ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜೆಡಿಎಸ್ ನೊಂದಿಗೆ ಮೈತ್ರಿ ಬೇಡ: ಕಾಂಗ್ರೆಸ್ ಮುಖಂಡ ಸಾಸಲು ಸತೀಶ್

ಮುಂಬರುವ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಅವಕಾಶವಾದಿ ಜೆಡಿ.ಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ತಾ|| ಕಾಂಗ್ರೆಸ್ ಮುಖಂಡ ಸಾಸಲು ಸತೀಶ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.   ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಎರಡು ಪಕ್ಷಗಳ ಮೈತ್ರಿ ಮಾಡಿಕೊಳ್ಳುವುದರಿಂದ ಮುಂದೆ ನಡೆಯುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ ಎಂದ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳಿದ್ದು ಅಂಥವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.ಕಾಂಗ್ರೆಸ್ಸಿನಿಂದ ಯಾವುದೇ ಕಾರ್ಯಕರ್ತರು ವಿಧಾನ ಪರಿಷತ್ ಚುನಾವಣೆಗೆ ನಿಲ್ಲಿಸಿದರೆ ಜಿಲ್ಲೆಯ ಎಲ್ಲ ಕಾರ್ಯಕರ್ತರು ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಹುಳಿಯಾರಮ್ಮನ ಸನ್ನಿಧಿಯಲ್ಲಿ ವಿಜೃಂಭಣೆಯ ಕೃತಿಕೋತ್ಸವ

ಹುಳಿಯಾರು  ಪಟ್ಟಣದ ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ ಕೃತಿಕೋತ್ಸವ ಬುಧವಾರ ಸಂಜೆ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಕೃತಿಕೋತ್ಸವ ಅಂಗವಾಗಿ ಅಮ್ಮನವರಿಗೆ ವಿಪ್ರಮಹಿಳಾ ಸಂಘದಿಂದ ದೀಪಾರತಿ ಹಾಗೂ ಲಲಿತ ಸಹಸ್ರನಾಮ ಪಠಣ ನಡೆಯಿತು. ಕಾರ್ತಿಕ ಮಾಸದ ಕೃತಿಕಾ ನಕ್ಷತ್ರದ ದಿನ ಆಚರಿಸಲಾಗುವ ಕೃತಿಕೋತ್ಸವವು ಈ ಬಾರಿ ಲಕ್ಷ್ಮೀ ಸುಬ್ರಮಣ್ಯ ಅವರ ಸೇವಾರ್ಥದಲ್ಲಿ ನಡೆಯಿತು.ಅಮ್ಮನವರಿಗೆ ಅಭಿಷೇಕ,ಅರ್ಚನೆ ನಡೆಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಸಂಜೆ ಉತ್ಸವ ಮೂರ್ತಿಯನ್ನು ಅಲಂಕರಿಸಿ ವಾದ್ಯಮೇಳದೊಂದಿಗೆ ಹೊರಡಿಸಿ ಕರುಗ ಸುಡುವ ಕಾರ್ಯ ನಡೆಸಲಾಯಿತು.ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.ವಿಪ್ರ ಮಹಿಳೆಯರಿಂದ ಲಲಿತಾಸಹಸ್ರನಾಮ ಪಾರಾಯಣ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಸೀತಾರಾಮ ಪ್ರತಿಷ್ಠಾನದ ಕಾರ್ಯದರ್ಶಿ ಹು.ಕೃ.ವಿಶ್ವನಾಥ್, ವಿಪ್ರ ಸಂಘದಲೋಕೇಶಣ್ಣ,ರಾಜಣ್ಣ,ರಂಗನಾಥ ಪ್ರಸಾದ್,ಅಶ್ವತ್ಥ್,ಗುಂಡಣ್ಣ. ಸೇರಿದಂತೆ ಅಪಾರ ಸಂಖ್ಯೆ ಭಕ್ತಾಧಿಗಳು ಹಾಜರಿದ್ದು ಅಮ್ಮನವರ ಕೃತಿಕೋತ್ಸವವನ್ನು ಕಣ್ತುಂಬಿಕೊಂಡರು. ಗಾಂಧಿಪೇಟೆಯ ಕನ್ನಿಕಪರಮೇಶ್ವರಿ ದೇವಾಲಯದಲ್ಲಿ ಬಿ.ವಿ.ಶ್ರೀನಿವಾಸ್ ಸೇವಾರ್ಥದಲ್ಲಿ ಕನ್ನಿಕಾಪರಮೇಶ್ವರಿಗೆ ಹಾಗೂ ಬನಶಂಕರಿ ಮತ್ತು ಶ್ರೀ ಅನಂತಶಯನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಭಕ್ತಾಧಿಗಳಿಂದ ಅಲಂಕಾರ,ಪೂಜಾ ಕಾರ್ಯಗಳನ್ನು ನಡೆದು ಪಾಗು ಸುಡುವುದರ ಮೂಲಕ ಆ ಬೆಳಕ

ವಿವಿಧೆಡೆ ಹುಣ್ಣಿಮೆ ಪೂಜೆ

ಪಟ್ಟಣದಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ,ಬನಶಂಕರಿ ದೇವಾಲಯದಲ್ಲಿ, ಬೋರನಕಣಿವೆಯ ಸಾಯಿಬಾಬಾ ಮಂದಿರದಲ್ಲಿ,ಕೆಂಕೆರೆ ಪುರದಮಠದಲ್ಲಿ ,ತಿರುಮಲಾಪುರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಹುಣ್ಣಿಮೆ ಪೂಜೆಯು ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಬನಶಂಕರಿ ಹಾಗೂ ಸಾಯಿಬಾಬಾ ಮಂದಿರದಲ್ಲಿ ಸತ್ಯನಾರಾಯಣಪೂಜೆ ನಡೆದರೆ ಮಾರುತಿನಗರದ ಆಂಜನೇಯ ಸ್ವಾಮಿ ಪುರದಮಠದಲ್ಲಿ ಅನ್ನಸಂತರ್ಪಣೆ ನಡೆಯಿತು. ಪಟ್ಟಣದ ಸಣ್ಣದುರ್ಗಮ್ಮನ ದೇವಾಲಯದಲ್ಲಿ ಕಾರ್ತಿಕ ದೀಪ ಏರಿಸಲಾಯಿತು.ದೇವರುಗಳಿಗೆ ಮಾಡಿದ್ದ ಅಲಂಕಾರ ನೋಡಲು ಹಾಗೂ ಪೂಜಾಧಿಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ನೆರದಿದ್ದರು. ಭಜನೆ ಹಾಗೂ ಪ್ರಸಾದ ವಿನಿಯೋಗವಾಯಿತು.

ಹುಳಿಯಾರು ಗ್ರಾಪಂ ಮೇಲ್ದರ್ಜೆಗೆ:ಸಚಿವ ಜಯಚಂದ್ರ ಭರವಸೆ

೩೯ ಗ್ರಾಮಪಂಚಾಯ್ತಿ ಸದಸ್ಯರನ್ನೊಳಗೊಂಡು ಜಿಲ್ಲೆಯ ಅತಿದೊಡ್ಡ ಪಂಚಾಯ್ತಿಯ ಹೆಗ್ಗಳಿಕೆ ಹೊಂದಿರುವ ಹುಳಿಯಾರು ಗ್ರಾಮಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸುವ ವಿಚಾರ ವಿಧಾನಸಭಾಅಧಿವೇಶನದಲ್ಲಿ ಚರ್ಚೆಗೆ ಬರಲಿದೆ ಎಂದು ಗ್ರಾಪಂ ಸದಸ್ಯ ಧನುಷ್ ರಂಗನಾಥ್ ತಿಳಿಸಿದ್ದಾರೆ. ಸೋಮವಾರದಂದು ವಿಧಾನಸೌಧದಲ್ಲಿ ಸಚಿವ ಜಯಚಂದ್ರರನ್ನು ಹುಳಿಯಾರಿನಿಂದ ತೆರಲಿದ್ದ ನಿಯೋಗ ಭೇಟಿ ಮಾಡಿ ಒತ್ತಾಯಿಸಿದ್ದರ ಫಲವಾಗಿ ಅಗತ್ಯ ದಾಖಲೆಗಲನ್ನು ತುರ್ತು ತರಿಸಿಕೊಂಡು ಪರಮಾರ್ಶಿಸಿದ ಸಚಿವರು ನಾಳಿನ ಕಲಾಪದಲ್ಲಿ ಚರ್ಚೆಗೆ ಮಂಡಿಸಲು ಆದೇಶಿಸಿದ್ದಾರೆಂದು ಸದಸ್ಯ ರಂಗನಾಥ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಪೌರಾಡಳಿತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ಲಾ ಇಸ್ಲಾಂ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ ಸಚಿವ ಜಯಚಂದ್ರರವರು ಹುಳಿಯಾರು ಪಟ್ಟಣ ಪಂಚಾಯ್ತಿಯಾಗಲು ಈ ಹಿಂದೆಯೆ ತೀರ್ಮಾನಿಸಲಾಗಿದ್ದರೂ ಸಹ ಪಟ್ಟಿಯಿಂದ ಕೈಬಿಟ್ಟಿದ್ದ ಪರಿಣಾಮ ಗ್ರಾಪಂ ಆಗಿಯೇ ಮುಂದುವರಿದಿತ್ತು. ಸಂಬಂಧಪಟ್ಟವರ ಗಮನಕ್ಕೆ ಈ ವಿಚಾರತಂದಿದ್ದು ಈ ಬಾರಿಯ ಕಲಾಪದಲ್ಲಿ ಒಪ್ಪಿಗೆ ಪಡೆಯಲಾಗುವುದೆಂದು ತಿಳಿಸಿದ್ದಾರೆಂಬ ಮಾಹಿತಿ ನೀಡಿದರು. ಹುಳಿಯಾರು ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಧನುಷ್ ರಂಗನಾಥ್ . ಎಸ್ ಆರ್ ಎಸ್ ದಯಾನಂದ್ .ಎಸ್ ಪುಟ್ಟರಾಜ್ ಅವರುಗಳು ಇದೇ ಸಂದರ್ಭದಲ್ಲಿ ಕಳಸಾ ಬಂಡೂರಿ ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿಸಿ ವಾಟಾಳ್ ನಾಗರಾಜ್ ಅವರ

ದೀಪಾವಳಿಗೂ ಏರದ ಕೊಬ್ಬರಿ ಬೆಲೆ

ಕೊಬ್ಬರಿ ಮಾರುಕಟ್ಟೆ ಇತಿಹಾಸದಲ್ಲೇ ಕ್ವಿಂಟಲ್‌ಗೆ ಗರಿಷ್ಟ ರೂ. ೧೯,೦೫೦ಕ್ಕೆ ಮಾರಾಟವಾಗಿ ಇಪ್ಪತ್ತರ ಗಡಿ ತಲುಪುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ವರ್ಷದ ಆರಂಭದಿಂದಲೂ ಇಳಿಮುಖವಾಗುತ್ತ ಬಂದಿರುವ ಧಾರಣೆ ಈ ದೀಪಾವಳಿಯಲ್ಲೂ ಸಹ ಏರಿಕೆ ಕಾಣದ ರೈತರನ್ನು ನಿರಾಸೆ ಮಡುವಿನಲ್ಲೇ ಮುಳುಗಿಸಿದೆ.. ಕಳೆದ ವರ್ಷ ಕೊಬ್ಬರಿ ಧಾರಣೆ ಏರುಮುಖ ಕಂಡು ಸಮಾಧಾನಪಟ್ಟಿದ್ದ ರೈತರಿಗೆ ಕಳೆದ ಮೂರ್ನಾಲ್ಕು ತಿಂಗಳಿಂದ ಮತ್ತೆ ಇಳಿಯುತ್ತಿರುವ ಕೊಬ್ಬರಿ ಧಾರಣೆ ಕುಸಿತ ಕಳವಳಕ್ಕೀಡು ಮಾಡಿದೆ. ಕಳೆದ ಎರಡು ವರ್ಷಗಳ ಹಿಂದೆ ಕ್ವಿಂಟಲ್ ಕೊಬ್ಬರಿ ಧಾರಣೆ ಐದು-ಆರು ಸಾವಿರ ರೂ.ದಾಟದೆ ತೆವಳುತ್ತಿದ್ದರಿಂದ ರೈತರು ನಿರಾಶರಾಗಿದ್ದರು. ತದನಂತರ ಅನಿರೀಕ್ಷಿತವಾಗಿ ಧಾರಣೆ ದಿಢೀರ್ ಚೇತರಿಸಿಕೊಂಡು ಏರುಗತಿಯಲ್ಲಿ ಸಾಗಿ, ಕಳೆದ ವರ್ಷ ಆಗಸ್ಟ್- ಸೆಪ್ಟಂಬರ್ ನಲ್ಲಿ ೧೯,೦೫೦ ರೂ.ಗೆ ಏರಿ ಧಾರಣೆ ಸರ್ವಕಾಲಿಕ ದಾಖಲೆಯಾಗಿತ್ತು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ೨೦೦೦೦ ರೂ. ದಾಟಿ ೨೫,೦೦೦ ತಲುಪುವುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಂತರ ಏರಿಳಿತ ಕಾಣತೊಡಗಿ ಇದೀಗ ೧೧ ಸಾವಿರದ ಅಜುಬಾಜಿಗೆ ಬಂದು ನಿಂತಿದೆ. ಮಾರ್ಚ್‌ನಲ್ಲಿ ಕುಸಿತ ಕಂಡರೂ ಮತ್ತೆ ಚೇತರಿಸಿಕೊಂಡು ಜೂನ್ ಅಂತ್ಯದ ವೇಳೆ ೧೫ ಸಾವಿರ ಆಸುಪಾಸಿನಲ್ಲಿ ಸ್ಥಿರತೆ ಕಂಡಿತ್ತು. ದೀಪಾವಳಿ ಸಮಯದಲ್ಲಿ ಏರಿಕೆ ನಿರೀಕ್ಷಿಸಲಾಗಿತ್ತಾದರೂ ಸಹ ಲೆಕ್ಕಾಚಾರ ಉಲ್ಟಾಆಗಿ ಕುಸಿತ ಕಾಣುಯ್ಯಾ ಬಂದು ದ

ವೆಂಕಟೇಶ್ ಆಯ್ಕೆ

ಹುಳಿಯಾರು ಹೋಬಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಆರ್.ವೆಂಕಟೇಶ್ ಆಯ್ಕೆಯಾಗಿದ್ದಾರೆ. 

ರಂಗೋಲಿಸ್ಪರ್ಧೆ

ಹುಳಿಯಾರು ಸಮೀಪದ ಭಟ್ಟರಹಳ್ಳಿಯ ಶ್ರಿಸಿದ್ದರಾಮೇಶ್ವರ ಸ್ವಾಮಿ ದಸರಾ ಮಹೋತ್ಸವದ ಅಂಗವಾಗಿ ರಂಗೋಲಿ ಸ್ಪರ್ಧೆ ನಡೆಸಲಾಯಿತು.(ಚಿತ್ರ:ಮಹೇಶ್ ಭಟ್ಟರಹಳ್ಳಿ)

ಸಾಧಕರ ಆದರ್ಶ ದಾರಿದೀಪವಾಗಬೇಕು: ಶಿವರಾಜು

ಶಿಲ್ಪಕಲಾಕೃತಿಗಳ ಮೂಲಕ ಆದರ್ಶಪುರುಷರನ್ನು ನಮ್ಮೆದುರಿಗೆ ಕಡೆದು ನಿಲ್ಲಿಸಿದ್ದು ಈ ಸಾಧಕರ ಆದರ್ಶ ಜೀವನ ನಮಗೆ ಮಾರ್ಗದರ್ಶಕವಾಗಬೇಕು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಜೆ.ಬಿ.ಶಿವರಾಜು ಹೇಳಿದರು.                   ಹುಳಿಯಾರು ಸಮೀಪದ ಬೋರನಕಣಿವೆ ಸಾಯಿ ಸೇವಾ ಸಂಸ್ಥೆ ಅವರಣದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಹಾಗೂ ಸೇವಾ ಚೇತನಾ ಸಂಸ್ಥೆ ಬೋರನ ಕಣಿವೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹದಿನೈದು ದಿನಗಳ ಕಾಲದ ರಾಜ್ಯ ಮಟ್ಟದ ಸಮಕಾಲೀನ ಶಿಲ್ಪಕಲಾ ಶಿಬಿರದ ಸಮಾರೋಪ ಹಾಗೂ ಶಿಲ್ಪಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.                  ಮುಂಚಿನ ದಿನಗಳಲ್ಲಿ ಕಲಾಕೃತಿಗಳನ್ನು ನಿರ್ಮಿಸಲು ವರ್ಷಾನುಗಟ್ಟಲೆ ಹಿಡಿಯುತ್ತಿದ್ದು ಶಿಲ್ಪಕಲಾ ಅಕಾಡೆಮಿ ಇಂತಹ ಶಿಬಿರಗಳನ್ನು ಏರ್ಪಡಿಸುವ ಮೂಲಕ ೧೫ ದಿನದಲ್ಲೆ ಇಲ್ಲಿ ಹಿರಿಯ ಕಿರಿಯ ಕಲಾವಿದರ ಉಳಿಯಿಂದ ಅನೇಕ ಅದ್ಭುತ ಕಲಾಕೃತಿಗಳು ಮೂಡುತ್ತಿರುವುದು ಶ್ಲಾಘನೀಯ. ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಶಿಲ್ಪಕಲಾ ಅಕಾಡೆಮಿ ನಿರ್ಮಿಸಿರುವ ಕಾಷ್ಠ ಕಲಾಕೃತಿಗಳು ನಮ್ಮ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸುತ್ತಿದೆ ಎಂದರು. ಹುಳಿಯಾರು ಸಮೀಪದ ಬೋರನಕಣಿವೆ ಸಾಯಿ ಸೇವಾ ಸಂಸ್ಥೆ ಅವರಣದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಏರ್ಪಡಿಸಿದ್ದ ಹದಿನೈದು ದಿನಗಳ ಕಾಲದ ರಾಜ್ಯ ಮಟ್ಟದ ಸಮಕಾಲೀನ ಶಿಲ್ಪಕಲಾ ಶಿಬಿರದ ಸಮಾರೋಪದಲ್ಲಿ ಸಾಹಿತಿ ಎಸ್.ಜೆ.

ಮಳೆ ಬಂತು:ರಾಗಿಗೆ ಜೀವಕಳೆ ತಂತು

ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಬಂದ ಮಳೆಯಿಂದ ರಾಗಿ ಬೆಳೆ ಚೇತರಿಸಿಕೊಂಡಿದ್ದು ತಡ ಬಿತ್ತನೆ ಪೈರುಗಳಿಗೆ ಜೀವಕಳೆ ಬಂದಂತಾಗಿದೆ.ಕಳೆದ ೨೨ದಿನಗಳಿಂದ ಮಳೆಯಿಲ್ಲದೆ ಕಾಳುಗಟ್ಟುವ ಸ್ಥಿತಿಯಲ್ಲಿದ್ದ ರಾಗಿ ನೆಲಕಚ್ಚಿತು ಎಂದು ಹತಾಶರಾಗುತ್ತಿದ್ದಾಗಲೆ ಮೊನ್ನೆ ಬಂದ ಮಳೆಯಿಂದಾಗಿ ಪೂರ್ಣ ಫಸಲು ರೈತರ ಕೈ ಸೇರಲಿದೆ ಎಂಬಾ ಆಶಾಭಾವನೆ ವ್ಯಕ್ತವಾಗಿದೆ. ತಡವಾಗಿ ಬಿತ್ತನೆ ಮಾಡಿದ ರಾಗಿ ತಾಕುಗಳಿಗೆ ಒಂದು ಹದ ಮಳೆ ಬೇಕಾಗಿದ್ದು ಬಾರದ ಮಳೆಯಿಂದಾಗಿ ರೈತರು ಅತಂಕದಲ್ಲಿದ್ದರು.ಅಲ್ಲದೆ ನವಣೆ, ಹಿಂಗಾರು ಜೋಳ, ಹುರುಳಿ ಮತ್ತಿತ್ತರ ಬೀಜಗಳನ್ನು ಬಿತ್ತಿದ್ದ ರೈತರು ಮಳೆ ಕೈ ಕೊಟ್ಟಿದ್ದರಿಂದ ಕೈಕೈ ಹಿಸುಕಿಕೊಳ್ಳುವಂತಾಗಿತ್ತು. ಭಾನುವಾರ ತಡರಾತ್ರಿ ಹಾಗೂ ಸೋಮವಾರ ರಾತ್ರಿ ಬಂದ ತುಂತುರು ಮಳೆಯಿಂದಾಗಿ ಭೂಮಿ ಹದವಾಗಿದ್ದು ತಡವಾಗಿ ಬಿತ್ತನೆಯಾಗಿರುವ ರಾಗಿ, ನವಣೆ, ಹುರುಳಿ, ಸಜ್ಜೆ ಸೇರಿದಂತೆ ಇತರ ಬೆಳೆಗಳಿಗೆ ಅನುಕೂಲವಾಗಿದೆ. ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಬಂದ ಮಳೆಯಿಂದಾಗಿ ನಳನಳಿಸುತ್ತಿರುವ ರಾಗಿ ತಾಕು ಕೆಲವರು ಜುಲೈ ಮೊದಲ ಭಾಗದಲ್ಲೆ ಬಿತ್ತನೆ ಮಾಡಿದ್ದ ನವಣೆ, ಸಾವೆ ಈಗಾಗಲೆ ಕಟಾವಿನ ಹಂತಕ್ಕೆ ಬಂದಿದ್ದು ಈಗ ಬಂದಿರುವ ಮಳೆ ಕಟಾವಿಗೆ ಅಲ್ಪಸ್ವಲ್ಪ ತೊಂದರೆಯಾಗಲಿದೆ.ಉಳಿದಂತೆ ದ್ವಿದಳ ಧಾನ್ಯಗಳಿಗೆ ಈ ಮಳೆ ಪೂರಕವಾಗಿದ್ದು ರಾಗಿ ಬಂಪರ್‌ ಇಳುವರಿ ಬರಲಿದೆ ಎಂದು ನಿರೀಕ್ಷಿಸಲಾಗಿದೆ.

ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಕೊಳವೆಬಾವಿ

ಹುಳಿಯಾರುಪಟ್ಟಣದ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ರಂಗನಾಥ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ  ಕೊಳವೆಬಾವಿ ಕೊರೆಯಲಾಯಿತು.ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಇಂಜಿನಿಯರ್ ಶಿವಾನಂದ್ ಈ ಯೋಜನೆಯಡಿ ಹುಳಿಯಾರು ಪಟ್ಟಣದ ಮಾರುತಿನಗರ,ಆಜಾದ್ ನಗರ ಹಾಗೂ ಇಂದಿರಾನಗರದಲ್ಲಿ ಒಟ್ಟು ಮೂರು ಕೊಳವೆಬಾವಿ ಕೊರೆಯಲಾಗಿದ್ದು ಕಿರುನೀರು ಸರಬರಾಜು ಯೋಜನೆಯಡಿ ಸುರಕ್ಷಿತ ನೀರು ಪೂರೈಸಲಾಗುತ್ತಿದೆ ಎಂದರು. ತಲಾ ನಾಲ್ಕರಿಂದ ಐದು ಲಕ್ಷ ರೂ ವೆಚ್ಚದಲ್ಲಿ ಘಟಕ ಸ್ಥಾಪಿಸಲಾಗುತ್ತಿದ್ದು ಪ್ರತಿದಿನ ಪ್ರತಿ ವ್ಯಕ್ತಿಗೆ ತಲಾ ೫೫ ಲೀಟರ್ ನಂತೆ ನೀರು ಪೂರೈಸಲಾಗುವುದೆಂದರು. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಹುಳಿಯಾರು ರಂಗನಾಥ ಸ್ವಾಮಿ ದೇವಾಲಯದ ಪ್ರಾಂಗಂಅದಲ್ಲಿ ಕೊಳವೆ ಬಾವಿ ಕೊರೆಯಲಾಯಿತು.ದೇವಾಲಯ ಸಮಿತಿಯ ರಂಗನಾಥ್,ವಿಶ್ವನಾಥ್,ಶೇಷಾದ್ರಿ ಮತ್ತಿತರರಿದ್ದಾರೆ. ಈ ವೇಳೆ ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಂಗನಾಥ ಶೆಟ್ರು,ಸಿ.ವಿಶ್ವನಾಥ್,ಗ್ರಾಪಂ ಸದಸ್ಯ ರಂಗನಾಥ್ ,ಅರ್ಚಕ ಪದ್ಮರಾಜು,ಶೇಷಾದ್ರಿ ಮತ್ತಿತರರಿದ್ದರು.

ತೋಟದ ಮನೆಯಲ್ಲಿ ವೃದ್ಧ ದಂಪತಿಯ ಕೊಲೆ

ತಾಲ್ಲೂಕಿನ ಹಂದನಕೆರೆ ಪೊಲೀಸ್ ಠಾಣೆ ಸರಹದ್ದಿನ ರಾಮಘಟ್ಟ ಗ್ರಾಮದ ತೋಟದ ಮನೆಯಲ್ಲಿ ಮಲಗಿದ್ದ ವೃದ್ಧ ದಂಪತಿಯ ಕೊಲೆಗೈದ ಪ್ರಕರಣದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದು ಸೋಮವಾರ ಸಂಜೆ ಅಲ್ಲಿಂದ ಅವರ ತೋಟಕ್ಕೆ ಶವ ತಂದು ಸಂಜೆ ಸಂಬಂಧಿಗಳ ಸಮಕ್ಷಮದಲ್ಲಿ ಶವಸಂಸ್ಕಾರ ನೆರೆವೇರಿತು. ಹಂದನಕೆರೆ ಹೋಬಳಿಯ ರಾಮಘಟ್ಟೆ ಗ್ರಾಮದ ತೋಟದ ಮನೆಯಲ್ಲಿ ಕೊಲೆಯಾದ ವೃದ್ದ ದಂಪತಿಗಳಾದ ಲಕ್ಕಪ್ಪ ಹಾಗೂ ಮೀನಾಕ್ಷಮ್ಮ ವಿವರ:ರಾಮಘಟ್ಟ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಲಕ್ಕಪ್ಪ (75) ಹಾಗೂ ಮೀನಾಕ್ಷಿ (60) ಎಂಬುವರೇ ಕೊಲೆಯಾಗಿರುವ ದುರ್ದೈವಿಗಳಾಗಿದ್ದು ತೋಟದ ಮನೆಯಲ್ಲಿ ಇವರಿಬ್ಬರೆ ವಾಸವಿದ್ದು, ಇವರ ಮೂರು ಜನ ಮಕ್ಕಳು ಬೇರೆ ಬೇರೆ ಕಡೆ ಉದ್ಯೋಗದಲ್ಲಿದ್ದಾರೆಂದು ಹೇಳಲಾಗಿದೆ.ಸೀಮೆಎಣ್ಣೆ ಸ್ಟವ್​ನಿಂದ ಹೊಡೆದು ಕೊಲೆ ಮಾಡಲಾಗಿದ್ದು ಸೊಳ್ಳೆ ಪರದೆಯೊಳಗೆ ಮೀನಾಕ್ಷಮ್ಮ ಕೊಲೆಯಾಗಿದ್ದರೆ, ಲಕ್ಕಪ್ಪ ಸೊಳ್ಳೆ ಪರದೆ ಹೊರಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕೊಲೆ ಶನಿವಾರ ರಾತ್ರಿ ನಡೆದಿದ್ದರೂ ಭಾನುವಾರ ಸಂಜೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ವೈಯಕ್ತಿಕ ದ್ವೇಷಕ್ಕೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶನಿವಾರ ರಾತ್ರಿ 7.30ರಲ್ಲಿ ಪರಿಚಯಸ್ಥರೊಂದಿಗೆ ಲಕ್ಕಪ್ಪ ದಂಪತಿ ಮಾತನಾಡಿದ್ದು ಭಾನುವಾರ ಬೆಳಗ್ಗೆ ಮನೆಯಿಂದ ಎದ್ದು ಬಂದಿಲ್ಲ.ಅನುಮಾನಗೊಂಡು ಗ್ರಾಮದ ಕೆಲವರು ತೋಟದ ಮನೆಯ ಹತ್ತಿರ ಹೋಗಿ ನೋಡಿದ

ಕನ್ನಡ ಪುಸ್ತಕ ಮಾರಾಟ ಮಾಡುವ ಮೂಲಕ ರಾಜ್ಯೋತ್ಸವ ಆಚರಣೆ

ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾಹಿತಿ ಬೆಳಿಗೆರೆ ಕೃಷ್ಣಮೂರ್ತಿಯವರು ಕವಿಗೋಷ್ಟಿ ಏರ್ಪಡಿಸಿದಲ್ಲದೆ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ವಿನೂತನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು.ಕನ್ನಡ ರಾಜ್ಯೋತ್ಸವ ಬರಿಯ ಭಾಷಣಕ್ಕೆ ಸೀಮಿತವಾಗಬಾರೆದೆಂದು ತಮ್ಮ ಸುತ್ತಾಟ ಸಂಘಟನೆಯ ಮೂಲಕ ನಿಲ್ದಾಣದಲ್ಲಿ ಷಾಮಿಯಾನ ಹಾಕಿ ಸಾಹಿತ್ಯಿಕ ಪುಸ್ತಕಗಳನ್ನು ಓದುಗರಿಗೆ ಸಾಹಿತ್ಯಾಭಿಮಾನಿಗಳಿಗೆ ತಲುಪಿಸುವ ಪ್ರಯತ್ನ ಮಾಡಿದರು.ಬಸ್ ಗಳಲ್ಲೂ ಕೂಡಪುಸ್ತಕ ಮಾರಾಟಕ್ಕೆ ಮುಂದಾದರು. ಹುಳಿಯಾರು ಬಸ್ ನಿಲ್ದಾಣದಲ್ಲಿ ಸುತ್ತಾಟ ಸಂಘಟನೆಯ ಮೂಲಕ ಸಾಹಿತಿ ಬೆಳಿಗೆರೆ ಕೃಷ್ಣಮೂರ್ತಿಯವರು ಕವಿಗೋಷ್ಟಿ ಏರ್ಪಡಿಸಿದಲ್ಲದೆ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ವಿನೂತನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು. ಸರ್ಕಾರಿ ಬಿಎಂಎಸ್ ಪ್ರಥಮ ದರ್ಜೆ ಕಾಲೇಜು, ಸುತ್ತಾಟ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಬಸ್ ಸ್ಟಾಂಡ್ ಕವಿಗೋಷ್ಠಿ ಕೂಡ ನಡೆಯಿತು.ಈ ಬಗ್ಗೆ ಮಾತನಾಡಿದ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಸರ್ಕಾರ ಬಹುಮುಖ್ಯವಾಗಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಕರ ಮೇಲಿರುವ ಹೆಚ್ಚಿನ ಹೊರೆಗಳಾದ ಗಣತಿ ಕಾರ್ಯ ಹಾಗೂ ಬಿಸಿಯೂಟದಿಂದ ಮುಕ್ತಿಗೊಳಿಸಬೇಕು. ಅಲ್ಲದೆ ಎಲ್ಲ ಸರ್ಕಾರಿ ನೌಕರರು, ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಓದುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ಅಲ್ಲದೆ ತತ್ವಪದ ತಾವೇ ಹಾಡುವ ಮೂಲಕ

ವೈಭವದ ಸಿದ್ದರಾಮೇಶ್ವರ ಸ್ವಾಮಿ ತೆಪ್ಪೋತ್ಸವ

ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿಯ ಸಿದ್ದರಾಮೇಶ್ವರ ಸ್ವಾಮಿಯ ತೆಪ್ಪೋತ್ಸವ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಸಂಭ್ರಮ ಸಡಗರದಿಂದ ಜರುಗಿತು.ಯಳನಡು ಅರಸೀಕೆರೆ ಮಹಾಸಂಸ್ಥಾನ ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಕುಪ್ಪೂರು ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರೆವೇರಿತು.  ಹುಳಿಯಾರುಹೋಬಳಿಯ ತಮ್ಮಡಿಹಳ್ಳಿಯ ಸಿದ್ದರಾಮೇಶ್ವರ ಸ್ವಾಮಿಯ ತೆಪ್ಪೋತ್ಸವ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಸಂಭ್ರಮ ಸಡಗರದಿಂದ ಜರುಗಿತು. ಸಿದ್ದರಾಮೇಶ್ವರ ಸ್ವಾಮಿ ದೇಗುಲದಲ್ಲಿ ಪುಣ್ಯಹ, ಗಂಗಾಸ್ನಾನ, ಫಲಹಾರಸೇವೆ ಜರುಗಿತು.ನಂತರ ಸಿದ್ಧರಾಮೇಶ್ವರ ಸ್ವಾಮಿ ಹಾಗೂ ಗ್ರಾಮದೇವತೆ ಕರಿಯಮ್ಮ ದೇವಿಯನ್ನು ನಡೆಮುಡಿ ಉತ್ಸವದಲ್ಲಿ ಕೆರೆಯ ಬಳಿ ಕರೆತಂದು ವಿಶೇಷ ಪೂಜೆ ಸಲ್ಲಿಸಿ ನೆರದಿದ್ದ ಭಕ್ತಾಧಿಗಳಿಗೆ ಫಲಹಾರ ಹಂಚಲಾಯಿತು.ಬ್ಯಾರೆಲ್,ಹಲಗೆ ಜೋಡಿಸಿ ಪುಷ್ಪಗಳೊಂದಿಗೆ ಅಲಂಕೃತಗೊಂಡ ತೆಪ್ಪದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಸ್ವಾಮೀಜಿಗಳೊಂದಿಗೆ ಮೂರು ಸುತ್ತು ಕೆರೆಯಲ್ಲಿ ಪ್ರದಕ್ಷಿಣೆ ಹಾಕಿಸಲಾಯಿತು.ಬಳಿಕ ಗ್ರಾಮದೇವತೆ ಕರಿಯಮ್ಮನ ತೆಪ್ಪೋತ್ಸವ ನೆರವೇರಿಸಲಾಯಿತು. ಲಾಗಾಯ್ತಿನಿಂದಲೂ ಸ್ವಾಮಿಯ ಜಾತ್ರೆ ನಡೆದುಕೊಂಡು ಬರುತ್ತಿದ್ದು ಕೆರೆಕೋಡು ಬಿದ್ದ ಸಂದರ್ಭದಲ್ಲಿ ತೆಪ್ಪೋತ್ಸವ ಮಾಡಿಕೊಂಡು ಬರುತ್ತಿದ್ದು ಈ ಬಾರಿ ಕೂಡ ೧೬ ವರ್ಷಗಳ ನಂತರ ಕೆರೆಕೋಡಿ ಬಿದ್ದ

ಬೋರನಕಣಿವೆ ಬಳಿ ರಾಜ್ಯಮಟ್ಟದ ಸಮಕಾಲೀನ ಶಿಲಾ ಶಿಲ್ಪಕಲಾ ಶಿಬಿರ

ನಾಡಿನ ವಿವಿಧ ಜಿಲ್ಲೆಗಳಿಂದ ಶಿಲ್ಪಿಗಳ ಆಗಮನ ------------------------------------------ ಜಾನಪದ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ರಾಜ್ಯಮಟ್ಟದ ಶಿಬಿರವೊಂದು ಬೋರನಕಣಿವೆಯಂತಹ ಕುಗ್ರಾಮದಲ್ಲಿ ಆಯೋಜಿಸಲಾಗಿದ್ದು ನಾಡಿನ ವಿವಿಧ ಜಿಲ್ಲೆಗಳಿಂದ ಶಿಲ್ಪಿಗಳು ಇಲ್ಲಿಗೆ ಆಗಮಿಸಿರುವುದು ಗ್ರಾಮೀಣಭಾಗದಲ್ಲೂ ಸಹ ಕಲೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಹುಳಿಯಾರು ಸಮೀಪದ ಬೋರನಕಣಿವೆಯ ಸೇವಾಚೇತನ ಟ್ರಸ್ಟ್ ನ ಅಧ್ಯಕ್ಷ ಹಾಗೂ ಸಾಹಿತಿಗಳಾದ ಪ್ರೋ ಎಸ್.ಜಿ.ಸಿದ್ದರಾಮಯ್ಯ ಹಾಗೂ ಕಾರ್ಯದರ್ಶಿ ವಿಠಲ್ ಅವರ ಪ್ರಯತ್ನದ ಫಲವಾಗಿ ರಾಜ್ಯಮಟ್ಟದ ಎರಡುವಾರಗಳ ಕಾಲದ ಶಿಬಿರ ನಡೆಯುತ್ತಿದ್ದು ಇಲ್ಲಿ ಹಿರಿಯ ಕಿರಿಯ ಕಲಾವಿದರ ಉಳಿಯಿಂದ ಅನೇಕ ಅದ್ಭುತ ಕಲಾಕೃತಿಗಳು ಮೂಡುತ್ತಿದೆ. ಕೆತ್ತನೆಯಲ್ಲಿ ತೊಡಗಿಕೊಂಡಿರುವ ಶಿಲ್ಪಿಗಳು ಹಿರಿಯ ಶಿಲ್ಪಿಗಳಾಗಿರುವ ಚಿತ್ರದುರ್ಗ ಜಿಲ್ಲೆಯ ತುಪ್ಪದಹಳ್ಳಿಯ ಹಿರಿಯ ಶಿಲ್ಪಿ ಟಿ.ಎಂ.ತೀರ್ಥಾಚಾರ್ ಸಂಚಾಲಕತ್ವದ ಈ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಹತ್ತು ಮಂದಿ ಹಿರಿಯ ಶಿಲ್ಪಿಗಳು ಹಾಗೂ ಹತ್ತು ಮಂದಿ ಕಿರಿಯ ಶಿಲ್ಪಿಗಳು ಭಾಗವಹಿಸಿದ್ದು ನೆಲಮಂಗಲದ ಶಿಲ್ಪಿ ಎಸ್.ಮರಿಸ್ವಾಮಿ ಶಿಬಿರದ ನಿರ್ದೇಶಕರಾಗಿದ್ದಾರೆ. ಕರ್ನಾಟಕ ಶಿಲ್ಪ ಕಲಾ ಅಕಾಡೆಮಿಯು ಹುಳಿಯಾರು ಹೋಬಳಿಯ ಬೋರನಕಣಿವೆಯ ಸೇವಾಚೇತನದಲ್ಲಿ ಅ.೧೯ರಿಂದ ನ.೨ ಎರಡು ವಾರಾವಧಿ ಶಿಲಾ ಶಿ