ಕಾರ್ಯಕ್ರಮದಲ್ಲಿ ಶೋಭಾ ಸಿಸ್ಟರ್ ಮಾತನಾಡಿ ಅರೋಗ್ಯವಂತ ಮಗು ಬೆಳವಣಿಗೆ ಆಗಬೇಕು ಅಂದರೆ ಹೆಣ್ಣು ಮಕ್ಕಳು ಗರ್ಭಿಣಿ ಇದ್ದಾಗಲೇ ಸರಿಯಾದ ಸಮಯಕ್ಕೆ ಪೌಷ್ಟಿಕ ಆಹಾರ ಸೇವಿಸಬೇಕು ಮತ್ತು ವೈದ್ಯರ ತಪಾಸಣೆ ಮಾಡಿಸುವುದು, ಸರಿಯಾದ ಸಮಯಕ್ಕೆ ಚುಚ್ಚುಮದ್ದು ತೆಗೆದುಕೊಳ್ಳುವುದನ್ನು ತಪ್ಪದೇ ಪಾಲಿಸಬೇಕು ಎಂದು ತಾಯಂದಿರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಉತ್ತಮವಾಗಿ ಬೆಳವಣಿಗೆ ಆಗಿರುವ ಮಕ್ಕಳಿಗೆ ಹಾಗೂ ಸರಿಯಾದ ಸಮಯದಲ್ಲಿ ಲಸಿಕೆ ಹಾಕಿಸಿರುವ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ನೂತನ ಸದಸ್ಯರುಗಳಾದ ಡಿ.ಪಿ.ಅರುಣ್ ಕುಮಾರ್ ಮತ್ತು HG ಕಲಾವತಿ ಮತ್ತು ತಾಲೋಕು ಆಶಾ ಮೇಲ್ವಿಚಾರಕಿ ಜಯಂತಿ ಮತ್ತು ಕಿ.ಮ.ಆ.ಸ ಮತ್ತು ಕಿ.ಪು.ಆ.ಸ ಹಾಗೂ ಆಶಾ ಕಾರ್ಯಕರ್ತೆಯರು,ತಾಯಂದಿರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ