ಹುಳಿಯಾರು ಪಟ್ಟಣದ ಜ್ಯೋತಿಪಣ ಗಾಣಿಗರ ಸಂಘ,ಶನೈಶ್ವರ ಸ್ವಾಮಿ ಜೀರ್ಣೋದ್ಧಾರ ಛಾರಿಟಬಲ್ ಟ್ರಸ್ಟ್,ಜ್ಯೋತಿಪಣ ಯುವಕರ ಸಂಘದಿಂದ ಗಾಂಧಿಪೇಟೆಯಲ್ಲಿನ ಶನೈಶ್ವರ ಸ್ವಾಮಿಗೆ ೧೨ ನೇ ವರ್ಷದ ಕುಂಭಾಭಿಷೇಕವನ್ನು ಜೂ.೪ರ ಶನಿವಾರ ಹಾಗೂ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ.
ಶನಿವಾರದಂದು ಗ್ರಾಮದೇವತೆಗಳಾದ ಶ್ರೀ ಹುಳಿಯಾರಮ್ಮ ಹಾಗೂ ದುರ್ಗಮ್ಮನವರ ಆಗಮನದೊಂದಿಗೆ ಸಂಜೆ ಪುಣ್ಯಾಹ ,ದೇವನಾಂದಿ,ಪ್ರಧಾನ ಕಳಸ ಹಾಗು ನವಗ್ರದ ಕಳಸಗಳ ಸ್ಥಾಪನೆ ನಡೆಯಲಿದೆ.
ಭಾನುವಾರದಂದು ಬೆಳಿಗ್ಗೆ ನವಗ್ರಹ ಹೋಮ,ಗಣಪತಿ ಹೋಮ,ಮೃತ್ಯುಂಜಯ ಹೋಮ,ಶನೈಶ್ವರ ಹೋಮ,ಅಭಿಷೇಕ ನಡೆದು ಮಧ್ಯಾಹ್ನ ೧೨.೪೦ಕ್ಕೆ ಮಹಾಮಂಗಳಾರತಿ ಹಾಗೂ ಕಳಸಕ್ಕೆ ಕುಂಭಾಭಿಷೇಕ ನಡೆಯಲಿದೆ.
ನಂತರ ಅನ್ನಸಂತರ್ಪಣೆ ಹಾಗೂ ಸಂಜೆ ಸ್ವಾಮಿಯ ಮತ್ತು ದೇವರುಗಳ ಉತ್ಸವ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ