ಪಟ್ಟಣದಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ,ಬನಶಂಕರಿ ದೇವಾಲಯದಲ್ಲಿ,ಬೋರನಕಣಿವೆಯ ಸಾಯಿಬಾಬಾ ಮಂದಿರದಲ್ಲಿ,ಕೆಂಕೆರೆ ಪುರದಮಠದಲ್ಲಿ ,ತಿರುಮಲಾಪುರದ ಆಂಜನೇಯಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಹುಣ್ಣಿಮೆ ಪೂಜೆಯು ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬನಶಂಕರಿ ಹಾಗೂ ಸಾಯಿಬಾಬಾ ಮಂದಿರದಲ್ಲಿ ಸತ್ಯನಾರಾಯಣಪೂಜೆ ನಡೆದರೆ ಮಾರುತಿನಗರದ ಆಂಜನೇಯ ಸ್ವಾಮಿ ಪುರದಮಠದಲ್ಲಿ ಅನ್ನಸಂತರ್ಪಣೆ ನಡೆಯಿತು.
ಪಟ್ಟಣದ ಸಣ್ಣದುರ್ಗಮ್ಮನ ದೇವಾಲಯದಲ್ಲಿ ಕಾರ್ತಿಕ ದೀಪ ಏರಿಸಲಾಯಿತು.ದೇವರುಗಳಿಗೆ ಮಾಡಿದ್ದ ಅಲಂಕಾರ ನೋಡಲು ಹಾಗೂ ಪೂಜಾಧಿಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ನೆರದಿದ್ದರು. ಭಜನೆ ಹಾಗೂ ಪ್ರಸಾದ ವಿನಿಯೋಗವಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ