ಶಿಲ್ಪಕಲಾಕೃತಿಗಳ ಮೂಲಕ ಆದರ್ಶಪುರುಷರನ್ನು ನಮ್ಮೆದುರಿಗೆ ಕಡೆದು ನಿಲ್ಲಿಸಿದ್ದು ಈ ಸಾಧಕರ ಆದರ್ಶ ಜೀವನ ನಮಗೆ ಮಾರ್ಗದರ್ಶಕವಾಗಬೇಕು ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಜೆ.ಬಿ.ಶಿವರಾಜು ಹೇಳಿದರು.
ಹುಳಿಯಾರು ಸಮೀಪದ ಬೋರನಕಣಿವೆ ಸಾಯಿ ಸೇವಾ ಸಂಸ್ಥೆ ಅವರಣದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಹಾಗೂ ಸೇವಾ ಚೇತನಾ ಸಂಸ್ಥೆ ಬೋರನ ಕಣಿವೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹದಿನೈದು ದಿನಗಳ ಕಾಲದ ರಾಜ್ಯ ಮಟ್ಟದ ಸಮಕಾಲೀನ ಶಿಲ್ಪಕಲಾ ಶಿಬಿರದ ಸಮಾರೋಪ ಹಾಗೂ ಶಿಲ್ಪಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಂಚಿನ ದಿನಗಳಲ್ಲಿ ಕಲಾಕೃತಿಗಳನ್ನು ನಿರ್ಮಿಸಲು ವರ್ಷಾನುಗಟ್ಟಲೆ ಹಿಡಿಯುತ್ತಿದ್ದು ಶಿಲ್ಪಕಲಾ ಅಕಾಡೆಮಿ ಇಂತಹ ಶಿಬಿರಗಳನ್ನು ಏರ್ಪಡಿಸುವ ಮೂಲಕ ೧೫ ದಿನದಲ್ಲೆ ಇಲ್ಲಿ ಹಿರಿಯ ಕಿರಿಯ ಕಲಾವಿದರ ಉಳಿಯಿಂದ ಅನೇಕ ಅದ್ಭುತ ಕಲಾಕೃತಿಗಳು ಮೂಡುತ್ತಿರುವುದು ಶ್ಲಾಘನೀಯ. ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಶಿಲ್ಪಕಲಾ ಅಕಾಡೆಮಿ ನಿರ್ಮಿಸಿರುವ ಕಾಷ್ಠ ಕಲಾಕೃತಿಗಳು ನಮ್ಮ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸುತ್ತಿದೆ ಎಂದರು.
ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ ಶಿಲ್ಪಾಕೃತಿಗಳನ್ನು ಪ್ರತಿಷ್ಠಾಪಿಸುವುದೇ ಅಲ್ಲದೆ ಅವುಗಳ ಇತಿಹಾಸದ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ಸೇವಾ ಚೇತನ ಸಂಸ್ಥೆ ಮಾಡುತ್ತಿದೆ ಎಂದರು. ಟ್ರಸ್ಟ್ ಈ ಭಾಗದ ಯುವಕರಿಗೆ ಬದುಕು ಕಟ್ಟಿಕೊಳ್ಳಲು ಆಶ್ರಯ ತಾಣವಾಗಬೇಕೆಂದರು. ಪ್ರಸ್ತುತ ಸನ್ನಿವೇಶದಲ್ಲಿ ಶಿಲ್ಪಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರು ಇಲ್ಲವಾಗುತ್ತಿದ್ದು ಗ್ರಾಮೀಣ ಭಾಗದಲ್ಲಿ ಕಲಾವಿದರನ್ನು ಗುರ್ತಿಸಿ ಬೆಳಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳು ಅವಶ್ಯವಾಗುತ್ತಿದ್ದು ಅಕಾಡೆಮಿ ಈ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಕರ್ನಾಟಕ ಶಿಲ್ಪಾಕಲಾ ಆಕಾಡೆಮಿ ನಾಡಿನ ನಾನಾ ಜಿಲ್ಲೆಗಳಿಂದ ಇಪ್ಪತ್ತು ಮಂದಿ ಶಿಲ್ಪಿಗಳನ್ನು ಆಹ್ವಾನಿಸಿದ್ದು ಎಲ್ಲರು ನುರಿತ ಕಲಾವಿದರಾಗಿದ್ದಾರೆ.ಇವರುಗಳು ಕೆತ್ತಿರುವ ಅಂಬೇಡ್ಕರ್,ವಿವೇಕಾನಂದ,ಕುವೆಂಪು,ಕನಕದಾಸ,ಬಾಪುಲೆ,ಸಾವಿತ್ರಿ ಬಾಪುಲೆ,ಅಬ್ದುಲ್ ಕಲಾಂ,ಧ್ಯಾನಮಗ್ನ ಗಾಂಧಿ,ನಾಲ್ವಡಿ ಕೃಷ್ಣರಾಜ ಒಡೆಯರ್,ಶರಣ ಬಸವೇಶ್ವರರ ಶಿಲ್ಪಗಳು ಬೆರಗುಮೂಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಇದೇ ವೇಳೆ ಶಿಲ್ಪಿಗಳಾದ
ಚಿತ್ರದುರ್ಗ ಜಿಲ್ಲೆಯ ಮಂಜುನಾಥ್ ಆಚಾರ್ಯ,ಆಲೂರು ನರಸಿಂಹರಾಜ್
ತುಮಕೂರು ಜಿಲ್ಲೆಯ ಸಿ.ಪಿ.ವಿಶ್ವನಾಥ್,ಬುಕ್ಕಾಪಟ್ಟಣ ಹರೀಶ್,
ಕೋಲಾರ ಜಿಲ್ಲೆಯ ಆನಂದಕುಮಾರ್,
ಬೆಂಗಳೂರು ಜಿಲ್ಲೆಯ ಜಗದೀಶ್,
ಬಾಗಲಕೋಟೆ ಜಿಲ್ಲೆಯ ವಸಂತ ತಳವಾರ , ಅಶೋಕ ಹರಿಜನ,ಮಹದೇವ ಹುಲಿಗವ್ವ ಚಲುವಾದಿ, ರಮೇಶ್ ರಾಜಾಪುರ,ಅಜಯಕುಮಾರ್ ಕಲಗೋಡಿ,ಮೌನೇಶ ಬದನೂರು, ನರಸಿಂಹಸ್ವಾಮಿ, ದ್ಯಾಮಣ್ಣ ಸಂಗಳ,ರವಿಕಾಮಪ್ಪ ವಡ್ಡರ್
ಗದಗ ಜಿಲ್ಲೆಯ ಬಸಪ್ಪಶಿವಪ್ಪ,ಬಂಡಿವಡ್ಡರ,
ಯಾದಗಿರಿ ಜಿಲ್ಲೆಯ ಚಂದ್ರಪ್ಪ ಮಾದರ,
ಮೈಸುರು ಜಿಲ್ಲೆಯ ಶಂಕರ್,
ಚಿಕ್ಕಮಗಳೂರು ಜಿಲ್ಲೆಯ ಸುನೀಲ್ ಕುಮಾರ್,,
ದಕ್ಷಿಣ ಕನ್ನಡ ಜಿಲ್ಲೆಯ ವಿನಯ ಬಸಪ್ಪಗೌಡ ಇವರುಗಳನ್ನು ಸೇವಾ ಚೇತನಾ ಸಂಸ್ಥೆಯಿಂದ ಸನ್ಮಾನಿಸಲಾಯಿತು.
ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಎಚ್.ವಿ.ಇಂದ್ರಮ್ಮ, ಶಿಬಿರದ ನಿರ್ದೇಶಕ ಮರಿಸ್ವಾಮಿ, ಅಕಾಡೆಮಿ ಸದಸ್ಯ ಕುಮಾರ್ ಮಾತನಾಡಿದರು. ಸೇವಾಚೇತನ ಸಂಸ್ಥೆ ಕಾರ್ಯದರ್ಶಿ ವಿಠಲ್, ತಾಪಂ ಸದಸ್ಯೆ ಕವಿತಾಪ್ರಕಾಶ್, ಮಾಜಿ ಗ್ರಾಪಂ ಅಧ್ಯಕ್ಷ ರವಿಕುಮಾರ್ ಮತ್ತಿತರರಿದ್ದರು.ಉಪನ್ಯಾಸಕ ದೇವೇಂದ್ರಪ್ಪ ಸ್ವಾಗತಿಸಿದರು.ಶಿಕ್ಷಕಿ ಗಿರಿಜಾ ನಿರೂಪಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ