ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನ ಅಖಿಲ ಭಾರತೀಯ ಮಟ್ಟದಲ್ಲಿ ಶುರುವಾಗಿದ್ದು ಅಂತೆಯೇ ಹುಳಿಯಾರು ಪಟ್ಟಣದಲ್ಲಿ ದೇಣಿಗೆ ಸಂಗ್ರಹಕ್ಕೆ ಇಂದು ಭಾನುವಾರ ಬಿಜೆಪಿ ಪ್ರಮುಖರು, ಮಾಜಿ ಶಾಸಕರು ಹಾಗೂ ಹಾಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಕೆ.ಎಸ್.ಕಿರಣ್ ಕುಮಾರ್ ಅವರು ಹುಳಿಯಾರು ಪಟ್ಟಣದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ನಂತರ ಶ್ರೀ ರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ಸದಸ್ಯರು ಹಾಗೂ ಶ್ರೀರಾಮ ಸದ್ಭಕ್ತರೊಂದಿಗೆ ಪಟ್ಟಣದ ಮನೆಮನೆಗೆ ತೆರಳಿ ನಿಧಿ ಸಂಗ್ರಹಿಸಿದರು.
ಒಳ್ಳೆಯ ಕೆಲಸ ರಾಮ ಮಂದಿರ
ಪ್ರತ್ಯುತ್ತರಅಳಿಸಿನಿರ್ಮಾಣ 👍👍👍