ಪಟ್ಟಣದ ಬಸ್ ನಿಲ್ದಾಣದಲ್ಲಿ ಸಾಹಿತಿ ಬೆಳಿಗೆರೆ ಕೃಷ್ಣಮೂರ್ತಿಯವರು ಕವಿಗೋಷ್ಟಿ ಏರ್ಪಡಿಸಿದಲ್ಲದೆ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ವಿನೂತನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು.ಕನ್ನಡ ರಾಜ್ಯೋತ್ಸವ ಬರಿಯ ಭಾಷಣಕ್ಕೆ ಸೀಮಿತವಾಗಬಾರೆದೆಂದು ತಮ್ಮ ಸುತ್ತಾಟ ಸಂಘಟನೆಯ ಮೂಲಕ ನಿಲ್ದಾಣದಲ್ಲಿ ಷಾಮಿಯಾನ ಹಾಕಿ ಸಾಹಿತ್ಯಿಕ ಪುಸ್ತಕಗಳನ್ನು ಓದುಗರಿಗೆ ಸಾಹಿತ್ಯಾಭಿಮಾನಿಗಳಿಗೆ ತಲುಪಿಸುವ ಪ್ರಯತ್ನ ಮಾಡಿದರು.ಬಸ್ ಗಳಲ್ಲೂ ಕೂಡಪುಸ್ತಕ ಮಾರಾಟಕ್ಕೆ ಮುಂದಾದರು.
ಹುಳಿಯಾರು ಬಸ್ ನಿಲ್ದಾಣದಲ್ಲಿ ಸುತ್ತಾಟ ಸಂಘಟನೆಯ ಮೂಲಕ ಸಾಹಿತಿ ಬೆಳಿಗೆರೆ ಕೃಷ್ಣಮೂರ್ತಿಯವರು ಕವಿಗೋಷ್ಟಿ ಏರ್ಪಡಿಸಿದಲ್ಲದೆ ಕನ್ನಡ ಪುಸ್ತಕಗಳನ್ನು ಮಾರಾಟ ಮಾಡುವ ಮೂಲಕ ವಿನೂತನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿದರು. |
ಸರ್ಕಾರಿ ಬಿಎಂಎಸ್ ಪ್ರಥಮ ದರ್ಜೆ ಕಾಲೇಜು, ಸುತ್ತಾಟ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಬಸ್ ಸ್ಟಾಂಡ್ ಕವಿಗೋಷ್ಠಿ ಕೂಡ ನಡೆಯಿತು.ಈ ಬಗ್ಗೆ ಮಾತನಾಡಿದ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಸರ್ಕಾರ ಬಹುಮುಖ್ಯವಾಗಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಿಕ್ಷಕರ ಮೇಲಿರುವ ಹೆಚ್ಚಿನ ಹೊರೆಗಳಾದ ಗಣತಿ ಕಾರ್ಯ ಹಾಗೂ ಬಿಸಿಯೂಟದಿಂದ ಮುಕ್ತಿಗೊಳಿಸಬೇಕು. ಅಲ್ಲದೆ ಎಲ್ಲ ಸರ್ಕಾರಿ ನೌಕರರು, ಜನಪ್ರತಿನಿಧಿಗಳು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲೇ ಓದುವಂತೆ ಮಾಡಬೇಕು ಎಂದು ಸಲಹೆ ನೀಡಿದರು.ಅಲ್ಲದೆ ತತ್ವಪದ ತಾವೇ ಹಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಕೆಂಕೆರೆ ನವೀನ್, ಗ್ರಾಪಂ ಸದಸ್ಯ ಕೋಳಿ ಶ್ರೀನಿವಾಸ್ ,ದಸೂಡಿ ಚಂದ್ರಣ್ಣ, ಅಲೆಮಾರಿ ಬುಡಕಟ್ಟು ಸಂಘದ ಅಧ್ಯಕ್ಷ ರಾಜಪ್ಪ, ಕಾಮನಬಿಲ್ಲು ಫೌಂಡೇಷನ್‌ನ ಕೇಶವ್, ಬಳೆಕುಮಾರ್, ಉಮೇಶ್, ರಾಜುಬಡಗಿ, ಶಿಕ್ಷಕ ಶಂಕರಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಶಿವಯ್ಯ, ಕನಕ ಯುವ ಸೇನೆಯ ಈರುಳ್ಳಿ ಮಂಜು ಮತ್ತಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ