ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಮ್ಮ ಜಾತ್ರೆ ಜ.30ರ ಶನಿವಾರದಿಂದ

ಹುಳಿಯಾರು ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ ಎಂಟನೇ ವರ್ಷದ ಜಾತ್ರಾ ಮಹೋತ್ಸವ ಜ.30 ರ ಶನಿವಾರದಿಂದ ಫೆ.7 ರ ಭಾನುವಾರದವರೆಗೆ ಹಮ್ಮಿಕೊಳ್ಳಲಾಗಿದೆ. ಜ.30 ಹಾಗೂ 31 ರಂದು ಕೋಡಿಪಾಳ್ಯ,ಲಿಂಗಪ್ಪನಪಾಳ್ಯ,ಕಾಮಶೆಟ್ಟಿಪಾಳ್ಯ ,ಸೋಮಜ್ಜನಪಾಳ್ಯದಲ್ಲಿ ಮಡಿಲಕ್ಕಿ ಸೇವೆ ನಡೆಯಲಿದೆ. ಫೆ.1 ರಂದು ಧ್ವಜಾರೋಹಣ, ಅಂಕುರಾರ್ಪಣೆ ಹಾಗೂ ಅಮ್ಮನವರ ಮಧುವಣಗಿತ್ತಿ ಸೇವೆ ನಡೆಯಲಿದೆ. ಫೆ.2 ರಂದು ಆರತಿ ಬಾನ ಹಾಗೂ ಎಡೆ ಸೇವೆ ನಡೆಯಲಿದೆ. ಫೆ.3 ರಂದು ಹುಳಿಯಾರು ಗ್ರಾಮದೇವತೆ ದುರ್ಗಮ್ಮ, ಕೆಂಚಮ್ಮದೇವಿ, ಕೆಂಕೆರೆ ಗೊಲ್ಲರಹಟ್ಟಿ ಕರಿಯಮ್ಮ ದೇವಿ,ಗೌಡಗೆರೆ ದುರ್ಗಮ್ಮ ಹಾಗೂ ದೊಡ್ಡಬಿದರೆ ಕರಿಯಮ್ಮ ದೇವರುಗಳ ಆಗಮನ ಹಾಗೂ ಕೂಡು ಭೇಟಿ ಕಾರ್ಯ ನಡೆಯಲಿದೆ. ಸಂಜೆ ದೂತರಾಯ ಕುಣಿತ ನಡೆಯಲಿದೆ. ಫೆ.4 ರ ಗುರುವಾರದಂದು ಬೆಳಗ್ಗೆ 7.30 ಕ್ಕೆ ಕಳಸ ಮಹೋತ್ಸವ ಹಾಗೂ ಅನ್ನಸಂತರ್ಪಣೆ ,ಫೆ.5 ರ ಶುಕ್ರವಾರದಂದು ಗಣಪತಿ ಹಾಗೂ ಅಷ್ಟಲಕ್ಷ್ಮಿ ಹೋಮ ನಡೆದು ಫೆ.6 ರ ಶನಿವಾರ ಕಂಕಣವಿಸರ್ಜನೆ ,ಓಕಳಿ ಮತ್ತು ಫೆ.7 ರಂದು ಮಡಿಲಕ್ಕಿ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ. ಭಕ್ತಾಧಿಗಳು ಕೋವಿಡ್  ನಿಯಮ ಅನುಸರಿಸಿ, ಸಾಮಾಜಿಕ ಅಂತರ ಪಾಲಿಸಿಕೊಂಡು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ  ದೇವಿಯ ಕೃಪೆಗೆ ಪಾತ್ರರಾಗಲು ದೇವಾಲಯ ಸಮಿತಿಯವರು ಕೋರಿದ್ದಾರೆ.

ದೊಡ್ಡಬಿದರೆ ಗ್ರಾಮದಲ್ಲಿ ಅರೋಗ್ಯವಂತ ಶಿಶು ಪ್ರದರ್ಶನ

ಹುಳಿಯಾರು ಹೋಬಳಿಯ ದೊಡ್ಡಬಿದರೆ ಗ್ರಾಮದಲ್ಲಿ ಅರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಶೋಭಾ ಸಿಸ್ಟರ್ ಮಾತನಾಡಿ  ಅರೋಗ್ಯವಂತ ಮಗು ಬೆಳವಣಿಗೆ ಆಗಬೇಕು ಅಂದರೆ ಹೆಣ್ಣು ಮಕ್ಕಳು ಗರ್ಭಿಣಿ ಇದ್ದಾಗಲೇ ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರ ಸೇವಿಸಬೇಕು ಮತ್ತು ವೈದ್ಯರ ತಪಾಸಣೆ ಮಾಡಿಸುವುದು, ಸರಿಯಾದ ಸಮಯಕ್ಕೆ ಚುಚ್ಚುಮದ್ದು ತೆಗೆದುಕೊಳ್ಳುವುದನ್ನು ತಪ್ಪದೇ ಪಾಲಿಸಬೇಕು ಎಂದು ತಾಯಂದಿರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಉತ್ತಮವಾಗಿ ಬೆಳವಣಿಗೆ ಆಗಿರುವ ಮಕ್ಕಳಿಗೆ ಹಾಗೂ ಸರಿಯಾದ ಸಮಯದಲ್ಲಿ ಲಸಿಕೆ ಹಾಕಿಸಿರುವ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ನೂತನ  ಸದಸ್ಯರುಗಳಾದ ಡಿ.ಪಿ.ಅರುಣ್ ಕುಮಾರ್ ಮತ್ತು HG ಕಲಾವತಿ ಮತ್ತು ತಾಲೋಕು ಆಶಾ ಮೇಲ್ವಿಚಾರಕಿ ಜಯಂತಿ ಮತ್ತು ಕಿ.ಮ.ಆ.ಸ ಮತ್ತು ಕಿ.ಪು.ಆ.ಸ ಹಾಗೂ ಆಶಾ ಕಾರ್ಯಕರ್ತೆಯರು,ತಾಯಂದಿರು ಭಾಗವಹಿಸಿದ್ದರು.

"ಸಂವಿಧಾನ ಮತ್ತು ಅಂಬೇಡ್ಕರ್" ಗಣರಾಜ್ಯೋತ್ಸವ ಕುರಿತು ಭಾಷಣ ಸ್ಪರ್ಧೆ

ಹುಳಿಯಾರು:ಗಾಂಧಿ, ಅಂಬೇಡ್ಕರ್ ಮೊದಲಾದ ಮಹನೀಯರ ಶ್ರಮದಿಂದಾಗಿ ಇಂದು ನಾವು ಗಣರಾಜ್ಯವನ್ನು ಅನುಭವಿಸುತ್ತಿದ್ದೇವೆ. ರಾಜಪ್ರಭುತ್ವದಲ್ಲೂ ಇರಬಹುದಾದ ಕೆಲವೊಂದು ಒಳ್ಳೆಯ ಅಂಶಗಳೂ ಸೇರಿದಂತೆ ದೇಶ ವಿದೇಶಗಳ ಸಂವಿಧಾನವನ್ನು ಪರಾಮರ್ಶಿಸಿ ನಮ್ಮ ಸಂವಿಧಾನವನ್ನು ರೂಪಿಸಲಾಗಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ ಎಂದು ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು. ಹುಳಿಯಾರು-ಕೆಂಕೆರೆ  ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಸಾಂಸ್ಕೃತಿಕ ಸಂಘದ ವತಿಯಿಂದ ಅಂತಿಮ ಬಿ.ಎ. ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ "ರಾಷ್ಟ್ರೀಯ ಮತದಾರರ ದಿನ" ಮತ್ತು "72ನೆಯ ಗಣರಾಜ್ಯೋತ್ಸವ"ದ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ "ಮತದಾರರ ಪ್ರತಿಜ್ಞಾ ವಿಧಿ"ಯನ್ನು ಬೋಧಿಸಲಾಯಿತು. ಅಲ್ಲದೆ ವಿದ್ಯಾರ್ಥಿಗಳಿಗಾಗಿ "ಗಣರಾಜ್ಯೋತ್ಸವ" ಕುರಿತು ಭಾಷಣ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು. "ಸಂವಿಧಾನ ಮತ್ತು ಮಹಿಳೆ", "ಸಂವಿಧಾನದ ಮಹತ್ವ", "ಹಕ್ಕು ಮತ್ತು ಕರ್ತವ್ಯಗಳು", "ಸಂವಿಧಾನ ರಚನೆ - ಒಂದು ನೋಟ", "ಸಂವಿಧಾನ ಮತ್ತು ಅಂಬೇಡ್ಕರ್"- ಹೀಗೆ ಸಂವಿಧಾನ ಸಂಬಂಧಿ ವಿಭಿನ್ನ ವಿಷಯಗಳ ಮೇಲೆ ವಿದ

ಕುರುಬರ ಎಸ್.ಟಿ ಮೀಸಲಾತಿ ಹೋರಾಟ ಪಾದಯಾತ್ರೆಯಲ್ಲಿ ಮನೆಗೊಬ್ಬರಂತೆ ಭಾಗವಹಿಸಲು ಕರೆ

ಹುಳಿಯಾರು:ಕುರುಬರ ಎಸ್ ಟಿ ಮೀಸಲಾತಿ ಹೋರಾಟ ಪಾದಯಾತ್ರೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಸಮುದಾಯದವರು ಪಾಲ್ಗೊಳ್ಳುವ ನಿಟ್ಟಿನಲ್ಲಿ ಶುಕ್ರವಾರ ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ  ಪೂರ್ವಭಾವಿ ಸಭೆ ಜರುಗಿತು. ಮಾಜಿ ಶಾಸಕರಾದ ಸಿ.ಬಿ.ಸುರೇಶ್ ಬಾಬು ಮಾತನಾಡಿ ಜ.28ರಂದು ತುಮಕೂರು ಜಿಲ್ಲೆಗೆ ಪಾದಯಾತ್ರೆ ಆಗಮಿಸುತ್ತಿದ್ದು ಶಿರಾ ತಾಲ್ಲೂಕಿನ ಜವಗೊಂಡನಹಳ್ಳಿಯಲ್ಲಿ ಬೆಳಿಗ್ಗೆ 6 ಘಂಟೆಯಿಂದ ಪಾದಯಾತ್ರೆ ಪ್ರಾರಂಭಿಸಲಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಕುರುಬ ಸಮಾಜದ ಬಂಧುಗಳು ಭಾಗವಹಿಸಬೇಕಾಗಿ  ಮನವಿಮಾಡಿದರು.  ಜಿ ಪಂ ಸದಸ್ಯ ಎಸ್.ಟಿ ಹೋರಾಟ ಸಮಿತಿ ಉಪಾಧ್ಶಕ್ಷ  ವೈ.ಸಿ.ಸಿದ್ದರಾಮಯ್ಯ ಮಾತನಾಡಿ ಪಾದಯಾತ್ರೆಯಲ್ಲಿ ಸಮಾಜದ ಬಂಧುಗಳು ಮನೆಗೆ ಒಬ್ಬರಂತೆ ಭಾಗವಹಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ಹುಳಿಯಾರು ಹೋಬಳಿ ಕುರುಬ ಸಂಘದ ಅಧ್ಶಕ್ಷ ಹೆಚ್.ಅಶೋಕ್,ಉಪಾಧ್ಶಕ್ಷ ಎಸ್.ರಾಮಯ್ಯ,ಕಾರ್ಯದರ್ಶಿ ಎಸ್ ಆರ್ ಎಸ್ ದಯಾನಂದ್, ಖಜಾಂಚಿ ಎನ್.ಬಿ.ದೇವರಾಜ್, ಲೆಕ್ಕ ಪರಿಶೋದಕ ಹೊಸಹಳ್ಳಿ ಪಾಳ್ಯ ಕೃಷ್ಣಮೂರ್ತಿ,ಪಪಂ ಮಾಜಿ ಸದಸ್ಶರುಗಳಾದ ಹೆಚ್ ಶಿವಕುಮಾರ್,ಧನುಷ್ ರಂಗನಾಥ್, ತಾಲ್ಲೂಕು ಕುರುಬ ಸಂಘದ ಅಧ್ಶಕ್ಷ ಸಿ.ಎಸ್.ರಮೇಶ್,ಬೀರಲಿಂಗೇಶ್ವರ ದೇವಾಲಯ ಗೌಡರಾದ ದುರ್ಗಯ್ಯ,ರೇವಣ ಸಿದ್ದೇಶ್ವರ ಮಠದ ಕಾರ್ಯದರ್ಶಿ ಶಂಕರಣ್ಣ,ಬಾಲರಾಜ್, ಕೇಶವಾಪುರ ಕಿರಣ್,ಗಜೇಂದ್ರ,ಯಳನಾಡು ದಯಾನಂದ್,ಸೀಗೇಬಾಗಿ ಸಿದ್ದರಾಮಣ್ಣ, ಗಂಗಾಧರಗುಂಡ,ಲಿಂಗಪ್ಪನ ಪಾ

ಚಿ.ನಾ.ಹಳ್ಳಿ:ಮಹಾಲಕ್ಷ್ಮೀ ಮದ್ದರಲಕ್ಕಮ್ಮ ಸನ್ನಿದಿಗೆ ಕರ್ನಾಟಕ ರಾಜ್ಯ ಮಡಿವಾಳ ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಭೇಟಿ

ಚಿಕ್ಕನಾಯಕನಹಳ್ಳಿ ಪಟ್ಟಣದ ಶುಕ್ರವಾರದ ಬಾಗಿಲು ಶಕ್ತಿ ಮಾತೆ ಸರ್ವೇಶ್ವರಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ಸನ್ನಿದಿಗೆ ಕರ್ನಾಟಕ ರಾಜ್ಯ ಮಡಿವಾಳ ಮಹಿಳಾ ಸಂಘದ ರಾಜ್ಯಾಧ್ಯಕ್ಷರು ಶ್ರೀಮತಿ ವಿಜಯಲಕ್ಷ್ಮಿ ಅಂಜಿನಪ್ಪ,ರಾಜ್ಯ ಕ್ಷೇಮಾಬಿವೃದ್ಧಿ ಅಧ್ಯಕ್ಷರು ಶ್ರೀಯುತ ಪ್ರಕಾಶ್ ಬೆಂಗಳೂರು ,ಪ್ರಧಾನ ಕಾರ್ಯದರ್ಶಿ ಶ್ರೀ ದೀಪಕ್,ವಿಶ್ರಾಂತ ಉಪ ತಹಸೀಲ್ದಾರ್ ಅಂಜಿನಪ್ಪ ಹಾಸನ,ಹಾಗೂ ವಚನ ಸಾಹಿತಿ ಪ್ರಭಾಕರ್ ಭೇಟಿ ಕೊಟ್ಟು ಅಮ್ಮನವರ ದರ್ಶನ ಪಡೆದು ಕೃತಾರ್ಥರಾದರು. ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ರಂಗಸ್ವಾಮಿ.ಸಿ.ಎನ್,ಟ್ರಸ್ಟಿನ ಶ್ರೀರವಿಕುಮಾರ್ ಹಾಗೂ ಕಾರ್ಯದರ್ಶಿ ಶ್ರೀಯುತ  ಲಕ್ಷ್ಮೀಶ್ ಸಿ.ಆರ್  ಉಪಸ್ಥಿತರಿದ್ದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷರಾಗಿ ನಾಗರಾಜು ಅವಿರೋಧ ಆಯ್ಕೆ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷರನ್ನಾಗಿ ನಾಗರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷರಾಗಿದ್ದ ಸಿ.ಎಸ್ ನಟರಾಜ್ ರವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ನಾಗರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚಿಕ್ಕನಾಯಕನಹಳ್ಳಿ ಮಡಿವಾಳರ ಬೀದಿಯ ಶ್ರೀ ಹಟ್ಟಿಲಕ್ಕಮ್ಮ ದೇವಸ್ಥಾನದಲ್ಲಿ ಈ ಬಗ್ಗೆ ನಡೆದ ಸಭೆಯಲ್ಲಿ  ನಾಗರಾಜ್ ರವರನ್ನು ಅಧ್ಯಕ್ಷರನ್ನಾಗಿ  ತುಮಕೂರು ಜಿಲ್ಲೆ ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ್ ರವರು ಸೂಚಿಸಿದರು. ಇದಕ್ಕೂ ಮುನ್ನ ಅಕಾಲಿಕವಾಗಿ ನಿಧನರಾದ ಸಿ.ಎಸ್ ನಟರಾಜ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನಂತರ ನಡೆದ ಸಭೆಯಲ್ಲಿ ಫೆಬ್ರವರಿ ಒಂದನೇ ತಾರೀಕು ತಾಲ್ಲೂಕು ಮಟ್ಟದಲ್ಲಿ ಮಡಿವಾಳ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು.ತಾಲ್ಲೂಕಿನ ಪ್ರತಿ ಹೋಬಳಿ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ಹಳ್ಳಿಗಳಲ್ಲಿ ಇರುವ ಮಡಿವಾಳ ಬಂಧುಗಳನ್ನು ಸಂಪರ್ಕಿಸಿ ಅವರನ್ನು ಸಂಘದ ಸದಸ್ಯರನ್ನಾಗಿ ಮಾಡಿ ಅವರಿಗೆ ಐಡಿ ಕಾರ್ಡ್ ಗುರುತಿನ ಚೀಟಿ ನೀಡುವಂತೆ ಮಾರ್ಗದರ್ಶನ ನೀಡಲಾಯಿತು.ಮುಂದಿನ ದಿನಗಳಲ್ಲಿ  ಮಡಿವಾಳ ನಿಗಮದಿಂದ ಬರುವ ಅನುಕೂಲ ಪಡೆಯುವ ಬಗ್ಗೆ ಚರ್ಚಿಸಲಾಯಿತು.ಸಮಾಜದ ಪೂರ್ತಿ ಕಡುಬಡವರನ್ನು ಗುರುತಿಸುವ ಮೂಲಕ ತಾಲ್ಲೂಕು ಮಡಿವಾಳ ಜನಾಂಗವನ್ನು ಅಭಿವೃದ್ಧಿ ಮಾಡುವುದಾಗಿ

ಜೆಸಿಎಂ ನಾಯಕತ್ವ ಮೆಚ್ಚಿ ಬಿಜೆಪಿ ಸೇರ್ಪಡೆ

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕರೂ ಆಗಿರುವ ಜೆ.ಸಿ.ಮಾಧುಸ್ವಾಮಿ ಅವರ ನಾಯಕತ್ವ ಹಾಗೂ ಕಾರ್ಯವೈಖರಿ ಮೆಚ್ಚಿ ಬೊಮ್ಮೇನಹಳ್ಳಿ ಗ್ರಾಮದ ಉದ್ಯಮಿ ಮಂಜುನಾಥ್ , ಹಾಗೂ ಅವರ ತಾಯಿ ದೊಡ್ಡೆಣ್ಣೆಗೆರೆಯ VSSN ಸದಸ್ಯೆ ಶಿವಮ್ಮ ಹಾಗೂ ಅವರ ಪತ್ನಿ ದೊಡ್ಡೆಣ್ಣೆಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ರಮ್ಯಾ ಅವರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು. ಈ ವೇಳೆ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀ ಹರ್ಷ,VSSN ಸದಸ್ಯರಾದ ನಡುವನಹಳ್ಳಿ ಹಾಲಪ್ಪ,ಅಧ್ಯಕ್ಷರಾದ ಮಂಜುನಾಥ್, ಶ್ರೀನಿವಾಸ್, ಚೇತನ್ ಕುಮಾರ್ ಹಾಗೂ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಹುಲ್ಲೇನಹಳ್ಳಿ ಲೋಕಣ್ಣ ಉಪಸ್ಥಿತರಿದ್ದರು.

ಹುಳಿಯಾರಿನಲ್ಲಿ ಶ್ರೀರಾಮ ಮಂದಿರ ನಿಧಿ ಅಭಿಯಾನದ ಅಂಗವಾಗಿ ದೇಣಿಗೆ ಸಂಗ್ರಹ

ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ  ಅಖಿಲ ಭಾರತೀಯ ಮಟ್ಟದಲ್ಲಿ ಶುರುವಾಗಿದ್ದು ಅಂತೆಯೇ ಹುಳಿಯಾರು ಪಟ್ಟಣದಲ್ಲಿ ದೇಣಿಗೆ ಸಂಗ್ರಹಕ್ಕೆ ಇಂದು ಭಾನುವಾರ ಬಿಜೆಪಿ ಪ್ರಮುಖರು, ಮಾಜಿ ಶಾಸಕರು ಹಾಗೂ ಹಾಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಕೆ.ಎಸ್.ಕಿರಣ್ ಕುಮಾರ್ ಅವರು ಹುಳಿಯಾರು ಪಟ್ಟಣದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ಸದಸ್ಯರು ಹಾಗೂ ಶ್ರೀರಾಮ ಸದ್ಭಕ್ತರೊಂದಿಗೆ ಪಟ್ಟಣದ  ಮನೆಮನೆಗೆ ತೆರಳಿ ನಿಧಿ ಸಂಗ್ರಹಿಸಿದರು.

ಸೀಗೆಬಾಗಿಯಲ್ಲಿ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ

ಹುಳಿಯಾರು ಸಮೀಪದ ಸೀಗೆಬಾಗಿಯಲ್ಲಿ ಶ್ರೀ ರಾಮಮಂದಿರ ನಿಧಿ ಸಮರ್ಪಣ ಅಭಿಯಾನಕ್ಕೆ ಶ್ರೀ ವರದರಾಜಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವರದರಾಜಸ್ವಾಮಿ ದೇವಾಲಯದ ಕನ್ವೀನಿಯರ್ ಶಂಕರಣ್ಣ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ರಾಮ ಮಂದಿರಕ್ಕೆ  ಎಲ್ಲೆಡೆ ನಿಧಿ ಸಂಗ್ರಹಣೆಗೆ  ಮುಂದಾಗಿದ್ದು ಅಂತೆಯೇ ಸೀಗೆಬಾಗಿ ಗ್ರಾಮದಲ್ಲೂ ಸಹ ನಿಧಿ ಸಂಗ್ರಹ ಮಾಡಲಾಗುತ್ತಿದ್ದು ಪ್ರತಿಯೊಬ್ಬ ಗ್ರಾಮಸ್ಥರು ಸಹ ತಮ್ಮ ಕೈಲಾದಷ್ಟು ಮಟ್ಟಿಗೆ ದೇಣಿಗೆ ನೀಡುವಂತೆ ಕೋರಿದರು.ಪ್ರತಿಯೊಬ್ಬರು ಸಮರ್ಪಣಾ ಮನೋಭಾವದಿಂದ ಇದಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ದೇವಸ್ಥಾನ ಸಮಿತಿಯವರು, ಶ್ರೀರಾಮ ಸದ್ಭಕ್ತರು ಹಾಜರಿದ್ದರು.

ನಿಧನ:ಡ್ರೈವರ್ ಮೋಹನ್

ಹುಳಿಯಾರಿನ ಡ್ರೈವರ್ ಮೋಹನ್ ಅವರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಹುಳಿಯಾರು ಹೋಬಳಿ ಕುರುಬರ ಸೇವಾ ಸಂಘದ ಸಹ ಕಾರ್ಯದರ್ಶಿ ಆಗಿದ್ದ ಮೋಹನ್ ಕುಮಾರ್.SLR. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ,ಭಗವಂತ ಅವರ ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ.

ಹಾಲುಗೊಣದ ಶ್ರೀ ಸಿದ್ಧರಾಮೇಶ್ವರ ಶ್ರವಣದೋಷ ಮಕ್ಕಳ ವಸತಿ ಶಾಲೆಯಲ್ಲಿ ಆಹಾರದ ಕಿಟ್ ವಿತರಣೆ.

ಶ್ರೀ ಸಿದ್ಧರಾಮೇಶ್ವರ ಶ್ರವಣ ದೋಷ ಮಕ್ಕಳ ವಸತಿ ಶಾಲೆ,ಹಾಲುಗೋಣ ಮಜುರೆ ಬಿ. ಪಾಳ್ಯ ಹಾಗೂ ವಾಣೀ ಫೌಂಡೇಷನ್ ಬೆಂಗಳೂರು ಮತ್ತು ಗೀವ್ ಇಂಡಿಯಾ ಸಂಸ್ಥೆಗಳ ಸಹಯೋಗದೊಂದಿಗೆ, ವಿಕಲಚೇತನ ಮಕ್ಕಳ ಪೋಷಕರಿಗೆ ಆಹಾರ ಕಿಟ್ ‌ಗಳನ್ನು ಶ್ರೀ ಸಿದ್ಧರಾಮೇಶ್ವರ ಶ್ರವಣ ದೋಷ ಮಕ್ಕಳ ವಸತಿ ಶಾಲೆಯಲ್ಲಿ ವಿತರಿಸಲಾಯಿತು.  ಕೋರೋನಾ ಮಹಾಮಾರಿಯನ್ನು ಹೋಗಲಾಡಿಸಲು ದೇವರಲ್ಲಿ  ಪ್ರಾರ್ಥಿಸಲಾಯಿತು.ಸಂಸ್ಥೆಯು ಸಂಪೂರ್ಣ ಉಚಿತ ವಸತಿಯೊಂದಿಗೆ ಶಿಕ್ಷಣ ತರಬೇತಿ ನೀಡುತ್ತಿದ್ದು ಶ್ರವಣ ದೋಷ ಮಕ್ಕಳನ್ನು ಗುರುತಿಸಿ ಈ ಶಾಲೆಗೆ ಕಳುಹಿಸಿಕೊಡಲು ಪೋಷಕರಿಗೆ ತಿಳಿಸಲಾಯಿತು. ಸಂಸ್ಥೆಯ ಮುಖ್ಯಸ್ಥರಾದ ಸಿದ್ದೇಶ್ ಬಿ.ಸಿ. ಮಾತನಾಡಿ ಕೇವಲ ಶಾಲೆಯ ಸಿಬ್ಬಂದಿಗಳು ಸೇವೆ ಸಲ್ಲಿಸುವುದರಿಂದ ಮಾತ್ರ ವಿಕಲಚೇತನ ಮಕ್ಕಳಿಗೆ ಒಳಿತಾಗುವುದಿಲ್ಲ. ಬದಲಿಗೆ ಸಮಾಜದ ಪ್ರತಿಯೊಬ್ಬರು ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕಾರ್ಯಪ್ರವೃತ್ತರಾದರೆ ವಿಕಲಚೇತನರನ್ನು ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲು ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸಿದ್ಧರಾಮೇಶ್ವರ ಶ್ರವಣದೋಷ ವಸತಿ ಶಾಲೆಯ ಮಕ್ಕಳ ಪೋಷಕರು ಗಳು ಹಾಗೂ ವಾಣಿ ಫೌಂಡೇಶನ್ ಮತ್ತು ಸಂಸ್ಥೆಗಳ ಸದಸ್ಯರುಗಳು ಪಾಲ್ಗೊಂಡಿದ್ದರು.

ಯಳನಾಡುವಿನಲ್ಲಿ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ

ಯಳನಾಡುವಿನಲ್ಲಿ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ಹುಳಿಯಾರು ಸಮೀಪದ ಯಳನಾಡುವಿನಲ್ಲಿ ಶ್ರೀ ರಾಮಮಂದಿರ ನಿಧಿ ಸಮರ್ಪಣ ಅಭಿಯಾನಕ್ಕೆ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ಬಜರಂಗದಳದ ಅಧ್ಯಕ್ಷ ಮೋಹನ್ ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ವೈ.ಆರ್. ಮಲ್ಲಿಕಾರ್ಜುನಯ್ಯ ,ಸಿದ್ದು (ಅಣ್ಣಯಜ್ಜ), ರಮೇಶ್,ಸಿದ್ದು(ವೈ.ಜೆ),ಸಿದ್ದು ಬೋರ್ವೆಲ್,ಅಶೋಕ್,ಸಿದ್ದು(ಸಾಣಿ), ಶ್ರೀಧರ್ ಸೇರಿದಂತೆ  ಯಳನಾಡುವಿನ ಭಜರಂಗದಳದ ಕಾರ್ಯಕರ್ತರು ಹಾಗೂ ಶ್ರೀರಾಮ ಭಕ್ತರು ಪಾಲ್ಗೊಂಡಿದ್ದರು.🙏

ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ಸಂಕ್ರಾಂತಿ

ಹುಳಿಯಾರು ಪಟ್ಟಣದ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಾಗಿ ರಾಶಿ ಸೇರಿದಂತೆ ಕುಂಟೆ,ನೇಗಿಲು,ಕೂರಿಗೆ,ರೋಣಗಲ್ಲು ಸೇರಿದಂತೆ ಕೃಷಿ ಉಪಕರಣಗಳಿಗೆ ಸಂಕ್ರಾಂತಿ ಸುಗ್ಗಿ ಪೂಜೆ ಸಲ್ಲಿಸಿದರು. ಶಾಲಾ ವಿದ್ಯಾರ್ಥಿನಿಯರಿಂದ ನಡೆದ ಸುಗ್ಗಿ ಹಬ್ಬದ ನೃತ್ಯ ಗಮನಸೆಳೆಯಿತು.ಕನ್ನಡ ಶಿಕ್ಷಕರಾದ ಮಹಾಲಿಂಗಪ್ಪ ಸುಗ್ಗಿ ಹಬ್ಬದ ವಿಶೇಷತೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುಧಾ,ಅಧ್ಯಕ್ಷರಾದ ಶಿವಣ್ಣ,ಮುಖ್ಯಶಿಕ್ಷಕ ಗಿರೀಶ್ ಸೇರಿದಂತೆ ಬೋಧಕ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನಕ್ಕೆ ಹುಳಿಯಾರಿನಲ್ಲಿ ಚಾಲನೆ

ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಇಂದು ಜ.15ರಿಂದ ಅಖಿಲ ಭಾರತೀಯ ಮಟ್ಟದಲ್ಲಿ ಶುರುವಾಗಿದ್ದು ಚಿಕ್ಕನಾಯಕನಹಳ್ಳಿ ಮಂಡಲದ ಅಭಿಯಾನದ ಉದ್ಘಾಟನೆಯನ್ನು ಬಿಜೆಪಿ ಪ್ರಮುಖರು, ಮಾಜಿ ಶಾಸಕರು ಹಾಗೂ ಹಾಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಕೆ.ಎಸ್.ಕಿರಣ್ ಕುಮಾರ್ ಅವರು ಹುಳಿಯಾರು ಪಟ್ಟಣದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ನೆರವೇರಿಸಿದರು . ಈ ಸಂದರ್ಭದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಬಡಗಿ ರಾಮಣ್ಣ ಸೇರಿದಂತೆ ಆರೆಸ್ಸೆಸ್ ಸ್ವಯಂ ಸೇವಕರು,ಭಜರಂಗದಳದ ಕಾರ್ಯಕರ್ತರು,ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ಸದಸ್ಯರು ಸೇರಿದಂತೆ ಶ್ರೀರಾಮ ಸದ್ಭಕ್ತರು ಪಾಲ್ಗೊಂಡಿದ್ದರು.