ದೇವಿಯ ಪೀಠದಡಿಯಲ್ಲಿ ನಿಧಿಯಿರಬಹುದೆಂದು ಬಗೆದ ಕಳ್ಳರು ದೇವಸ್ಥಾನದ ಬಾಗಿಲು ಬಗ್ಗಿಸಿ ಅಮ್ಮನವರ ಮೂರ್ತಿಯನ್ನು ಕಿತ್ತು ಪಕ್ಕಕ್ಕೆಸದು ಪೀಠದ ಸುತ್ತ ಹುಡುಕಾಡಿ ಏನೂ ದೊರೆಯದೆ ಹಾಗೆ ಬಿಟ್ಟು ಪರಾರಿಯಾಗಿರುವ ಘಟನೆ ಪಟ್ಟಣದ ಹೊರವಲಯದಲ್ಲಿರುವ ಕೆಂಚಮ್ಮನ ತೋಪಿನ ಕೆಂಚಮ್ಮನ ದೇವಾಲಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಶನಿವಾರ ಬೆಳಿಗ್ಗೆ ದುರ್ಗಮ್ಮನ ದೇವಸ್ಥಾನದ ಕನ್ವೀನರ್ ವಿಶ್ವಣ್ಣ ಮುಂಜಾನೆ ಕೆರೆ ಏರಿ ಮೇಲೆ ಪೂಜೆಗೆಂದು ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಕೆಂಚಮ್ಮನ ಸಮಿತಿಯವರು ಬಂದು ಪರಿಶೀಲಿಸಲಾಗಿ ದುಷ್ಕರ್ಮಿಗಳು ದೇವಸ್ಥಾನದ ಬೀಗ ಮುರಿಯದೆ ಕಬ್ಬಿಣದ ಗೇಟನ್ನು ಮೀಟಿ ಒಳಹೊಕ್ಕಿದ್ದು ಕಂಡು ಬಂದಿದ್ದು ನಿಧಿ ಆಸೆಗಾಗಿ ಈ ಕೃತ್ಯ ನಡೆದಿರಬಹುದೆಂದು ಅಭಿಪ್ರಾಯ ವ್ಯಕ್ತವಾಯಿತು.
ದುರ್ಗಾಪರಮೇಶ್ವರಿ ದೇವಾಲಯದ ಧರ್ಮದರ್ಶಿ ಶಿವಕುಮಾರ್, ಕೆಂಚಮ್ಮನ ದೇವಾಲಯದ ಕಾರ್ಯದರ್ಶಿ ಷಡಾಕ್ಷರಿ, ನಂಜುಂಡಪ್ಪ,ಮಲ್ಲಿಕಾರ್ಜುನಯ್ಯ, ಕುಮಾರ್,
ಬಡಗಿ ರಾಮಣ್ಣ,ಪಟೇಲ್ ರಾಜ ಕುಮಾರ್, ಚನ್ನಬಸವಯ್ಯ ಮುಂತಾದವರು ಸ್ಥಳದಲ್ಲಿದ್ದು ಮುಂದೇನು ಮಾಡುವುದೆಂದು ಸಭೆ ಸೇರಿದ್ದರು.ಕೆಂಚಮ್ಮನವರು ಮೂರ್ತಿ ಭಿನ್ನವಾಗಿದ್ದು ಸಂಜೆ ಅಮ್ಮನವರ ಅಪ್ಪಣೆ ಪಡೆದು ಮುಂದೇನು ಮಾಡುವುದೆಂದು ತೀರ್ಮಾನಿಸುವುದಾಗಿ ಕೆಂಚಮ್ಮ ದೇವಿ ದೇವಾಲಯ ಸಮಿತಿಯ ಅಧ್ಯಕ್ಷ ಶಿವನಂಜಪ್ಪ ತಿಳಿಸಿದರು.
ಒಟ್ಟಾರೆ ಘಟನೆಯಿಂದ ಊರಿನ ಎಲ್ಲಾ ದೇವಸ್ಥಾನ ಸಮಿತಿಯವರಿಗೆ ಆತಂಕ ಸೃಷ್ಟಿಯಾಗಿದೆ.
ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸೈ ಪ್ರವೀಣ್ ಕುಮಾರ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ