್ಣ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಕೆಲವು ಕಡೆ ಹೊಲಗಳಲ್ಲಿ ಹೆಚ್ಚು ನೀರು ನಿಂತು ಹೆಸರು ಬೆಳೆಗೆ ಹಾನಿಯಾಗಿದೆ ಎಂದರು. ಈ ಬಾರಿ ಉತ್ತಮ ಬೆಳೆ ಬರುತ್ತದೆಂದು ನಂಬಿದ ಹೆಚ್ಚಿನ ರೈತರಿಗೆ ಆಲಿಕಲ್ಲು ಮಳೆ ಆಘಾತವನ್ನುಂಟು ಮಾಡಿದ್ದು ಸರ್ಕಾರ ಪರಿಹಾರ ನೀಡಲು ಮುಂದಾಗಬೇಕಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ