ಹುಳಿಯಾರು:ಕುರುಬರ ಎಸ್ ಟಿ ಮೀಸಲಾತಿ ಹೋರಾಟ ಪಾದಯಾತ್ರೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಸಮುದಾಯದವರು ಪಾಲ್ಗೊಳ್ಳುವ ನಿಟ್ಟಿನಲ್ಲಿ ಶುಕ್ರವಾರ ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಮಾಜಿ ಶಾಸಕರಾದ ಸಿ.ಬಿ.ಸುರೇಶ್ ಬಾಬು ಮಾತನಾಡಿ ಜ.28ರಂದು ತುಮಕೂರು ಜಿಲ್ಲೆಗೆ ಪಾದಯಾತ್ರೆ ಆಗಮಿಸುತ್ತಿದ್ದು ಶಿರಾ ತಾಲ್ಲೂಕಿನ ಜವಗೊಂಡನಹಳ್ಳಿಯಲ್ಲಿ ಬೆಳಿಗ್ಗೆ 6 ಘಂಟೆಯಿಂದ ಪಾದಯಾತ್ರೆ ಪ್ರಾರಂಭಿಸಲಿದ್ದು ಚಿಕ್ಕನಾಯಕನಹಳ್ಳಿ ತಾಲ್ಲೂಕು ಕುರುಬ ಸಮಾಜದ ಬಂಧುಗಳು ಭಾಗವಹಿಸಬೇಕಾಗಿ ಮನವಿಮಾಡಿದರು.
ಜಿ ಪಂ ಸದಸ್ಯ ಎಸ್.ಟಿ ಹೋರಾಟ ಸಮಿತಿ ಉಪಾಧ್ಶಕ್ಷ ವೈ.ಸಿ.ಸಿದ್ದರಾಮಯ್ಯ ಮಾತನಾಡಿ ಪಾದಯಾತ್ರೆಯಲ್ಲಿ ಸಮಾಜದ ಬಂಧುಗಳು ಮನೆಗೆ ಒಬ್ಬರಂತೆ ಭಾಗವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಹುಳಿಯಾರು ಹೋಬಳಿ ಕುರುಬ ಸಂಘದ ಅಧ್ಶಕ್ಷ ಹೆಚ್.ಅಶೋಕ್,ಉಪಾಧ್ಶಕ್ಷ ಎಸ್.ರಾಮಯ್ಯ,ಕಾರ್ಯದರ್ಶಿ ಎಸ್ ಆರ್ ಎಸ್ ದಯಾನಂದ್, ಖಜಾಂಚಿ ಎನ್.ಬಿ.ದೇವರಾಜ್, ಲೆಕ್ಕ ಪರಿಶೋದಕ ಹೊಸಹಳ್ಳಿ ಪಾಳ್ಯ ಕೃಷ್ಣಮೂರ್ತಿ,ಪಪಂ ಮಾಜಿ ಸದಸ್ಶರುಗಳಾದ ಹೆಚ್ ಶಿವಕುಮಾರ್,ಧನುಷ್ ರಂಗನಾಥ್, ತಾಲ್ಲೂಕು ಕುರುಬ ಸಂಘದ ಅಧ್ಶಕ್ಷ ಸಿ.ಎಸ್.ರಮೇಶ್,ಬೀರಲಿಂಗೇಶ್ವರ ದೇವಾಲಯ ಗೌಡರಾದ ದುರ್ಗಯ್ಯ,ರೇವಣ ಸಿದ್ದೇಶ್ವರ ಮಠದ ಕಾರ್ಯದರ್ಶಿ ಶಂಕರಣ್ಣ,ಬಾಲರಾಜ್, ಕೇಶವಾಪುರ ಕಿರಣ್,ಗಜೇಂದ್ರ,ಯಳನಾಡು ದಯಾನಂದ್,ಸೀಗೇಬಾಗಿ ಸಿದ್ದರಾಮಣ್ಣ, ಗಂಗಾಧರಗುಂಡ,ಲಿಂಗಪ್ಪನ ಪಾಳ್ಯದ ಜಯಣ್ಣ,ನಾಗರಾಜು,ಶಂಕರಣ್ಣ,ಸೋಮಜ್ಜನಪಾಳ್ಶ ದುರ್ಗಯ್ಶ ಮತ್ತಿತರರು ಸೇರಿದಂತೆ ಹರಿವಾಣದ ಗೌಡರುಗಳು,ಬಳಗ ಭಂಡಾರಿಗಳು ಮತ್ತು ಸಮಾಜದ ಮುಖಂಡರು,ಬಂಧುಗಳು ಉಪಸ್ಥಿತರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ