ತಾಲ್ಲೂಕಿನ ಹಂದನಕೆರೆ ಪೊಲೀಸ್ ಠಾಣೆ ಸರಹದ್ದಿನ ರಾಮಘಟ್ಟ ಗ್ರಾಮದ ತೋಟದ ಮನೆಯಲ್ಲಿ ಮಲಗಿದ್ದ ವೃದ್ಧ ದಂಪತಿಯ ಕೊಲೆಗೈದ ಪ್ರಕರಣದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದು ಸೋಮವಾರ ಸಂಜೆ ಅಲ್ಲಿಂದ ಅವರ ತೋಟಕ್ಕೆ ಶವ ತಂದು ಸಂಜೆ ಸಂಬಂಧಿಗಳ ಸಮಕ್ಷಮದಲ್ಲಿ ಶವಸಂಸ್ಕಾರ ನೆರೆವೇರಿತು.
ಹಂದನಕೆರೆ ಹೋಬಳಿಯ ರಾಮಘಟ್ಟೆ ಗ್ರಾಮದ ತೋಟದ ಮನೆಯಲ್ಲಿ ಕೊಲೆಯಾದ ವೃದ್ದ ದಂಪತಿಗಳಾದ ಲಕ್ಕಪ್ಪ ಹಾಗೂ ಮೀನಾಕ್ಷಮ್ಮ |
ವಿವರ:ರಾಮಘಟ್ಟ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಲಕ್ಕಪ್ಪ (75) ಹಾಗೂ ಮೀನಾಕ್ಷಿ (60) ಎಂಬುವರೇ ಕೊಲೆಯಾಗಿರುವ ದುರ್ದೈವಿಗಳಾಗಿದ್ದು ತೋಟದ ಮನೆಯಲ್ಲಿ ಇವರಿಬ್ಬರೆ ವಾಸವಿದ್ದು, ಇವರ ಮೂರು ಜನ ಮಕ್ಕಳು ಬೇರೆ ಬೇರೆ ಕಡೆ ಉದ್ಯೋಗದಲ್ಲಿದ್ದಾರೆಂದು ಹೇಳಲಾಗಿದೆ.ಸೀಮೆಎಣ್ಣೆ ಸ್ಟವ್ನಿಂದ ಹೊಡೆದು ಕೊಲೆ ಮಾಡಲಾಗಿದ್ದು ಸೊಳ್ಳೆ ಪರದೆಯೊಳಗೆ ಮೀನಾಕ್ಷಮ್ಮ ಕೊಲೆಯಾಗಿದ್ದರೆ, ಲಕ್ಕಪ್ಪ ಸೊಳ್ಳೆ ಪರದೆ ಹೊರಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕೊಲೆ ಶನಿವಾರ ರಾತ್ರಿ ನಡೆದಿದ್ದರೂ ಭಾನುವಾರ ಸಂಜೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು.
ವೈಯಕ್ತಿಕ ದ್ವೇಷಕ್ಕೆ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶನಿವಾರ ರಾತ್ರಿ 7.30ರಲ್ಲಿ ಪರಿಚಯಸ್ಥರೊಂದಿಗೆ ಲಕ್ಕಪ್ಪ ದಂಪತಿ ಮಾತನಾಡಿದ್ದು ಭಾನುವಾರ ಬೆಳಗ್ಗೆ ಮನೆಯಿಂದ ಎದ್ದು ಬಂದಿಲ್ಲ.ಅನುಮಾನಗೊಂಡು ಗ್ರಾಮದ ಕೆಲವರು ತೋಟದ ಮನೆಯ ಹತ್ತಿರ ಹೋಗಿ ನೋಡಿದಾಗ ಕೊಲೆಯಾಗಿರುವ ಘಟನೆ ಕಂಡು ಬಂದಿದೆ.
ಈ ಸಂಬಂಧ ಹಂದನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್, ಡಿವೈಎಸ್ಪಿ ರವಿಕುಮಾರ್ ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ. ಕೊಲೆಗಡುಕರ ಬಂಧನಕ್ಕೆ ಬಲೆ ಬೀಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ