ಹುಳಿಯಾರು ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಹುಂಡಿಯಲ್ಲಿ ಮೂರುಲಕ್ಷದ ಇಪ್ಪತ್ತೆಂಟು ಸಾವಿರ ರೂಪಾಯಿ ಹಣ ಸಂಗ್ರಹವಾಗಿದ್ದು ದೇವಾಲಯದ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಸದರಿ ಹಣ ಬಳಸಿಕೊಳ್ಳಲಾಗುವುದು ಎಂದು ದೇವಸ್ಥಾನದ ಕನ್ವೀನರ್ ವಿಶ್ವನಾಥ್ ತಿಳಿಸಿದರು.
ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹುಂಡಿ ಹಣ ಏಣಿಕೆ ಸಂದರ್ಭದಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ದೇವಾಲಯದ ಆವರಣದಲ್ಲಿ ವಾಣಿಜ್ಯಮಳಿಗೆ ಹಾಗೂ ಅತಿಥಿಗೃಹ ಕಟ್ಟಲು ಉದ್ದೇಶಿಸಲಾಗಿದ್ದು ಸದರಿ ಹುಂಡಿ ಹಣವನ್ನು ಈ ಕಾರ್ಯಕ್ಕೆ ವಿನಿಯೋಗಿಸಲಾಗುವುದು ಎಂದರು.
ಪ್ರತಿವರ್ಷದಂತೆ ಶ್ರೀಅಮ್ಮನವರ ಜಾತ್ರಾ ಮಹೋತ್ಸವ ಹಾಗೂ ತಿಂಗಳ ಬಾನದ ನಂತರ ಹುಂಡಿ ಹಣದ ಲೆಕ್ಕಾಚಾರ ಮಾಡುವ ವಾಡಿಕೆಯಿದ್ದು ಅದರಂತೆ ದೇವಸ್ಥಾನ ಸಮಿತಿ ಹಾಗೂ ಸಾರ್ವಜನಿಕ ಸಮ್ಮುಖದಲ್ಲಿ ಹುಂಡಿ ಒಡೆಯಲಾಯಿತು. ಹುಂಡಿಯಲ್ಲಿ ಒಟ್ಟು ೩,೨೨,೮೯೦ ಹಣವಿದ್ದು ಅದರಲ್ಲಿ ದೇವಸ್ಥಾನ ಕೈವಾಡದಾರರಿಗೆ ೨೮೫೦ಗೌರವಧನ ಪಾವತಿಸಿ ಉಳಿಕೆ ೩.೨೦.೦೪೦ ಉಳಿದ ಹಣ ಬ್ಯಾಂಕಿಗೆ ಜಮೆ ಮಾಡಲಾಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಪಟಾಕಿಶಿವಣ್ಣ, ಗುಂಚಿ ಗೌಡರುಗಳಾದ ಸೋಮಜ್ಜನಪಾಳ್ಯದ ಬಾಲಣ್ಣ, ಕೇಶವಪುರದ ಸ್ವಾಮಿ, ಲಿಂಗಪ್ಪನಪಾಳ್ಯದ ನಾಗರಾಜ್, ಕಾಮಶೆಟ್ಟಿಪಾಳ್ಯದ ಶಿವನಂಜಪ್ಪ, ಕೋಡಿಪಾಳ್ಯದ ಮಲ್ಲೇಶಣ್ಣ, ಅಂಗಡಿ ರಾಮಣ್ಣ, ಕಾತುರಯ್ಯ, ಲಕ್ಷ್ಮೀಕಾಂತ್, ರಘು, ದುರ್ಗಪ್ಪ, ಪೂಜಾರಿ ಭೈರೇಶ್ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ