ಹುಳಿಯಾರು: ಬಲಿಜ ಸಮುದಾಯದ ಎಂ.ಆರ್.ಸೀತಾರಾಂ ರವರಿಗೆ ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹುಳಿಯಾರು ಹೋಬಳಿ ಬಲಿಜಸಂಘವು ಅಬಾರಿಯಾಗಿದೆ ಎಂದು ಬಲಿಜ ಸಂಘದ ಬಡಗಿ ರಾಮಣ್ಣ ಸಂತಸ ವ್ಯಕ್ತಪಡಿಸಿದರು.
ರಾಜ್ಯ ಸರಕಾರದಲ್ಲಿ ನೂತನ ಸಚಿವರಾಗಿ ನೇಮಕಗೊಂಡ ಬಲಿಜ ಸಮುದಾಯದ ಎಂ.ಆರ್.ಸೀತಾರಾಂ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದಿಸಿದ ಹುಳಿಯಾರು ಹೋಬಳಿ ಬಲಿಜ ಸಂಘದ ಮುಖಂಡರು ನಂತರ ಮಾತನಾಡಿ ಇದುವರೆಗೂ ಪ್ರಾತಿನಿಧ್ಯ ಸಿಗದ ಬಲಿಜ ಸಮುದಾಯ ದವರನ್ನ ಗುರುತಿಸಿ ಸಚಿವಸ್ಥಾನ ನೀಡಿದಕ್ಕೆ ಶ್ಲಾಘಿಸಿದರು.
ನಮ್ಮ ಬಲಿಜ ಸಮುದಾಯದ ಪ್ರತಿಯೊಬ್ಬರು ಸಹಾ ರಾಜಕೀಯ, ಶಿಕ್ಷಣ, ಕಲೆ, ಸಾಹಿತ್ಯ ಸೇರಿದ್ದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹಾ ತಮ್ಮನ್ನ ತಾವು ತೊಡಗಿಸಿಕೊಳ್ಳುವ ಮುಲಕ ಅಭಿವೃದ್ದಿಯನ್ನ ಹೊಂದಿ ಸಮಾಜದಲ್ಲಿ ನೊಂದ ಜನರಿಗೆ ಸಹಾಯ ಮಾಡುವ ಮನೋಭಾವ ಮೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈ ನಿಯೋಗದಲ್ಲಿ ಹುಳಿಯಾರು ಹೋಬಳಿ ಬಲಿಜ ಸಂಘದ ಮುಖಂಡ ಶಂಕರಣ್ಣ, ನಿವೃತ್ತ ಶಿಕ್ಷಕ ವರದಯ್ಯ, ತಾ.ಪಂ.ಸದಸ್ಯ ಹೆಚ್.ಎನ್.ಕುಮಾರ್, ಗ್ರಾಪಂ ಸದಸ್ಯರುಗಳಾದ ವೆಂಕಟೇಶ್, ಹೇಮಂತ್, ಗ್ರಾಪಂ ಮಾಜಿ ಉಪಾಧ್ಯಕ್ಷೆ ವೆಂಕಟಮ್ಮ, ಹೂವಿನ ಬಸವರಾಜು, ಮೂರ್ತಿ, ತಾಲ್ಲೂಕು ಬಲಿಜ ಸಂಘದ ಮುಖಂಡರಾದ ಲಕ್ಷ್ಮಣ್, ರಮೇಶ್, ರಾಮಪ್ಪ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ