ಹುಳಿಯಾರು ಹೋಬಳಿಯ ಕೆಂಕೆರೆ, ದಸೂಡಿ,ದೊಡ್ಡಎಣ್ಣೆಗೆರೆ,ಕೋರಗೆರೆ,ತಿರುಮಲಾಪುರ, ಚೌಳಕಟ್ಟೆ ಗ್ರಾಮ ಪಂಚಾಯ್ತಿಗಳಿಗೆ ನೂತನ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ನಡೆಯಲಿದೆ.
ಕೆಂಕೆರೆ ಗ್ರಾ.ಪಂಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಹೊನ್ನದಾಸೇಗೌಡ, ದಸೂಡಿ ಗ್ರಾ.ಪಂ.ಯಲ್ಲಿ ಇಓ ಕೃಷ್ಣಮೂರ್ತಿ,ದೊಡ್ಡಎಣ್ಣೆಗೆರೆ ಗ್ರಾ.ಪಂ.ನಲ್ಲಿ ಬಿಇಓ ಕೃಷ್ಣಮೂರ್ತಿ,ಕೋರಗೆರೆ ಗ್ರಾ.ಪಂ.ನಲ್ಲಿ ಎಂಜಿನಿಯರ್ ದೇವರಾಜು,ತಿರುಮಲಾಪುರ ಗ್ರಾ.ಪಂ.ನಲ್ಲಿ ಪಶುಇಲಾಖೆಯ ಶಶಿಕುಮಾರ್,ಚೌಳಕಟ್ಟೆ ಗ್ರಾ.ಪಂ.ನಲ್ಲಿ ಲೋಕೋಪಯೋಗಿ ಇಲಾಖೆಯ ಗಂಗಾಧರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಬೆಳಿಗ್ಗೆ ೧೦ ರಿಂದ ೧೧ ಗಂಟೆವರೆಗೆ ಕಾಲಾವಕಾಶವಿದ್ದು, ಮಧ್ಯಾಹ್ನ ೧ ಗಂಟೆಯಿಂದ ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ