ವಿಷಯಕ್ಕೆ ಹೋಗಿ

ಹುಳಿಯಾರಮ್ಮನ ಸನ್ನಿಧಿಯಲ್ಲಿ ವಿಜೃಂಭಣೆಯ ಕೃತಿಕೋತ್ಸವ

ಹುಳಿಯಾರು  ಪಟ್ಟಣದ ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ ಕೃತಿಕೋತ್ಸವ ಬುಧವಾರ ಸಂಜೆ ಅಪಾರ ಸಂಖ್ಯೆಯ ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕೃತಿಕೋತ್ಸವ ಅಂಗವಾಗಿ ಅಮ್ಮನವರಿಗೆ ವಿಪ್ರಮಹಿಳಾ ಸಂಘದಿಂದ ದೀಪಾರತಿ ಹಾಗೂ ಲಲಿತ ಸಹಸ್ರನಾಮ ಪಠಣ ನಡೆಯಿತು.


ಕಾರ್ತಿಕ ಮಾಸದ ಕೃತಿಕಾ ನಕ್ಷತ್ರದ ದಿನ ಆಚರಿಸಲಾಗುವ ಕೃತಿಕೋತ್ಸವವು ಈ ಬಾರಿ ಲಕ್ಷ್ಮೀ ಸುಬ್ರಮಣ್ಯ ಅವರ ಸೇವಾರ್ಥದಲ್ಲಿ ನಡೆಯಿತು.ಅಮ್ಮನವರಿಗೆ ಅಭಿಷೇಕ,ಅರ್ಚನೆ ನಡೆಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಸಂಜೆ ಉತ್ಸವ ಮೂರ್ತಿಯನ್ನು ಅಲಂಕರಿಸಿ ವಾದ್ಯಮೇಳದೊಂದಿಗೆ ಹೊರಡಿಸಿ ಕರುಗ ಸುಡುವ ಕಾರ್ಯ ನಡೆಸಲಾಯಿತು.ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.ವಿಪ್ರ ಮಹಿಳೆಯರಿಂದ ಲಲಿತಾಸಹಸ್ರನಾಮ ಪಾರಾಯಣ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.

ಈ ವೇಳೆ ಸೀತಾರಾಮ ಪ್ರತಿಷ್ಠಾನದ ಕಾರ್ಯದರ್ಶಿ ಹು.ಕೃ.ವಿಶ್ವನಾಥ್, ವಿಪ್ರ ಸಂಘದಲೋಕೇಶಣ್ಣ,ರಾಜಣ್ಣ,ರಂಗನಾಥ ಪ್ರಸಾದ್,ಅಶ್ವತ್ಥ್,ಗುಂಡಣ್ಣ. ಸೇರಿದಂತೆ ಅಪಾರ ಸಂಖ್ಯೆ ಭಕ್ತಾಧಿಗಳು ಹಾಜರಿದ್ದು ಅಮ್ಮನವರ ಕೃತಿಕೋತ್ಸವವನ್ನು ಕಣ್ತುಂಬಿಕೊಂಡರು.


ಗಾಂಧಿಪೇಟೆಯ ಕನ್ನಿಕಪರಮೇಶ್ವರಿ ದೇವಾಲಯದಲ್ಲಿ ಬಿ.ವಿ.ಶ್ರೀನಿವಾಸ್ ಸೇವಾರ್ಥದಲ್ಲಿ ಕನ್ನಿಕಾಪರಮೇಶ್ವರಿಗೆ ಹಾಗೂ ಬನಶಂಕರಿ ಮತ್ತು ಶ್ರೀ ಅನಂತಶಯನ ರಂಗನಾಥ ಸ್ವಾಮಿ ದೇವಾಲಯದಲ್ಲಿ ಭಕ್ತಾಧಿಗಳಿಂದ ಅಲಂಕಾರ,ಪೂಜಾ ಕಾರ್ಯಗಳನ್ನು ನಡೆದು ಪಾಗು ಸುಡುವುದರ ಮೂಲಕ ಆ ಬೆಳಕಿನಲ್ಲಿನಲ್ಲಿ ಅಮ್ಮನವರ ದರ್ಶನ ಮಾಡಿ ಕೃತಾರ್ಥರಾದರು.

ಕಾಮೆಂಟ್‌ಗಳು