ಹುಳಿಯಾರು ಗ್ರಾಮ ಪಂಚಾಯ್ತಿಯ ಈ ಬಾರಿಯ ಚುನಾವಣೆ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದು ಇಲ್ಲಿನ ೩ ನೇ ಬ್ಲಾಕ್ ನಲ್ಲಿ ಎಸ್.ಸಿ ಮಹಿಳೆ, ಬಿಸಿಎಂ-ಎ ಮಹಿಳೆ, ಸಾಮಾನ್ಯ ಮಹಿಳೆ ಸೇರಿ ಒಟ್ಟು ಮೂವರ ಆಯ್ಕೆಗಾಗಿ ೧೨ ಮಂದಿ ಮಹಿಳೆಯರು ಸ್ಪರ್ಧಿಸಿದ್ದಾರೆ.
ಬಿಸಿಎಂ-ಎ ಮೀಸಲು ಒಂದು ಸ್ಥಾನಕ್ಕೆ ಅಯಿಷ್ ಬಾನು,ಇಂದ್ರಮ್ಮ,ಹೆಚ್.ಎಸ್.ಗೀತಾ,ಜಹಿನ್ ತಾಜ್,ರಾಜಮ್ಮ,ರುಕ್ಸಾನಾಬಾನು ಸ್ಪರ್ಧಿಸಿದ್ದರೆ, ಎಸ್.ಸಿ.ಮೀಸಲು ಒಂದು ಸ್ಥಾನಕ್ಕೆ ಆಶಾ,ರಾಧಮ್ಮ,ರೇಣುಕಮ್ಮ ಕಣದಲ್ಲಿದ್ದಾರೆ,ಸಾಮಾನ್ಯ ಮಹಿಳೆಯ ಒಂದು ಸ್ಥಾನಕ್ಕೆ ಜಯಲಕ್ಷ್ಮಮ್ಮ, ನೂರ್ ಜಾನ್ ಬೀ,ಪರಿದಾಬಾನು ಕಣದಲ್ಲಿದ್ದು ಚುನಾವಣಾ ಕಣದಲ್ಲಿ ತಮ್ಮ ಪಾರುಪತ್ಯೆ ಮೆರೆಯುತ್ತಿದ್ದಾರೆ. ಮಹಿಳೆಯರಿಗೆ ಮೀಸಲಾತಿ ದೊರೆತರೂ ಸಹ ಪುರುಷರೇನು ಕೈ ಕಟ್ಟಿ ಕೂರದೆ ಮಹಿಳೆಯರು ಆಟಕ್ಕುಂಟು ಆದರೆ ಲೆಕ್ಕಕ್ಕೆಲ್ಲಾ ತಾವೇ ಎಂಬಂತೆ ಚುನಾವಣಾ ರಾಜಕೀಯ ಲೆಕ್ಕಚಾರದಲ್ಲಿ ಪ್ರಚಾರ ನಡೆಸಿದ್ದಾರೆ. ಮಹಿಳೆಯರು ಸಹ ತಮ್ಮ ಬ್ಲಾಕ್ ನ ಮನೆಮನೆಗಳಿಗೆ ಎಡತಾಕಿ ಮತಯಾಚಿಸಿದ್ದಾರೆ.
ಹುಳಿಯಾರಿನ ೧೩ ಬ್ಲಾಕ್ ಗಳ ಪೈಕಿ ೩ನೇ ಬ್ಲಾಕ್ ನಲ್ಲಿ ಮಹಿಳೆಯರಿಗೆ ಮೀಸಲಿರಿಸಿದ್ದು ಪುರುಷರಿಗೆ ಅವಕಾಶವಿಲ್ಲದಂತಾಗಿ, ಈ ಬ್ಲಾಕ್ ನಿಂದ ಕಣಕ್ಕಿಳಿಯುವ ಆಕಾಂಕ್ಷೆ ಹೊಂದಿದ್ದ ಪುರುಷರಿಗೆ ನಿರಾಸೆಯುಂಟಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ