ಹುಳಿಯಾರುಪಟ್ಟಣದ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ರಂಗನಾಥ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಕೊಳವೆಬಾವಿ ಕೊರೆಯಲಾಯಿತು.ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಇಂಜಿನಿಯರ್ ಶಿವಾನಂದ್ ಈ ಯೋಜನೆಯಡಿ ಹುಳಿಯಾರು ಪಟ್ಟಣದ ಮಾರುತಿನಗರ,ಆಜಾದ್ ನಗರ ಹಾಗೂ ಇಂದಿರಾನಗರದಲ್ಲಿ ಒಟ್ಟು ಮೂರು ಕೊಳವೆಬಾವಿ ಕೊರೆಯಲಾಗಿದ್ದು ಕಿರುನೀರು ಸರಬರಾಜು ಯೋಜನೆಯಡಿ ಸುರಕ್ಷಿತ ನೀರು ಪೂರೈಸಲಾಗುತ್ತಿದೆ ಎಂದರು. ತಲಾ ನಾಲ್ಕರಿಂದ ಐದು ಲಕ್ಷ ರೂ ವೆಚ್ಚದಲ್ಲಿ ಘಟಕ ಸ್ಥಾಪಿಸಲಾಗುತ್ತಿದ್ದು ಪ್ರತಿದಿನ ಪ್ರತಿ ವ್ಯಕ್ತಿಗೆ ತಲಾ ೫೫ ಲೀಟರ್ ನಂತೆ ನೀರು ಪೂರೈಸಲಾಗುವುದೆಂದರು.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಹುಳಿಯಾರು ರಂಗನಾಥ ಸ್ವಾಮಿ ದೇವಾಲಯದ ಪ್ರಾಂಗಂಅದಲ್ಲಿ ಕೊಳವೆ ಬಾವಿ ಕೊರೆಯಲಾಯಿತು.ದೇವಾಲಯ ಸಮಿತಿಯ ರಂಗನಾಥ್,ವಿಶ್ವನಾಥ್,ಶೇಷಾದ್ರಿ ಮತ್ತಿತರರಿದ್ದಾರೆ.
|
ಈ ವೇಳೆ ದೇವಾಲಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಂಗನಾಥ ಶೆಟ್ರು,ಸಿ.ವಿಶ್ವನಾಥ್,ಗ್ರಾಪಂ ಸದಸ್ಯ ರಂಗನಾಥ್ ,ಅರ್ಚಕ ಪದ್ಮರಾಜು,ಶೇಷಾದ್ರಿ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ