೩೯ ಗ್ರಾಮಪಂಚಾಯ್ತಿ ಸದಸ್ಯರನ್ನೊಳಗೊಂಡು ಜಿಲ್ಲೆಯ ಅತಿದೊಡ್ಡ ಪಂಚಾಯ್ತಿಯ ಹೆಗ್ಗಳಿಕೆ ಹೊಂದಿರುವ ಹುಳಿಯಾರು ಗ್ರಾಮಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸುವ ವಿಚಾರ ವಿಧಾನಸಭಾಅಧಿವೇಶನದಲ್ಲಿ ಚರ್ಚೆಗೆ ಬರಲಿದೆ ಎಂದು ಗ್ರಾಪಂ ಸದಸ್ಯ ಧನುಷ್ ರಂಗನಾಥ್ ತಿಳಿಸಿದ್ದಾರೆ.
ಸೋಮವಾರದಂದು ವಿಧಾನಸೌಧದಲ್ಲಿ ಸಚಿವ ಜಯಚಂದ್ರರನ್ನು ಹುಳಿಯಾರಿನಿಂದ ತೆರಲಿದ್ದ ನಿಯೋಗ ಭೇಟಿ ಮಾಡಿ ಒತ್ತಾಯಿಸಿದ್ದರ ಫಲವಾಗಿ ಅಗತ್ಯ ದಾಖಲೆಗಲನ್ನು ತುರ್ತು ತರಿಸಿಕೊಂಡು ಪರಮಾರ್ಶಿಸಿದ ಸಚಿವರು ನಾಳಿನ ಕಲಾಪದಲ್ಲಿ ಚರ್ಚೆಗೆ ಮಂಡಿಸಲು ಆದೇಶಿಸಿದ್ದಾರೆಂದು ಸದಸ್ಯ ರಂಗನಾಥ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಪೌರಾಡಳಿತ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಖಮರುಲ್ಲಾ ಇಸ್ಲಾಂ ಅವರೊಂದಿಗೆ ಈ ಬಗ್ಗೆ ಚರ್ಚಿಸಿದ ಸಚಿವ ಜಯಚಂದ್ರರವರು ಹುಳಿಯಾರು ಪಟ್ಟಣ ಪಂಚಾಯ್ತಿಯಾಗಲು ಈ ಹಿಂದೆಯೆ ತೀರ್ಮಾನಿಸಲಾಗಿದ್ದರೂ ಸಹ ಪಟ್ಟಿಯಿಂದ ಕೈಬಿಟ್ಟಿದ್ದ ಪರಿಣಾಮ ಗ್ರಾಪಂ ಆಗಿಯೇ ಮುಂದುವರಿದಿತ್ತು. ಸಂಬಂಧಪಟ್ಟವರ ಗಮನಕ್ಕೆ ಈ ವಿಚಾರತಂದಿದ್ದು ಈ ಬಾರಿಯ ಕಲಾಪದಲ್ಲಿ ಒಪ್ಪಿಗೆ ಪಡೆಯಲಾಗುವುದೆಂದು ತಿಳಿಸಿದ್ದಾರೆಂಬ ಮಾಹಿತಿ ನೀಡಿದರು.
ಹುಳಿಯಾರು ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಧನುಷ್ ರಂಗನಾಥ್ . ಎಸ್ ಆರ್ ಎಸ್ ದಯಾನಂದ್ .ಎಸ್ ಪುಟ್ಟರಾಜ್ ಅವರುಗಳು ಇದೇ ಸಂದರ್ಭದಲ್ಲಿ ಕಳಸಾ ಬಂಡೂರಿ ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿಸಿ ವಾಟಾಳ್ ನಾಗರಾಜ್ ಅವರ ಜೊತೆ ಕೇಂದ್ರ ಸರ್ಕಾರದ ವಿರುದ್ದ ವಿಧಾನ ಸೌಧದ ಮುಂದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು
ಹುಳಿಯಾರುಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಧನುಷ್ ರಂಗನಾಥ್ ,ಎಸ್ ಆರ್ ಎಸ್ ದಯಾನಂದ್ ,ಎಸ್ ಪುಟ್ಟರಾಜ್ ಕಳಸಾ ಬಂಡೂರಿ ನೀರಾವರಿ ಹೋರಾಟಕ್ಕೆ ವಾಟಾಳ್ ನಾಗರಾಜ್ ಅವರ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು |
ಒಳ್ಳೆ ಬೆಳವಣಿಗೆ
ಪ್ರತ್ಯುತ್ತರಅಳಿಸಿ