ಹುಳಿಯಾರು ಪಟ್ಟಣದ ಅನಂತಶಯನ ಶ್ರೀ ರಂಗನಾಥಸ್ವಾಮಿಗೆ ಮಂಗಳವಾರದಂದು ವಿಶೇಷವಾಗಿ ಅಮವಾಸ್ಯೆ ಪೂಜೆ ಜರುಗಿತು. ಪಟ್ಟಣದ ಆರ್.ಜಿ.ಸರ್ಕಲ್ ಗ್ರೂಪ್ಸ್ ಅವರ ಸೇವಾರ್ಥದಲ್ಲಿ ಸ್ವಾಮಿಯನ್ನು ಕೊಬ್ಬರಿ ತುರಿಯಿಂದ ಅಲಂಕರಿಸಿದ್ದು,
ಹುಳಿಯಾರಿನ ಅನಂತಶಯನ ಶ್ರೀರಂಗನಾಥಸ್ವಾಮಿಗೆ ಅಮವಾಸ್ಯೆ ಪೂಜೆ ಅಂಗವಾಗಿ ಮಾಡಿರುವ ಕೊಬ್ಬರಿ ತುರಿಅಲಂಕಾರ.
|
ಪಟ್ಟಣದ ಶೇಷಾದ್ರಿ ಭಜನಾ ಮಂಡಳಿಯವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮಹಾಮಂಗಳಾರತಿಯ ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು. ಆಗಮಿಸಿದ ಭಕ್ತರು ಸ್ವಾಮಿಗೆ ಮಾಡಿದ್ದ ಅಲಂಕಾರವನ್ನು ಕಣ್ತುಂಬಿಕೊಂಡರು. ಈ ವೇಳೆ ಆರ್.ಜಿ.ಸರ್ಕಲ್ ಗ್ರೂಪ್ಸ್ ನ ಪದಾಧಿಕಾರಿಗಳು, ದೇವಾಲಯ ಸಮಿತಿಯವರು ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ