ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಕಲ್ಪಿಸುವ ಮುಖಾಂತರ ಪ್ರೋತ್ಸಾಹಿಸುವಂತೆ ತಾಪಂ ಮಾಜಿ ಅಧ್ಯಕ್ಷ ಕೆಂಕೆರೆನವೀನ್ ಕರೆ ನೀಡಿದರು.
ಹುಳಿಯಾರು ಸಮೀಪದ ಕೆಂಕೆರೆ ಗ್ರಾಮದ ಶ್ರೀ ಚನ್ನಬಸವೇಶ್ವರ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕೆ.ಪಿ.ಎಲ್. ಕ್ರಿಕೆಟ್ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ಹುಡುಗರು ಕ್ರೀಡೆಗೆ ಅಗತ್ಯ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಉಳ್ಳವರಾಗಿರುತ್ತಾರೆ. ಇವರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸೂಕ್ತ ತರಬೇತಿ ನೀಡಿ ಪ್ರೋತ್ಸಾಹಿಸಿದರೆ ಉತ್ತಮ ಕ್ರೀಡಾಪಟುಗಳು ಸಿದ್ಧರಾಗುತ್ತಾರೆ ಎಂದರು.
ಕೆಂಕೆರೆ ಗ್ರಾ,ಪಂ.ಉಪಾಧ್ಯಕ್ಷರಾದ ಪಂಚಾಕ್ಷರಿ, ಸದಸ್ಯರಾದ ರಾಮಲಿಂಗಯ್ಯ, ಆಶಾ ಉಮೇಶ್, ಕೆ.ಪಿ.ಎಲ್. ಅದ್ಯಕ್ಷರಾದ ಸಂತೋಷ್, ಪ್ರೌಢಶಾಲೆ ಮುಖ್ಯೋಪಾಧ್ಯಾರಾದ ಶಾಯಿದಾಸುಲ್ತಾನ್, ಸಂತೋಷ್, ಟೀಂ ಪ್ರಾಂಚೈಸಿಗಳಾದ ತೋಂಟಾರಾಧ್ಯ, ಶರತ್, ಅರುಣ್, ಸಚಿನ್, ವಿನಯ್, ಚೇತನ್‌ಕುಮಾರ್, ಕೆ.ಸಿ.ಸಿ. ಮತ್ತು ಕೆ.ಪಿ.ಎಲ್. ಆಟಗಾರರು ಹಾಗೂ ಕ್ರೀಡಾಸಕ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ