ಕೊಬ್ಬರಿ ಮಾರುಕಟ್ಟೆ ಇತಿಹಾಸದಲ್ಲೇ ಕ್ವಿಂಟಲ್‌ಗೆ ಗರಿಷ್ಟ ರೂ. ೧೯,೦೫೦ಕ್ಕೆ ಮಾರಾಟವಾಗಿ ಇಪ್ಪತ್ತರ ಗಡಿ ತಲುಪುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ವರ್ಷದ ಆರಂಭದಿಂದಲೂ ಇಳಿಮುಖವಾಗುತ್ತ ಬಂದಿರುವ ಧಾರಣೆ ಈ ದೀಪಾವಳಿಯಲ್ಲೂ ಸಹ ಏರಿಕೆ ಕಾಣದ ರೈತರನ್ನು ನಿರಾಸೆ ಮಡುವಿನಲ್ಲೇ ಮುಳುಗಿಸಿದೆ..
ಕಳೆದ ವರ್ಷ ಕೊಬ್ಬರಿ ಧಾರಣೆ ಏರುಮುಖ ಕಂಡು ಸಮಾಧಾನಪಟ್ಟಿದ್ದ ರೈತರಿಗೆ ಕಳೆದ ಮೂರ್ನಾಲ್ಕು ತಿಂಗಳಿಂದ ಮತ್ತೆ ಇಳಿಯುತ್ತಿರುವ ಕೊಬ್ಬರಿ ಧಾರಣೆ ಕುಸಿತ ಕಳವಳಕ್ಕೀಡು ಮಾಡಿದೆ.
ಕಳೆದ ಎರಡು ವರ್ಷಗಳ ಹಿಂದೆ ಕ್ವಿಂಟಲ್ ಕೊಬ್ಬರಿ ಧಾರಣೆ ಐದು-ಆರು ಸಾವಿರ ರೂ.ದಾಟದೆ ತೆವಳುತ್ತಿದ್ದರಿಂದ ರೈತರು ನಿರಾಶರಾಗಿದ್ದರು. ತದನಂತರ ಅನಿರೀಕ್ಷಿತವಾಗಿ ಧಾರಣೆ ದಿಢೀರ್ ಚೇತರಿಸಿಕೊಂಡು ಏರುಗತಿಯಲ್ಲಿ ಸಾಗಿ, ಕಳೆದ ವರ್ಷ ಆಗಸ್ಟ್- ಸೆಪ್ಟಂಬರ್ ನಲ್ಲಿ ೧೯,೦೫೦ ರೂ.ಗೆ ಏರಿ ಧಾರಣೆ ಸರ್ವಕಾಲಿಕ ದಾಖಲೆಯಾಗಿತ್ತು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ೨೦೦೦೦ ರೂ. ದಾಟಿ ೨೫,೦೦೦ ತಲುಪುವುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ನಂತರ ಏರಿಳಿತ ಕಾಣತೊಡಗಿ ಇದೀಗ ೧೧ ಸಾವಿರದ ಅಜುಬಾಜಿಗೆ ಬಂದು ನಿಂತಿದೆ.
ಮಾರ್ಚ್‌ನಲ್ಲಿ ಕುಸಿತ ಕಂಡರೂ ಮತ್ತೆ ಚೇತರಿಸಿಕೊಂಡು ಜೂನ್ ಅಂತ್ಯದ ವೇಳೆ ೧೫ ಸಾವಿರ ಆಸುಪಾಸಿನಲ್ಲಿ ಸ್ಥಿರತೆ ಕಂಡಿತ್ತು. ದೀಪಾವಳಿ ಸಮಯದಲ್ಲಿ ಏರಿಕೆ ನಿರೀಕ್ಷಿಸಲಾಗಿತ್ತಾದರೂ ಸಹ ಲೆಕ್ಕಾಚಾರ ಉಲ್ಟಾಆಗಿ ಕುಸಿತ ಕಾಣುಯ್ಯಾ ಬಂದು ದೀಪಾವಳಿಯ ಹಿಂದಿನ ಗುರುವಾರ ಹುಳಿಯಾರು ಮಾರುಕಟ್ಟೆಯಲ್ಲಿ ೧೧,೧೧೨ರೂ ದಾಖಲಾಗಿದೆ.ಬೆಲೆ ಕುಸಿತದಿಂದ ಆವಕದ ಪ್ರಮಾಣ ಕಡಿಮೆಯಿದ್ದು , ಎಲ್ಲರೂ ಹೆಚ್ಚಿನ ಬೆಲೆಗೆ ಕಾಯುತ್ತಾ ಕೊಬ್ಬರಿಯನ್ನು ದಾಸ್ತಾನು ಮಾಡಿದ್ದಾರೆ.
ಶನಿವಾರ ತಿಪಟೂರಿನಲ್ಲಿ ಕೊಬ್ಬರಿಬೆಲೆ ೧೨,೦೧೦ರೂ ದಾಖಲಾಗಿದ್ದು, ಮಂಗಳವಾರ ಅರಸೀಕೆಯಲ್ಲಿ ಹರಾಜು ನಡೆಯಲಿದ್ದು, ಅಲ್ಪಮಟ್ಟದ ಏರಿಕೆಕಾನಬಹುದೆಂದು ನಿರೀಕ್ಷಿಸಲಾಗಿದೆ. ಒಟ್ಟಾರೆ .ಹಬ್ಬದ ಸಮಯದಲ್ಲಿ ಏರಿಕೆಯಾಗಬೇಕಿದ್ದ ಕೊಬ್ಬರಿ ಬೆಲೆ ಕುಸಿತ ಕಂಡು ಆರ್ಥಿಕ ಸಂಕಷ್ಟದಲ್ಲಿದ್ದ ಬೆಳೆಗಾರರಿಗೆ ಮಂಕು ಕವಿಯುವಂತೆ ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ