ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯಿತಿಯಲ್ಲಿ ರೈತರ ದನದ ಕೊಟ್ಟಿಗೆಗೆಂದು ಬಂದ ಬಿಲ್ ಹಣವನ್ನು ಪಂಚಾಯ್ತಿ ಕಾರ್ಯದರ್ಶಿಗಳು ಮಧ್ಯವರ್ತಿಗಳ ಖಾತೆಗೆ ಜಮಾ ಮಾಡಿದ್ದು ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆಯಾಗಿ ಮಾತನಾಡುತ್ತಾರೆಂದು ಫಲಾನುಭವಿ ಭಟ್ಟರಹಳ್ಳಿ ಮೂರ್ತಪ್ಪ ಆರೋಪಿಸಿದ್ದಾರೆ.
ಈ ಸಂಬಂಧ ಪ್ರತಿಕಾಗೋಷ್ಠಿ ನಡೆಸಿದ ಅವರು ೨೦೧೩-೧೪ ನೇ ಸಾಲಿನಲ್ಲಿ ದನದ ಕೊಟ್ಟಿಗೆಗೆ ಅರ್ಜಿ ಸಲ್ಲಿಸಿದ್ದು ದನದ ಕೊಟ್ಟಿಗೆ ಕಾಮಗಾರಿ ಆರಂಭಿಸಿ ಗ್ರಾ.ಪಂ.ನಿಂದ ೧೩ ಸಾವಿರದ ೯೦೦ ಹಣದ ಚೆಕ್ ಪಡೆಯಲಾಗಿತ್ತು.ಉಳಿಕೆ ಕಾಮಗಾರಿಗಾಗಿ ಗ್ರಾ.ಪಂಯಲ್ಲಿ .ವಿಚಾರಿಸಿದಾಗ ನಿಮ್ಮ ಖಾತೆಗೆ ಜಮೆಯಾಗಿದೆ ಎನ್ನುತ್ತಾರೆ.ಉಳಿಕೆ ಬಿಲ್ ಹಣವನ್ನು ನನ್ನ ಬ್ಯಾಂಕ್ ಖಾತೆಗೆ ಜಮೆ ಮಾಡದೆ ಕಂಟ್ರಾಕ್ಟರ್ ಅಶೋಕ್ ಅವರ ಖಾತೆಗೆ ಜಮಾ ಮಾಡಿದ್ದಾರೆ. ವಿಚಾರಿಸಲು ಹೋದರೆ ನಿಮ್ಮ ಖಾತೆಗೆ ಜಮಾ ಮಾಡಿದ್ದೇವೆ ಎಂದು ಉಡಾಫೆ ಮಾಡುತ್ತಾರೆ.ಅಲ್ಲದೆ ಪಂಚಾಯ್ತಿಯಲ್ಲಿ ಯಾರೊಬ್ಬರಿಗೂ ಸಿಗುವ ಸೌಲಭ್ಯದ ಬಗ್ಗೆ ಸರಿಯಾದ ಮಾಹಿತಿ ನೀಡುವುದಿಲ್ಲ.ಒಟ್ಟಾರೆ ಹಣದ ದುರುಪಯೋಗವಾವಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಬಂದು ಪರೀಶಿಲಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ