ಹುಳಿಯಾರು ಹೋಬಳಿ ಕೆಂಕೆರೆ ಮಜುರೆ ದಮ್ಮಡಿಹಟ್ಟಿಯ ಶ್ರೀಕಾಟಂಲಿಂಗೇಶ್ವರಸ್ವಾಮಿ ಹಾಗೂ ಶ್ರೀ ಹೊರಕೆರೆ ರಂಗನಾಥಸ್ವಾಮಿಯ ಏಕಾದಶಿ ಆಚರಣೆ (ತಾ.೨೮) ಭಾನುವಾರ ಸಂಜೆ ನಡೆಯಲಿದೆ.
ಏಕಾದಶಿ ಅಂಗವಾಗಿ ಗ್ರಾಮದೇವತೆ ಕೆಂಕೆರೆ ಕಾಳಮ್ಮ, ದಮ್ಮಡಿಹಟ್ಟಿಯ ಈರಬೊಮ್ಮಕ್ಕದೇವಿಯನ್ನು ಕರೆದುತಂದು , ಸಂಜೆ ಕುರಿಹಟ್ಟಿಯ ಆಂಜನೇಯಸ್ವಾಮಿಯ ದೇವಾಲಯದಿಂದ ದಾಸಪ್ಪಗಳ ಸಮೇತ ದೊಡ್ಡಬಿದರೆ ಪಾತಲಿಂಗೇಶ್ವರಸ್ವಾಮಿ ವೀರಗಾಸೆ ಕುಣಿತದೊಂದಿಗೆ ಮೆರವಣಿ ನಡೆಯಲಿದೆ. ನಂತರ ತುಪ್ಪದಪೂಜೆ, ಎಡೆಪೂಜೆ,ಮಂಗಳಾರತಿ ನಡೆದ ನಂತರ ಪನಿವಾರ ವೀತರಣೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ. ಸೋಮವಾರ ಬೆಳಿಗ್ಗೆ ದೊಡ್ಡಮಣೇವು ಹಾಕುವ ಕಾರ್ಯ ನಡೆದು ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ವಿತರಣೆ ನಡೆಯಲಿರುವುದಾಗಿ ದೇವಾಲಯ ಸಮಿತಿಯ ಗಜಣ್ಣ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ