ಹುಳಿಯಾರು ಪಟ್ಟಣದ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಾಗಿ ರಾಶಿ ಸೇರಿದಂತೆ ಕುಂಟೆ,ನೇಗಿಲು,ಕೂರಿಗೆ,ರೋಣಗಲ್ಲು ಸೇರಿದಂತೆ ಕೃಷಿ ಉಪಕರಣಗಳಿಗೆ ಸಂಕ್ರಾಂತಿ ಸುಗ್ಗಿ ಪೂಜೆ ಸಲ್ಲಿಸಿದರು.ಶಾಲಾ ವಿದ್ಯಾರ್ಥಿನಿಯರಿಂದ ನಡೆದ ಸುಗ್ಗಿ ಹಬ್ಬದ ನೃತ್ಯ ಗಮನಸೆಳೆಯಿತು.ಕನ್ನಡ ಶಿಕ್ಷಕರಾದ ಮಹಾಲಿಂಗಪ್ಪ ಸುಗ್ಗಿ ಹಬ್ಬದ ವಿಶೇಷತೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸುಧಾ,ಅಧ್ಯಕ್ಷರಾದ ಶಿವಣ್ಣ,ಮುಖ್ಯಶಿಕ್ಷಕ ಗಿರೀಶ್ ಸೇರಿದಂತೆ ಬೋಧಕ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
Super
ಪ್ರತ್ಯುತ್ತರಅಳಿಸಿ