ಹುಳಿಯಾರು:ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿದ್ದ ಜೂ.೪ ರ ಪೊಲೀಸರ ಪ್ರತಿಭಟನೆಯ ಬಗ್ಗೆ ಶನಿವಾರದಂದು ಪಟ್ಟಣದ ಠಾಣೆಯಲ್ಲಿ ಯಾವುದೇ ಪ್ರತಿಕ್ರಿಯೆ ಕಂಡುಬಾರದೆ,ಪ್ರತಿಭಟೆನೆಯ ಸೊಲ್ಲು ಕೇಳದಂತೆ ಠಾಣೆಯಲ್ಲಿ ಎಂದಿಗಿಂತಲೂ ಹೆಚ್ಚಿನ ಹಾಜರಾತಿ ಕಾಣುವುದರ ಮೂಲಕ ಪೊಲೀಸರು ಕರ್ತವ್ಯ ನಿರ್ವಹಿಸಿದರು.
ಠಾಣೆಯ ಎಲ್ಲಾ ೨೬ ಮಂದಿ ಪೊಲೀಸರು ಹಾಜರಾಗಿ ಮುಂಜಾನೆಯಿಂದ ಸಂಜೆಯವರೆಗೂ ಠಾಣೆಯೆಲ್ಲಿಯೇ ಕಾರ್ಯನಿರ್ವಹಿಸಿದ್ದಲ್ಲದೆ ,ಒಟ್ಟಿಗೆ ಸೇರಿದ ಸಂಭ್ರಮಕ್ಕೆ ತಿಂಡಿ ಊಟ ಕೂಡ ಅಲ್ಲೇ ಸೇವಿಸಿದರು.
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಾಮೂಹಿಕ ರಜೆ ಹಾಕಿ ಪ್ರತಿಭಟಿಸುವುದಾಗಿ ಹೇಳಿದ್ದ ಪೊಲೀಸರು ಎಸ್ಮಾ ಭೀತಿಯಿದಲೋ ಎನೋ ಈ ಬಗ್ಗೆ ಮಾತೆ ಎತ್ತದಿದ್ದು ಅಚ್ಚರಿಗೆ ಕಾರಣವಾಯಿತು.ಪೊಲೀಸ್ ಠಾಣೆಯ ಬಳಿಯಿರುವ ವಸತಿ ಗೃಹಗಳಲ್ಲೂ ಪೊಲೀಸ್ ಕುಟುಂಬದವರಿಂದ ಯಾವುದೇ ಪ್ರತಿಭಟನೆಯ ಮಾತು ಕೇಳಿಬರಲಿಲ್ಲ.ಠಾಣೆಯಲ್ಲಾಗಲಿ .ಸಿಬ್ಬಂದಿ ವಸತಿ ಗೃಹಗಳ ಬಳಿಯಲ್ಲಾಗಲಿ ಎಲ್ಲೂ ಪ್ರತಿಭಟನೆಯ ವಾತಾವರಣವೆ ಕಂಡುಬರಲಿಲ್ಲ.
ಹುಳಿಯಾರು ಠಾಣೆಯಲ್ಲಿ ಯಾವುದೇ ಪ್ರತಿಭಟನೆಯ ವಾತವಾರಣ ಕಂದು ಬಾರದೆ ಪೊಲೀಸರು ಠಾಣೆಯೆಲ್ಲಿಯೇ ಕಾರ್ಯನಿರ್ವಹಿಸಿದ್ದಲ್ಲದೆ ,ಒಟ್ಟಿಗೆ ಸೇರಿದ ಸಂಭ್ರಮಕ್ಕೆ ತಿಂಡಿ ಊಟ ಕೂಡ ಅಲ್ಲೇ ಸೇವಿಸಿದರು. |
ಈ ಬಗ್ಗೆ ಪತ್ರಿಕೆಯ ಪ್ರಶ್ನೆಗಳಿಗೆ ಉತ್ತರಿಸಿದ ಪಿಎಸೈ ಪ್ರವೀಣ್ ಕುಮಾರ್ ಪೊಲೀಸ್ ಇಲಾಖೆ ಶಿಸ್ತಿಗೆ ಒಳಪಟ್ಟಿದ್ದು ಯಾರೊಬ್ಬರೂ ಕಾನೂನು ಸುವ್ಯವಸ್ಥೆಗೆ ಭಂಗತರುವಂತಿಲ್ಲ. ನಮ್ಮ ಠಾಣೆಯಲ್ಲಿ ಇದುವರೆಗೂ ಯಾವೊಬ್ಬ ಪೊಲೀಸರಿಂದಲೂ ರಜೆಗಾಗಿ ಅರ್ಜಿ ಬಂದಿಲ್ಲ,ಇಲ್ಲಿನ ವಸತಿಗೃಹದ ಸಮಸ್ಯೆ ಬಗ್ಗೆ ಈ ಹಿಂದೆಯೇ ನಿರ್ಧಾರವಾದಂತೆ ವಸತಿ ಸಮುಚ್ಚಯ ಕಾಮಗಾರಿ ನಡೆಯಲಿದೆ,ಪೊಲೀಸ್ ಸಿಬ್ಬಂದಿ ನೇಮಕಾತಿ ಕೂಡ ನಡೆಯಲಿದೆ, ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಠಾಣೆಯಲ್ಲಿ ಸಿಬ್ಬಂದಿಗಳಿಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದರು.
ಈ ಮುಂಚೆ ಇಲಾಖೆಯಲ್ಲಿನ ವೇತನತಾರತಮ್ಯ, ರಜೆ ಸಮಸ್ಯೆ,ವಸತಿ ಗೃಹದ ಸಮಸ್ಯೆ, ಮೇಲಾಧಿಕಾರಿಗಳ ವರ್ತನೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಜೂನ್ 4ರಂದು ಕರ್ತವ್ಯಕ್ಕೆ ಸಾಮೂಹಿಕವಾಗಿ ಗೈರುಹಾಜರಾಗುವ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದ ಸಿಬ್ಬಂದಿ ಕೂಡ ಸರ್ಕಾರದ ಎಸ್ಮಾ ಜಾರಿ ನೀತಿ ಹಾಗೂ ಇಲಾಖೆಯ ಶಿಸ್ತುಜಾರಿ ಕ್ರಮದ ಮಾಡಿರುವದರಿಂದಲೋ ಎನೋ ಪ್ರತಿಭಟನೆಯಿಂದ ಹಿಂದೆಸರಿದಂತೆ ಕಂಡುಬಂತು.
ಠಾಣೆಯಲ್ಲೇ ನಡೆದ ಊಟ ತಿಂಡಿ ಬಗ್ಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದ ಸಿಬ್ಬಂದಿ ಇಂದು ಪಟ್ಟಣದಲ್ಲಿ ದೇವಾಲಯದ ಮೆರವಣಿಗೆಯಿದ್ದು ಸರಿಯಾದ ಸಮಯಕ್ಕೆ ಸಿಬ್ಬಂದಿ ಹಾಜರಾಗಲು ಇಲ್ಲೇ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ