ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಹಕಾರ ಸಂಘದ ಕಟ್ಟಡದಲ್ಲಿನ ಬಾರ್ ತೆರವುಗೊಳಿಸಲು ಗಡುವು

ಸಾರ್ವಜನಿಕರಿಗೆ ಸಮಸ್ಯೆಯಾಗಿರುವ ಬಾರ್ ನವೀಕರಿಸದಿರಲು ಜಿಲ್ಲಾಧಿಕಾರಿಗಳಿಗೆ ಮನವಿ ---------------- ಹುಳಿಯಾರು :ಜನನಿಬೀಡ ಪ್ರದೇಶದಲ್ಲಿರುವ ಹಾಗೂ ಅಬ್ಕಾರಿ ನಿಯಮ ಉಲ್ಲಂಘಿಸಿ ನಿಯಮಬಾಹಿರವಾಗಿ ನಡೆಯುತ್ತಿರುವ ರಂಗನಾಥ ಲಿಕ್ಕರ್ ಶಾಪ್ ಮದ್ಯದಂಗಡಿಯ ಸನ್ನದ್ದನ್ನು ರದ್ದು ಮಾಡಿ ೨೦೧೬-೧೭ನೇ ಸಾಲಿಗೆ ಪುನರ್ ನವೀಕರಣ ಮಾಡದಂತೆ ಪಟ್ಟಣದ ವಿವಿಧ ಸಂಘಸಂಸ್ಥೆಗಳು ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು.                    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿ ಪಟ್ಟಣದ ಟೌನ್ ಕೋ ಆಪರೇಟಿವ್ ಕಟ್ಟಡದಲ್ಲಿ ನಡೆಯುತ್ತಿರುವ ರಂಗನಾಥ ಲಿಕ್ಕರ್ ಶಾಪ್ ಅನ್ನು ಸದರಿ ಸ್ಥಳದಿಂದ ತೆರವು ಮಾಡಿಸುವ ಕುರಿತಂತೆ ತಾಲ್ಲೂಕ್ ರೈತಸಂಘದ ನೇತೃತ್ವದಲ್ಲಿ ಹೋಬಳಿ ರೈತಸಂಘ,ಸೃಜನಾ ಸ್ತ್ರೀಶಕ್ತಿ ಮಹಿಳಾ ಒಕ್ಕೂಟ,ಕರ್ನಾಟಕ ರಕ್ಷಣ ವೇದಿಕೆ,ಜಯಕರ್ನಾಟಕ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.                 ರಾಷ್ಟ್ರೀಯ ಹೆದ್ದಾರಿಗೆ ೧೧೬ ಮೀಟರ್ ಅಂತರದಲ್ಲಿ ಮಧ್ಯದಂಗಡಿಯಿದ್ದು ಸುಪ್ರೀಮ್ ಕೋರ್ಟ್ ಮಾರ್ಗಸೂಚಿಯಂತೆ ಹೆದ್ದಾರಿ ಸಮೀಪದಲ್ಲಿ ಮದ್ಯದಂಗಡಿ ನಡೆಸುವದಕ್ಕೆ ಅವಕಾಶವಿಲ್ಲದಿದ್ದರೂ ಕೂಡ ಅವಕಾಶ ಮಾಡಿರುವುದು ಸರಿಯಲ್ಲ .ಅಲ್ಲದೆ ಮುಜುರಾಯಿ ಇಲಾಖೆಯ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯಕ್ಕೂ ಕೂಡ ಅತಿ ಸಮೀಪವಿರುವುದರಿಂದ ಮುಜುರಾಯಿ ಇಲಾಖೆಯ ಮಾರ್ಗಸೂಚಿಯಂತೆ ದೇವಾಲಯಕ್ಕೆ ಸಮ

ಬೆಸ್ಕಾಂ ಗ್ಯಾಂಗ್‌ಮನ್‌ ತಂಡಕ್ಕೆ ಸಂಬಳವೂ ಇಲ್ಲಾ,ಕೆಲಸವೂ ಇಲ್ಲಾ.

ಅಪಾಯಕಾರಿ ಕೆಲಸ ನಿರ್ವಹಿಸುವ ಇವರಿಗೆ ಒಪ್ಪತ್ತಿನ ಊಟಕ್ಕೂ ತತ್ವಾರ --------------------------------------------------------- ವರದಿ:ಡಿ.ಆರ್.ನರೇಂದ್ರ ಬಾಬು ಹುಳಿಯಾರು: ತಿಪಟೂರು ಬೆ.ವಿ.ಕಂ ವಿಭಾಗದ ಮಾನ್ಸೂನ್ ಗ್ಯಾಂಗ್ಮನ್ ಉದ್ಯೋಗಿಗಳಿಗೆ ಇತ್ತ ಕೆಲಸವೂ ಇಲ್ಲ,ಅತ್ತ ಸಂಬಳವೂ ಇಲ್ಲ ಎಂಬ ತ್ರಿಶುಂಕು ಸ್ಥಿತಿ ನಿರ್ಮಾಣವಾಗಿದೆ. ಯಾರಿವರು: ಮಳೆಗಾಲದಲ್ಲಿ ಸಮರ್ಪಕವಾದ ವಿದ್ಯುತ್ ಸರಬರಾಜು ಮಾಡುವ ಉದ್ದೇಶದಿಂದ ಇಲಾಖೆ ಮಾನ್ಸೂನ್ ಸಿಬ್ಬಂದಿಯನ್ನು ಅಲ್ಪ ಅವಧಿಗಾಗಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳತ್ತದೆ. ಮಳೆಗಾಳಿಯಿಂದ ವಿದ್ಯುತ್‌ ತಂತಿಗಳ ಮೇಲೆ ಬೀಳುವ ಮರಗಳು ಅಥವಾ ಹೊಸದಾಗಿ ಸಂಪರ್ಕ ಮಾರ್ಗದ ಕಾಮಗಾರಿ ಕೈಗೊಳ್ಳುವಾಗ ಅಡ್ಡವಾಗುವ ಮರಗಳ ತೆರವಿಗೆ ಇವರುಗಳನ್ನು ಬಳಸಿಕೊಳ್ಳಲಾಗುತ್ತದೆ.ಇದಕ್ಕಾಗಿ ಹೊರಗುತ್ತಿಗೆ ಪಡೆಯುವ ಖಾಸಗಿ ಕಂಪೆನಿಗಳು ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಅಂದರೆ ಮಾನ್ಸೂನ್ ಆರಂಭದ ಸಮಯದಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವುದಿದ್ದು ಇವರುಗಳನ್ನು 'ಮಾನ್ಸೂನ್ ಗ್ಯಾಂಗ್ ಮನ್‌ಗಳು' ಎನ್ನುತ್ತಾರೆ. ಹುಳಿಯಾರು ಬೆ.ವಿ.ಕಂ ಕಚೇರಿ. ವರ್ಷಕ್ಕೆ ೬ ತಿಂಗಳಿಗೆ ಮಳೆಗಾಲದ ಅವಧಿಗೆ ಮಾತ್ರ ಕೆಲಸ ನೀಡುವ ಗುತ್ತಿಗೆದಾರರು ಇವರನ್ನು ಮೂರು ತಿಂಗಳಿನ ನಂತರ ಮುಂದಿನ ಆರು ತಿಂಗಳಿಗೆ ಪುನಃ ನೇಮಿಸಿಕೊಳ್ಳುತ್ತದೆ. ತಿಪಟೂರು ಬೆ.ವಿ.ಕಂ ವಿಭಾಗದಲ್

ಇಂದು ಕೆಂಪೇಗೌಡ ಜಯಂತಿ ಹಾಗೂ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಉದ್ಘಾಟನೆ

                          ಹುಳಿಯಾರು ಪಟ್ಟಣದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಹಾಗೂ ಕೆಂಪೇಗೌಡ ಜಯಂತಿಯನ್ನು ಜೂ.25ರ ಶನಿವಾರದಂದು ಅಂಬೇಡ್ಕರ್ ಭವನದಲ್ಲಿ ಬೆ.೧೧ ಕ್ಕೆ ಹಮ್ಮಿಕೊಳ್ಳಲಾಗಿದೆ.ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿಯ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕ್ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಪರಮೇಶ್ವರಪ್ಪ ವಹಿಸಲಿದ್ದಾರೆ.               ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಶ್ರೀನಿವಾಸಮೂರ್ತಿ,ರಾಜಣ್ಣ,ಒಕ್ಕಲಿಗರ ನೌಕರರ ವೇದಿಕೆಯ ಅಧ್ಯಕ್ಷ ಪ್ರಕಾಶ್,ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಂಗಯ್ಯ,ಜಿಪಂ ಸದಸ್ಯರುಗಳಾದ ಮಂಜುಳಮ್ಮ,ರಾಮಚಂದ್ರಯ್ಯ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.                                                                                                                                                                              ಸಮುದಾಯದವರು  ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಸಹಕಾರ ಸಂಘದ ಗೌರವಾಧ್ಯಕ್ಷ ಸೀತಾರಾಮಯ್ಯ ಮನವಿ ಮಾಡಿದ್ದಾರೆ.

ಸೋಮನಹಳ್ಳಿ ಶಾಲೆಯಲ್ಲಿ ಶಿಕ್ಷಕರ ಕೊರತೆ

ಹಿಂದುಳಿದ ವರ್ಗದ ಮಕ್ಕಳಿಗೆ ಮರೀಚಿಕೆಯಾದ ಶಿಕ್ಷಣ ---------------------------------- ವರದಿ :ಡಿ.ಆರ್.ನರೇಂದ್ರಬಾಬು ಹುಳಿಯಾರು:  ಹೋಬಳಿಯ ಗಾಣಧಾಳು ಪಂಚಾಯ್ತಿಯ ಸೋಮನಹಳ್ಳಿ ಗ್ರಾಮದ ಜಿ.ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠಶಾಲೆಯು ಕಳೆದ ಎರಡು ವರ್ಷಗಳಿಂದಲೂ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದ್ದು, ಮಕ್ಕಳಿಗೆ ಸಮರ್ಪಕವಾದ ಶಿಕ್ಷಣ ಮರೀಚಿಕೆಯಾಗಿದೆ. ಒಂದರಿಂದ ಏಳನೇ ತರಗತಿಯವರೆಗೆ ಒಟ್ಟು ೧೫೦ ವಿದ್ಯಾರ್ಥಿಗಳಿದ್ದು ಮಂಜೂರಾಗಿರುವ ಏಳು ಶಿಕ್ಷಕ ಹುದ್ದೆಯ ಪೈಕಿ ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.ಶಿಕ್ಷಕರ ವರ್ಗಾವಣೆ ಹಾಗೂ ನಿವೃತ್ತಿಯಿಂದ ಐದು ಹುದ್ದೆಗಳು ಖಾಲಿಯಿದ್ದು ಹುದ್ದೆಗಳು ಭರ್ತಿಯಾಗದ ಕಾರಣ ದೈನಂದಿನ ಪಾಠ ಪ್ರವಚನಕ್ಕೆ ಅಡಚಣೆಯಾಗಿದೆ.ಇರುವ ಇಬ್ಬರು ಶಿಕ್ಷಕರಲ್ಲಿ ರಾಜಣ್ಣ ಮುಖ್ಯಶಿಕ್ಷಕರಾಗಿದ್ದು ಕಛೇರಿಯ ಕಡತ ನಿರ್ವಹಣೆ ಜೊತೆಗೆ ಬಿಸಿಯೂಟದ ,ಕ್ಷೀರಭಾಗ್ಯ, ಸಮವಸ್ತ್ರ ವಿತರಣೆ ,ನಲಿಕಲಿಯಂತಹ ಹತ್ತಾರು ಜವಬ್ದಾರಿ ನೋಡುವುದರಲ್ಲೆ ಕಾಲ ಮುಗಿಯುವುದರಿಂದ ಶಾಲೆಯತ್ತ ಹೆಚ್ಚಿನ ಗಮನ ನೀಡಲು ಸಾಧ್ಯವಾಗುವುದಿಲ್ಲ.ಇನ್ನುಳಿದ ಸಹಶಿಕ್ಷಕರೊಬ್ಬರೆ 1ರಿಂದ 7ನೇ ತರಗತಿಗಳನ್ನು ನಿಭಾಯಿಸಬೇಕಾಗಿದೆ. ಕಳೆದ ಎರಡು ವರ್ಷಗಳಿಂದಲೂ ಈ ಬಗ್ಗೆ ಇಲಾಖೆ ಕ್ರಮ ಕೈಗೊಳ್ಳದಿರುವುದರಿಂದ ಶಾಲೆಯ ಶೈಕ್ಷಣಿಕ ಪ್ರಗತಿ ಇಳಿಮುಖವಾಗುತ್ತಿದೆ.ಶಿಕ್ಷಕರ ಕ

ಸಂಪುಟದಲ್ಲಿ ಬಲಿಜ ಸಮುದಾಯಕ್ಕೆ ಸ್ಥಾನ :ಹುಳಿಯಾರು ಬಲಿಜ ಸಂಘದಿಂದ ಶ್ಲಾಘನೆ.

ಹುಳಿಯಾರು: ಬಲಿಜ ಸಮುದಾಯದ ಎಂ.ಆರ್.ಸೀತಾರಾಂ ರವರಿಗೆ ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹುಳಿಯಾರು ಹೋಬಳಿ ಬಲಿಜಸಂಘವು ಅಬಾರಿಯಾಗಿದೆ ಎಂದು ಬಲಿಜ ಸಂಘದ ಬಡಗಿ ರಾಮಣ್ಣ ಸಂತಸ ವ್ಯಕ್ತಪಡಿಸಿದರು. ರಾಜ್ಯ ಸರಕಾರದಲ್ಲಿ ನೂತನ ಸಚಿವರಾಗಿ ನೇಮಕಗೊಂಡ ಬಲಿಜ ಸಮುದಾಯದ ಎಂ.ಆರ್.ಸೀತಾರಾಂ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದಿಸಿದ ಹುಳಿಯಾರು ಹೋಬಳಿ ಬಲಿಜ ಸಂಘದ ಮುಖಂಡರು ನಂತರ ಮಾತನಾಡಿ ಇದುವರೆಗೂ ಪ್ರಾತಿನಿಧ್ಯ ಸಿಗದ ಬಲಿಜ ಸಮುದಾಯ ದವರನ್ನ ಗುರುತಿಸಿ ಸಚಿವಸ್ಥಾನ ನೀಡಿದಕ್ಕೆ ಶ್ಲಾಘಿಸಿದರು. ನಮ್ಮ ಬಲಿಜ ಸಮುದಾಯದ ಪ್ರತಿಯೊಬ್ಬರು ಸಹಾ ರಾಜಕೀಯ, ಶಿಕ್ಷಣ, ಕಲೆ, ಸಾಹಿತ್ಯ ಸೇರಿದ್ದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹಾ ತಮ್ಮನ್ನ ತಾವು ತೊಡಗಿಸಿಕೊಳ್ಳುವ ಮುಲಕ ಅಭಿವೃದ್ದಿಯನ್ನ ಹೊಂದಿ ಸಮಾಜದಲ್ಲಿ ನೊಂದ ಜನರಿಗೆ ಸಹಾಯ ಮಾಡುವ ಮನೋಭಾವ ಮೂಡಿಸಿಕೊಳ್ಳುವಂತೆ ಸಲಹೆ ನೀಡಿದರು. ಈ ನಿಯೋಗದಲ್ಲಿ ಹುಳಿಯಾರು ಹೋಬಳಿ ಬಲಿಜ ಸಂಘದ ಮುಖಂಡ ಶಂಕರಣ್ಣ, ನಿವೃತ್ತ ಶಿಕ್ಷಕ ವರದಯ್ಯ, ತಾ.ಪಂ.ಸದಸ್ಯ ಹೆಚ್.ಎನ್.ಕುಮಾರ್, ಗ್ರಾಪಂ ಸದಸ್ಯರುಗಳಾದ ವೆಂಕಟೇಶ್, ಹೇಮಂತ್, ಗ್ರಾಪಂ ಮಾಜಿ ಉಪಾಧ್ಯಕ್ಷೆ ವೆಂಕಟಮ್ಮ, ಹೂವಿನ ಬಸವರಾಜು, ಮೂರ್ತಿ, ತಾಲ್ಲೂಕು ಬಲಿಜ ಸಂಘದ ಮುಖಂಡರಾದ ಲಕ್ಷ್ಮಣ್, ರಮೇಶ್, ರಾಮಪ್ಪ ಮತ್ತಿತರರಿದ್ದರು.

ಕರ್ತವ್ಯ ನಿರ್ವಹಿಸಿದ ಹುಳಿಯಾರು ಪೊಲೀಸರು

ಹುಳಿಯಾರು: ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿದ್ದ ಜೂ.೪ ರ ಪೊಲೀಸರ ಪ್ರತಿಭಟನೆಯ ಬಗ್ಗೆ ಶನಿವಾರದಂದು ಪಟ್ಟಣದ ಠಾಣೆಯಲ್ಲಿ ಯಾವುದೇ ಪ್ರತಿಕ್ರಿಯೆ ಕಂಡುಬಾರದೆ,ಪ್ರತಿಭಟೆನೆಯ ಸೊಲ್ಲು ಕೇಳದಂತೆ ಠಾಣೆಯಲ್ಲಿ ಎಂದಿಗಿಂತಲೂ ಹೆಚ್ಚಿನ ಹಾಜರಾತಿ ಕಾಣುವುದರ ಮೂಲಕ ಪೊಲೀಸರು ಕರ್ತವ್ಯ ನಿರ್ವಹಿಸಿದರು.         ಠಾಣೆಯ ಎಲ್ಲಾ ೨೬ ಮಂದಿ ಪೊಲೀಸರು ಹಾಜರಾಗಿ ಮುಂಜಾನೆಯಿಂದ ಸಂಜೆಯವರೆಗೂ ಠಾಣೆಯೆಲ್ಲಿಯೇ ಕಾರ್ಯನಿರ್ವಹಿಸಿದ್ದಲ್ಲದೆ ,ಒಟ್ಟಿಗೆ ಸೇರಿದ ಸಂಭ್ರಮಕ್ಕೆ ತಿಂಡಿ ಊಟ ಕೂಡ ಅಲ್ಲೇ ಸೇವಿಸಿದರು.              ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಾಮೂಹಿಕ ರಜೆ ಹಾಕಿ ಪ್ರತಿಭಟಿಸುವುದಾಗಿ ಹೇಳಿದ್ದ ಪೊಲೀಸರು ಎಸ್ಮಾ ಭೀತಿಯಿದಲೋ ಎನೋ ಈ ಬಗ್ಗೆ ಮಾತೆ ಎತ್ತದಿದ್ದು ಅಚ್ಚರಿಗೆ ಕಾರಣವಾಯಿತು.ಪೊಲೀಸ್ ಠಾಣೆಯ ಬಳಿಯಿರುವ ವಸತಿ ಗೃಹಗಳಲ್ಲೂ ಪೊಲೀಸ್ ಕುಟುಂಬದವರಿಂದ ಯಾವುದೇ ಪ್ರತಿಭಟನೆಯ ಮಾತು ಕೇಳಿಬರಲಿಲ್ಲ.ಠಾಣೆಯಲ್ಲಾಗಲಿ .ಸಿಬ್ಬಂದಿ ವಸತಿ ಗೃಹಗಳ ಬಳಿಯಲ್ಲಾಗಲಿ ಎಲ್ಲೂ ಪ್ರತಿಭಟನೆಯ ವಾತಾವರಣವೆ ಕಂಡುಬರಲಿಲ್ಲ. ಹುಳಿಯಾರು ಠಾಣೆಯಲ್ಲಿ ಯಾವುದೇ ಪ್ರತಿಭಟನೆಯ ವಾತವಾರಣ ಕಂದು ಬಾರದೆ ಪೊಲೀಸರು ಠಾಣೆಯೆಲ್ಲಿಯೇ ಕಾರ್ಯನಿರ್ವಹಿಸಿದ್ದಲ್ಲದೆ ,ಒಟ್ಟಿಗೆ ಸೇರಿದ ಸಂಭ್ರಮಕ್ಕೆ ತಿಂಡಿ ಊಟ ಕೂಡ ಅಲ್ಲೇ ಸೇವಿಸಿದರು.               ಈ ಬಗ್ಗೆ ಪತ್ರಿಕೆಯ ಪ್ರಶ್ನೆಗಳಿಗೆ ಉತ್ತರಿಸಿದ ಪಿಎಸೈ ಪ್ರವೀಣ್ ಕುಮಾರ್ ಪೊಲೀಸ್ ಇಲಾಖೆ ಶಿಸ್

ಹುಳಿಯಾರಿನಲ್ಲಿ ನಿಧಿ ಆಸೆಗಾಗಿ ದೇವಿ ವಿಗ್ರಹ ವಿರೂಪ

ದೇವಿಯ ಪೀಠದಡಿಯಲ್ಲಿ ನಿಧಿಯಿರಬಹುದೆಂದು ಬಗೆದ ಕಳ್ಳರು ದೇವಸ್ಥಾನದ ಬಾಗಿಲು ಬಗ್ಗಿಸಿ ಅಮ್ಮನವರ ಮೂರ್ತಿಯನ್ನು ಕಿತ್ತು ಪಕ್ಕಕ್ಕೆಸದು ಪೀಠದ ಸುತ್ತ ಹುಡುಕಾಡಿ ಏನೂ ದೊರೆಯದೆ ಹಾಗೆ ಬಿಟ್ಟು ಪರಾರಿಯಾಗಿರುವ ಘಟನೆ ಪಟ್ಟಣದ ಹೊರವಲಯದಲ್ಲಿರುವ ಕೆಂಚಮ್ಮನ ತೋಪಿನ ಕೆಂಚಮ್ಮನ ದೇವಾಲಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಶನಿವಾರ ಬೆಳಿಗ್ಗೆ ದುರ್ಗಮ್ಮನ ದೇವಸ್ಥಾನದ ಕನ್ವೀನರ್ ವಿಶ್ವಣ್ಣ ಮುಂಜಾನೆ ಕೆರೆ ಏರಿ ಮೇಲೆ ಪೂಜೆಗೆಂದು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಕೆಂಚಮ್ಮನ ಸಮಿತಿಯವರು ಬಂದು ಪರಿಶೀಲಿಸಲಾಗಿ ದುಷ್ಕರ್ಮಿಗಳು ದೇವಸ್ಥಾನದ ಬೀಗ ಮುರಿಯದೆ ಕಬ್ಬಿಣದ ಗೇಟನ್ನು ಮೀಟಿ ಒಳಹೊಕ್ಕಿದ್ದು ಕಂಡು ಬಂದಿದ್ದು ನಿಧಿ ಆಸೆಗಾಗಿ ಈ ಕೃತ್ಯ ನಡೆದಿರಬಹುದೆಂದು ಅಭಿಪ್ರಾಯ ವ್ಯಕ್ತವಾಯಿತು.                  ದುರ್ಗಾಪರಮೇಶ್ವರಿ ದೇವಾಲಯದ ಧರ್ಮದರ್ಶಿ ಶಿವಕುಮಾರ್, ಕೆಂಚಮ್ಮನ ದೇವಾಲಯದ ಕಾರ್ಯದರ್ಶಿ ಷಡಾಕ್ಷರಿ, ನಂಜುಂಡಪ್ಪ,ಮಲ್ಲಿಕಾರ್ಜುನಯ್ಯ, ಕುಮಾರ್,  ಬಡಗಿ ರಾಮಣ್ಣ,ಪಟೇಲ್ ರಾಜ ಕುಮಾರ್, ಚನ್ನಬಸವಯ್ಯ ಮುಂತಾದವರು ಸ್ಥಳದಲ್ಲಿದ್ದು ಮುಂದೇನು ಮಾಡುವುದೆಂದು ಸಭೆ ಸೇರಿದ್ದರು.ಕೆಂಚಮ್ಮನವರು ಮೂರ್ತಿ ಭಿನ್ನವಾಗಿದ್ದು ಸಂಜೆ ಅಮ್ಮನವರ ಅಪ್ಪಣೆ ಪಡೆದು ಮುಂದೇನು ಮಾಡುವುದೆಂದು ತೀರ್ಮಾನಿಸುವುದಾಗಿ ಕೆಂಚಮ್ಮ ದೇವಿ ದೇವಾಲಯ ಸಮಿತಿಯ ಅಧ್ಯಕ್ಷ ಶಿವನಂಜಪ್ಪ ತಿಳಿಸಿದರು.         ಒಟ್ಟಾರೆ ಘಟನೆಯಿಂದ ಊರಿನ ಎಲ್ಲಾ ದೇವಸ್ಥಾನ ಸಮಿತ

ಇಂದಿನಿಂದ ಶನೈಶ್ವರ ಜಯಂತಿ

ಹುಳಿಯಾರು ಪಟ್ಟಣದ ಜ್ಯೋತಿಪಣ ಗಾಣಿಗರ ಸಂಘ,ಶನೈಶ್ವರ ಸ್ವಾಮಿ ಜೀರ್ಣೋದ್ಧಾರ ಛಾರಿಟಬಲ್ ಟ್ರಸ್ಟ್,ಜ್ಯೋತಿಪಣ ಯುವಕರ ಸಂಘದಿಂದ ಗಾಂಧಿಪೇಟೆಯಲ್ಲಿನ ಶನೈಶ್ವರ ಸ್ವಾಮಿಗೆ ೧೨ ನೇ ವರ್ಷದ ಕುಂಭಾಭಿಷೇಕವನ್ನು ಜೂ.೪ರ ಶನಿವಾರ ಹಾಗೂ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ.         ಶನಿವಾರದಂದು ಗ್ರಾಮದೇವತೆಗಳಾದ ಶ್ರೀ ಹುಳಿಯಾರಮ್ಮ ಹಾಗೂ ದುರ್ಗಮ್ಮನವರ ಆಗಮನದೊಂದಿಗೆ ಸಂಜೆ ಪುಣ್ಯಾಹ ,ದೇವನಾಂದಿ,ಪ್ರಧಾನ ಕಳಸ ಹಾಗು ನವಗ್ರದ ಕಳಸಗಳ ಸ್ಥಾಪನೆ ನಡೆಯಲಿದೆ.          ಭಾನುವಾರದಂದು ಬೆಳಿಗ್ಗೆ ನವಗ್ರಹ ಹೋಮ,ಗಣಪತಿ ಹೋಮ,ಮೃತ್ಯುಂಜಯ ಹೋಮ,ಶನೈಶ್ವರ ಹೋಮ,ಅಭಿಷೇಕ ನಡೆದು ಮಧ್ಯಾಹ್ನ ೧೨.೪೦ಕ್ಕೆ ಮಹಾಮಂಗಳಾರತಿ ಹಾಗೂ ಕಳಸಕ್ಕೆ ಕುಂಭಾಭಿಷೇಕ ನಡೆಯಲಿದೆ.              ನಂತರ ಅನ್ನಸಂತರ್ಪಣೆ ಹಾಗೂ ಸಂಜೆ ಸ್ವಾಮಿಯ ಮತ್ತು ದೇವರುಗಳ ಉತ್ಸವ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿಯವರು ಕೋರಿದ್ದಾರೆ.

ಕೋರಗೆರೆ ಪಂಚಾಯ್ತಿಯಲ್ಲಿ ದನದ ಕೊಟ್ಟಿಗೆ ಬಿಲ್ ಮಧ್ಯವರ್ತಿಗಳ ಪಾಲು:ಆರೋಪ

            ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯಿತಿಯಲ್ಲಿ ರೈತರ ದನದ ಕೊಟ್ಟಿಗೆಗೆಂದು ಬಂದ ಬಿಲ್ ಹಣವನ್ನು ಪಂಚಾಯ್ತಿ ಕಾರ್ಯದರ್ಶಿಗಳು ಮಧ್ಯವರ್ತಿಗಳ ಖಾತೆಗೆ ಜಮಾ ಮಾಡಿದ್ದು ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆಯಾಗಿ ಮಾತನಾಡುತ್ತಾರೆಂದು ಫಲಾನುಭವಿ ಭಟ್ಟರಹಳ್ಳಿ ಮೂರ್ತಪ್ಪ ಆರೋಪಿಸಿದ್ದಾರೆ.                   ಈ ಸಂಬಂಧ ಪ್ರತಿಕಾಗೋಷ್ಠಿ ನಡೆಸಿದ ಅವರು ೨೦೧೩-೧೪ ನೇ ಸಾಲಿನಲ್ಲಿ ದನದ ಕೊಟ್ಟಿಗೆಗೆ ಅರ್ಜಿ ಸಲ್ಲಿಸಿದ್ದು ದನದ ಕೊಟ್ಟಿಗೆ ಕಾಮಗಾರಿ ಆರಂಭಿಸಿ ಗ್ರಾ.ಪಂ.ನಿಂದ ೧೩ ಸಾವಿರದ ೯೦೦ ಹಣದ ಚೆಕ್ ಪಡೆಯಲಾಗಿತ್ತು.ಉಳಿಕೆ ಕಾಮಗಾರಿಗಾಗಿ ಗ್ರಾ.ಪಂಯಲ್ಲಿ .ವಿಚಾರಿಸಿದಾಗ ನಿಮ್ಮ ಖಾತೆಗೆ ಜಮೆಯಾಗಿದೆ ಎನ್ನುತ್ತಾರೆ.ಉಳಿಕೆ ಬಿಲ್ ಹಣವನ್ನು ನನ್ನ ಬ್ಯಾಂಕ್ ಖಾತೆಗೆ ಜಮೆ ಮಾಡದೆ ಕಂಟ್ರಾಕ್ಟರ್ ಅಶೋಕ್ ಅವರ ಖಾತೆಗೆ ಜಮಾ ಮಾಡಿದ್ದಾರೆ. ವಿಚಾರಿಸಲು ಹೋದರೆ ನಿಮ್ಮ ಖಾತೆಗೆ ಜಮಾ ಮಾಡಿದ್ದೇವೆ ಎಂದು ಉಡಾಫೆ ಮಾಡುತ್ತಾರೆ.ಅಲ್ಲದೆ ಪಂಚಾಯ್ತಿಯಲ್ಲಿ ಯಾರೊಬ್ಬರಿಗೂ ಸಿಗುವ ಸೌಲಭ್ಯದ ಬಗ್ಗೆ ಸರಿಯಾದ ಮಾಹಿತಿ ನೀಡುವುದಿಲ್ಲ.ಒಟ್ಟಾರೆ ಹಣದ ದುರುಪಯೋಗವಾವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರೀಶಿಲಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ :ಕೆಂಕೆರೆ ನವೀನ್

        ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸುವ ಮುಖಾಂತರ ಪ್ರೋತ್ಸಾಹಿಸುವಂತೆ ತಾಪಂ ಮಾಜಿ ಅಧ್ಯಕ್ಷ ಕೆಂಕೆರೆನವೀನ್ ಕರೆ ನೀಡಿದರು.         ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದ ಶ್ರೀ ಚನ್ನಬಸವೇಶ್ವರ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕೆ.ಪಿ.ಎಲ್. ಕ್ರಿಕೆಟ್ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಹುಡುಗರು ಕ್ರೀಡೆಗೆ ಅಗತ್ಯ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಉಳ್ಳವರಾಗಿರುತ್ತಾರೆ. ಇವರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸೂಕ್ತ ತರಬೇತಿ ನೀಡಿ ಪ್ರೋತ್ಸಾಹಿಸಿದರೆ ಉತ್ತಮ ಕ್ರೀಡಾಪಟುಗಳು ಸಿದ್ಧರಾಗುತ್ತಾರೆ ಎಂದರು.           ಕೆಂಕೆರೆ ಗ್ರಾ,ಪಂ.ಉಪಾಧ್ಯಕ್ಷರಾದ ಪಂಚಾಕ್ಷರಿ, ಸದಸ್ಯರಾದ ರಾಮಲಿಂಗಯ್ಯ, ಆಶಾ ಉಮೇಶ್, ಕೆ.ಪಿ.ಎಲ್. ಅದ್ಯಕ್ಷರಾದ ಸಂತೋಷ್, ಪ್ರೌಢಶಾಲೆ ಮುಖ್ಯೋಪಾಧ್ಯಾರಾದ ಶಾಯಿದಾಸುಲ್ತಾನ್, ಸಂತೋಷ್, ಟೀಂ ಪ್ರಾಂಚೈಸಿಗಳಾದ ತೋಂಟಾರಾಧ್ಯ, ಶರತ್, ಅರುಣ್, ಸಚಿನ್, ವಿನಯ್, ಚೇತನ್‌ಕುಮಾರ್, ಕೆ.ಸಿ.ಸಿ. ಮತ್ತು ಕೆ.ಪಿ.ಎಲ್. ಆಟಗಾರರು ಹಾಗೂ ಕ್ರೀಡಾಸಕ್ತರು ಉಪಸ್ಥಿತರಿದ್ದರು.

ಅಧಿಕಾರಿಗಳ ಅಜಾಗರೂಕತೆಯಿಂದ ಬೇರೊಬ್ಬರ ಖಾತೆಗೆ ರಾಗಿ ಹಣ

ಬಳಸಿಕೊಂಡ ಹಣವನ್ನು ಕೂಡಲೇ ಕಟ್ಟಲು ತಾಕೀತು : ಕಾಲಾವಕಾಶಕ್ಕೆ ರೈತನ ಮೊರೆ -----------------           ತನ್ನ ಖಾತೆಯಲ್ಲಿ ಅಧಿಕಾರಿಗಳ ಅಜಾಗರೂಕತೆಯಿಂದ ಹೆಚ್ಚುವರಿಯಾಗಿ ಬಂದಿರುವ ಹಣದ ಬಗ್ಗೆ ಅರಿಯದ ರೈತ ತನ್ನ ಖಾತೆಯಲ್ಲಿನ ಹಣವನ್ನು ಜಮೀನಿನಲ್ಲಿನ ಬೋರ್ ವೆಲ್ ಗೆ ವಿದ್ಯುತ್ ಸಂಪರ್ಕಕ್ಕಾಗಿ ಟಿಸಿ ತರಲು ಬಳಸಿಕೊಂಡಿದ್ದೆ ಆತನಿಗೆ ಉರುಳಾಗಿ ಪರಿಣಮಿಸಿದ್ದು ಹಣ ಹೊಂದಿಸಲು ರೈತ ಪರದಾಡುವಂತಾಗಿದೆ.        ಹೌದು..ರಾಗಿ ಮಾರಿದ್ದ ರೈತನ ಖಾತೆಗೆ ಆತನ ಹಣವೂ ಸೇರಿ ಬೇರೊಬ್ಬರ ಹಣವೂ ಬಂದಿದ್ದು ಹೆಚ್ಚುವರಿಯಾಗಿ ಖಾತೆಗೆ ಜಮೆಯಾಗಿರುವ ಹಣವನ್ನು ಈ ಕೂಡಲೇ ಕಟ್ಟಬೇಕೆಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ರೈತನಿಗೆ ತಾಕೀತು ಮಾಡಿರುವುದಲ್ಲದೆ ರೈತನ ಬ್ಯಾಂಕ್ ಖಾತೆಯನ್ನು ವಹಿವಾಟು ನಡೆಸದಂತೆ ತಡೆಹಿಡಿದಿರುವುದು ಸಮಸ್ಯೆಗೆ ಕಾರಣವಾಗಿದೆ. ನಡೆದಿದ್ದೇನು: ದೊಡ್ಡಬಿದರೆ ಗ್ರಾಮದ ದೇವರಾಜಪ್ಪ ಎಂಬಾತ ಹುಳಿಯಾರಿನ ರಾಗಿ ಖರೀದಿ ಕೇಂದ್ರದಲ್ಲಿ ೮ ಕ್ವಿಂಟಾಲ್ ರಾಗಿ ಮಾರಾಟ ಮಾಡಿದ್ದು ಈ ಬಾಬ್ತು ಆತನ ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆಗೆ ಮಾರ್ಚ್ ೨೨ ರಂದು ೧೬೮೦೦ ಹಣ ಜಮೆಯಾಗಿದೆ.ನಂತರ ಏಪ್ರಿಲ್ ೨೯ ರಂದು ಅಧಿಕಾರಿಗಳ ಅಜಾಗರೂಕತೆಯಿಂದಾಗಿ ಪುನಃ ೮ ಕ್ವಿಂಟಾಲ್ ರಾಗಿಯ ಹಣವಾಗಿ ೧೬೮೦೦ ಹಣ ಜಮೆಯಾಗಿದೆ. ಇತ್ತೀಚೆಗಷ್ಟೆ ದೇವರಾಜಪ್ಪ ತನ್ನ ಜಮೀನಿಗೆ ಕಲ್ಲು ಕಂಬ ಹಾಕಲು ಹಾಗೂ ವಿದ್ಯುಚ್ಛಕ್ತಿಗಾಗಿ ಟಿಸಿ

ದುರ್ಗಮ್ಮನ ಹುಂಡಿಯಲ್ಲಿ ಮೂರುಲಕ್ಷದ ಇಪ್ಪತ್ತೆಂಟು ಸಾವಿರ ರೂಪಾಯಿ ಹಣ ಸಂಗ್ರಹ

ಹುಳಿಯಾರು ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಹುಂಡಿಯಲ್ಲಿ ಮೂರುಲಕ್ಷದ ಇಪ್ಪತ್ತೆಂಟು ಸಾವಿರ ರೂಪಾಯಿ ಹಣ ಸಂಗ್ರಹವಾಗಿದ್ದು ದೇವಾಲಯದ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಸದರಿ ಹಣ ಬಳಸಿಕೊಳ್ಳಲಾಗುವುದು ಎಂದು ದೇವಸ್ಥಾನದ ಕನ್ವೀನರ್ ವಿಶ್ವನಾಥ್ ತಿಳಿಸಿದರು.              ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹುಂಡಿ ಹಣ ಏಣಿಕೆ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ದೇವಾಲಯದ ಆವರಣದಲ್ಲಿ ವಾಣಿಜ್ಯಮಳಿಗೆ ಹಾಗೂ ಅತಿಥಿಗೃಹ ಕಟ್ಟಲು ಉದ್ದೇಶಿಸಲಾಗಿದ್ದು ಸದರಿ ಹುಂಡಿ ಹಣವನ್ನು ಈ ಕಾರ್ಯಕ್ಕೆ ವಿನಿಯೋಗಿಸಲಾಗುವುದು ಎಂದರು.             ಪ್ರತಿವರ್ಷದಂತೆ ಶ್ರೀಅಮ್ಮನವರ ಜಾತ್ರಾ ಮಹೋತ್ಸವ ಹಾಗೂ ತಿಂಗಳ ಬಾನದ ನಂತರ ಹುಂಡಿ ಹಣದ ಲೆಕ್ಕಾಚಾರ ಮಾಡುವ ವಾಡಿಕೆಯಿದ್ದು ಅದರಂತೆ ದೇವಸ್ಥಾನ ಸಮಿತಿ ಹಾಗೂ ಸಾರ್ವಜನಿಕ ಸಮ್ಮುಖದಲ್ಲಿ ಹುಂಡಿ ಒಡೆಯಲಾಯಿತು. ಹುಂಡಿಯಲ್ಲಿ ಒಟ್ಟು ೩,೨೨,೮೯೦ ಹಣವಿದ್ದು ಅದರಲ್ಲಿ ದೇವಸ್ಥಾನ ಕೈವಾಡದಾರರಿಗೆ ೨೮೫೦ಗೌರವಧನ ಪಾವತಿಸಿ ಉಳಿಕೆ ೩.೨೦.೦೪೦ ಉಳಿದ ಹಣ ಬ್ಯಾಂಕಿಗೆ ಜಮೆ ಮಾಡಲಾಯಿತು.             ದೇವಸ್ಥಾನ ಸಮಿತಿ ಅಧ್ಯಕ್ಷ ಪಟಾಕಿಶಿವಣ್ಣ, ಗುಂಚಿ ಗೌಡರುಗಳಾದ ಸೋಮಜ್ಜನಪಾಳ್ಯದ ಬಾಲಣ್ಣ, ಕೇಶವಪುರದ ಸ್ವಾಮಿ, ಲಿಂಗಪ್ಪನಪಾಳ್ಯದ ನಾಗರಾಜ್, ಕಾಮಶೆಟ್ಟಿಪಾಳ್ಯದ ಶಿವನಂಜಪ್ಪ, ಕೋಡಿಪಾಳ್ಯದ ಮಲ್ಲೇಶಣ್ಣ, ಅಂಗಡಿ ರಾಮಣ್ಣ, ಕಾತುರಯ್ಯ, ಲಕ್ಷ್ಮೀಕಾಂತ್, ರಘು, ದುರ್ಗಪ್ಪ