ಹುಳಿಯಾರು : ಹೋಬಳಿ ಕಂಪನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ (ತಾ.೨೨) ಸೋಮವಾರ ಆಂಜನೇಯಸ್ವಾಮಿಯ ಕುಂಭಾಭಿಷೇಕ ಕಾರ್ಯ ನಡೆಯಲಿದೆ.
ಇದರ ಅಂಗವಾಗಿ ಭಾನುವಾರ ಸಂಜೆ ಗ್ರಾಮದೇವತೆ ಕೆಂಕೆರೆ ಕಾಳಮ್ಮ, ದಮ್ಮಡಿಹಟ್ಟಿಈರಬೊಮ್ಮಕ್ಕದೇವಿ,ಗೊಲ್ಲರಹಟ್ಟಿ ಕರಿಯಮ್ಮ ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆಯಲಿದೆ. ಸೋಮವಾರ ಮುಂಜಾನೆ ಗಂಗಾಪೂಜೆ,ಪೂರ್ಣಕುಂಭಪೂಜೆ,ಮಹಾಗಣಪತಿ ಪೂಜೆ ನಡೆದು ನಂತರ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಮಲ್ಲಿಕಾರ್ಜುನದೇಶಿಕೇಂದ್ರ ಮಹಾಸ್ವಾಮಿ ಅವರಿಂದ ಆಂಜನೇಯಸ್ವಾಮಿಗೆ ಕುಂಭಾಭಿಷೇಕ ನಡೆದು ನಂತರ ನೂತನ ಶಿಖರಕ್ಕೆ ಅಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ ನಡೆಯಲಿದೆ. ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ಆಂಜನೇಯಸ್ವಾಮಿ ಛಾರಿಟಬಲ್ ಟ್ರಸ್ಟ್ ನವರು ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ