ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯದ ಅಭಿವೃದ್ದಿಗೆ ಒತ್ತುನೀಡಿ ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆಯಿಂದ ಸಹಕಾರ ಸಂಘ ಸ್ಥಾಪನೆಗೆ ಚಾಲನೆ ನೀಡಲಾಗಿದೆ ಎಂದು ಮುಖ್ಯಪ್ರವರ್ತಕ ಎಂ.ವಿ.ಲೋಕೇಶ್ ತಿಳಿಸಿದರು.
ಮುಖ್ಯಪ್ರವರ್ತಕ ಎಂ.ವಿ.ಲೋಕೇಶ್ ,ವಿಪ್ರಹಿತರಕ್ಷಣಾ ವೇದಿಕೆಯ ಅಧ್ಯಕ್ಷ ನರೇಂದ್ರಬಾಬು, ಗೌರವಾಧ್ಯಕ್ಷ ಸಿ.ಡಿ.ರವಿ, ಶಿಸ್ತು ಸಮಿತಿ ಅಧ್ಯಕ್ಷ ಹು.ಕೃ.ವಿಶ್ವನಾಥ್ |
ಹುಳಿಯಾರಿನ ತಮ್ಮ ನಿವಾಸದಲ್ಲಿ ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದ ಸದಸ್ಯತ್ವ ಹಾಗೂ ಷೇರು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತಾಲ್ಲೂಕ್ ಬ್ರಾಹ್ಮಣ ಸಭಾ, ತಾಲ್ಲೂಕ್ ವಿಪ್ರ ಹಿತರಕ್ಷಣಾ ವೇದಿಕೆ ಹಾಗೂ ವಿಪ್ರ ಮಿತ್ರಕೂಟದ ವತಿಯಿಂದ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಸ್ಥಾಪಿಸಲಾಗುತ್ತಿರುವ ಸಹಕಾರಿ ಸಂಘಕ್ಕೆ ಸಮುದಾಯದ ಪ್ರತಿಯೊಬ್ಬರು ಸದಸ್ಯರಾಗುವ ಮೂಲಕ ಸಂಘದ ಏಳ್ಗೆಗೆ ಸಹಕರಿಸುವಂತೆ ಮನವಿ ಮಾಡಿದರು.
ಶ್ರೀಗಾಯತ್ರಿ ಪತ್ತಿನ ಸಹಕಾರ ಸಂಘದ ಸದಸ್ಯತ್ವ ಹಾಗೂ ಷೇರು ಸಂಗ್ರಹಣಾ ಕಾರ್ಯಕ್ಕೆ ಮುಖ್ಯಪ್ರವರ್ತಕ ಎಂ.ವಿ.ಲೋಕೇಶ್ ಚಾಲನೆ ನೀಡಿದರು. |
ಆರ್ಥಿಕವಾಗಿ ಹಿಂದುಳಿದ ಸಮುದಾಯದ ಸದಸ್ಯರಿಗೆ ಆರ್ಥಿಕ ನೆರವು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು, ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ತರಬೇತಿ ಮುಂತಾದ ಧ್ಯೇಯೋದ್ದೇಶಗಳನ್ನು ಸಂಘ ಹೊಂದಿದೆ ಎಂದರು. ಮುಂದಿನ ನಾಲ್ಕು ದಿನಗಳ ಕಾಲ ತಾಲ್ಲೂಕಿನ ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಲಿದ್ದು , ಪ್ರತಿಯೊಬ್ಬರು ಸಂಘದ ಸದಸ್ಯತ್ವ ಹೊಂದಲು ಮುಂದಾಗಬೇಕೆಂದರು.
ಮುಖ್ಯಪ್ರವರ್ತಕ ಎಂ.ವಿ.ಲೋಕೇಶ್ , ಗೌರವಾಧ್ಯಕ್ಷ ಸಿ.ಡಿ.ರವಿ, ಶಿಸ್ತು ಸಮಿತಿ ಅಧ್ಯಕ್ಷ ಹು.ಕೃ.ವಿಶ್ವನಾಥ್,ಕಾರ್ಯದರ್ಶಿ ಮಧುಸೂದನ್ |
ಹೆಚ್ಚಿನ ಮಾಹಿತಿಗಾಗಿ ೯೪೪೯೬೮೪೧೧೫, ೯೪೪೮೨೫೩೯೫೬ ಸಂಪರ್ಕಿಸಬಹುದಾಗಿದೆ.
ಈ ಸಮಯದಲ್ಲಿ ವಿಪ್ರಹಿತರಕ್ಷಣಾ ವೇದಿಕೆಯ ಅಧ್ಯಕ್ಷ ನರೇಂದ್ರಬಾಬು, ಗೌರವಾಧ್ಯಕ್ಷ ಸಿ.ಡಿ.ರವಿ, ಶಿಸ್ತು ಸಮಿತಿ ಅಧ್ಯಕ್ಷ ಹು.ಕೃ.ವಿಶ್ವನಾಥ್,ಕಾರ್ಯದರ್ಶಿ ಮಧುಸೂದನ್ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ