ಹುಳಿಯಾರು ಹೋಬಳಿಯ ತಮ್ಮಡಿಹಳ್ಳಿಯ ಸಿದ್ದರಾಮೇಶ್ವರ ಸ್ವಾಮಿಯ ತೆಪ್ಪೋತ್ಸವ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಸಂಭ್ರಮ ಸಡಗರದಿಂದ ಜರುಗಿತು.ಯಳನಡು ಅರಸೀಕೆರೆ ಮಹಾಸಂಸ್ಥಾನ ಮಠದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಕುಪ್ಪೂರು ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರೆವೇರಿತು.
ಹುಳಿಯಾರುಹೋಬಳಿಯ ತಮ್ಮಡಿಹಳ್ಳಿಯ ಸಿದ್ದರಾಮೇಶ್ವರ ಸ್ವಾಮಿಯ ತೆಪ್ಪೋತ್ಸವ ಸಹಸ್ರಾರು ಭಕ್ತರ ಉಪಸ್ಥಿತಿಯಲ್ಲಿ ಸಂಭ್ರಮ ಸಡಗರದಿಂದ ಜರುಗಿತು. |
ಸಿದ್ದರಾಮೇಶ್ವರ ಸ್ವಾಮಿ ದೇಗುಲದಲ್ಲಿ ಪುಣ್ಯಹ, ಗಂಗಾಸ್ನಾನ, ಫಲಹಾರಸೇವೆ ಜರುಗಿತು.ನಂತರ ಸಿದ್ಧರಾಮೇಶ್ವರ ಸ್ವಾಮಿ ಹಾಗೂ ಗ್ರಾಮದೇವತೆ ಕರಿಯಮ್ಮ ದೇವಿಯನ್ನು ನಡೆಮುಡಿ ಉತ್ಸವದಲ್ಲಿ ಕೆರೆಯ ಬಳಿ ಕರೆತಂದು ವಿಶೇಷ ಪೂಜೆ ಸಲ್ಲಿಸಿ ನೆರದಿದ್ದ ಭಕ್ತಾಧಿಗಳಿಗೆ ಫಲಹಾರ ಹಂಚಲಾಯಿತು.ಬ್ಯಾರೆಲ್,ಹಲಗೆ ಜೋಡಿಸಿ ಪುಷ್ಪಗಳೊಂದಿಗೆ ಅಲಂಕೃತಗೊಂಡ ತೆಪ್ಪದಲ್ಲಿ ದೇವರನ್ನು ಪ್ರತಿಷ್ಠಾಪಿಸಿ ಸ್ವಾಮೀಜಿಗಳೊಂದಿಗೆ ಮೂರು ಸುತ್ತು ಕೆರೆಯಲ್ಲಿ ಪ್ರದಕ್ಷಿಣೆ ಹಾಕಿಸಲಾಯಿತು.ಬಳಿಕ ಗ್ರಾಮದೇವತೆ ಕರಿಯಮ್ಮನ ತೆಪ್ಪೋತ್ಸವ ನೆರವೇರಿಸಲಾಯಿತು.
ಲಾಗಾಯ್ತಿನಿಂದಲೂ ಸ್ವಾಮಿಯ ಜಾತ್ರೆ ನಡೆದುಕೊಂಡು ಬರುತ್ತಿದ್ದು ಕೆರೆಕೋಡು ಬಿದ್ದ ಸಂದರ್ಭದಲ್ಲಿ ತೆಪ್ಪೋತ್ಸವ ಮಾಡಿಕೊಂಡು ಬರುತ್ತಿದ್ದು ಈ ಬಾರಿ ಕೂಡ ೧೬ ವರ್ಷಗಳ ನಂತರ ಕೆರೆಕೋಡಿ ಬಿದ್ದ ಶುಭ ಸಂದರ್ಭದ ನಿಮಿತ್ತ ತೆಪ್ಪೋತ್ಸವ ಹಮ್ಮಿಕೊಳ್ಳಲಾಗಿತ್ತು.ಯಳನಾಡು ಗ್ರಾಮಪಂಚಾಯ್ತಿ ಅಧ್ಯಕ್ಷ ಬಸವರಾಜು,ಮುಖಂಡರಾದ ವಿಶ್ವೇಶ್ವರಯ್ಯ,ರೈತಸಂಘದ ಮಲ್ಲೀಕಾರ್ಜುನಯ್ಯ ಮತ್ತಿತರರು ಉಪಸ್ಥಿತರಿದ್ದರು.ಸ್ವಾಮಿಯ ತೆಪ್ಪೋತ್ಸವ ನೋಡಲು ಹುಳಿಯಾರು, ಕೆಂಕೆರೆ, ಕೋರಗೆರೆ, ಯಳನಡು, ಹೊಸಹಳ್ಳಿ, ಸೀಗೆಬಾಗಿ, ಗೊಲ್ಲರಕಟ್ಟಿ, ಭಟ್ಟರಹಳ್ಳಿ, ಸೀಗೆಬಾಗಿ, ಸಿಂಗಾಪುರ ಹೀಗೆ ಸುತ್ತಮುತ್ತಲ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ