ಚಿಕ್ಕನಾಯಕನಹಳ್ಳಿ ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷರನ್ನಾಗಿ ನಾಗರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.ಈ ಹಿಂದೆ ತಾಲ್ಲೂಕು ಮಡಿವಾಳ ಸಂಘದ ಅಧ್ಯಕ್ಷರಾಗಿದ್ದ ಸಿ.ಎಸ್ ನಟರಾಜ್ ರವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ನಾಗರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚಿಕ್ಕನಾಯಕನಹಳ್ಳಿ ಮಡಿವಾಳರ ಬೀದಿಯ ಶ್ರೀ ಹಟ್ಟಿಲಕ್ಕಮ್ಮ ದೇವಸ್ಥಾನದಲ್ಲಿ ಈ ಬಗ್ಗೆ ನಡೆದ ಸಭೆಯಲ್ಲಿ ನಾಗರಾಜ್ ರವರನ್ನು ಅಧ್ಯಕ್ಷರನ್ನಾಗಿ ತುಮಕೂರು ಜಿಲ್ಲೆ ಮಡಿವಾಳ ಮಾಚಿದೇವ ಸಮಾಜದ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ್ ರವರು ಸೂಚಿಸಿದರು.ಇದಕ್ಕೂ ಮುನ್ನ ಅಕಾಲಿಕವಾಗಿ ನಿಧನರಾದ ಸಿ.ಎಸ್ ನಟರಾಜ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ನಂತರ ನಡೆದ ಸಭೆಯಲ್ಲಿ ಫೆಬ್ರವರಿ ಒಂದನೇ ತಾರೀಕು ತಾಲ್ಲೂಕು ಮಟ್ಟದಲ್ಲಿ ಮಡಿವಾಳ ಜಯಂತಿ ಆಚರಿಸಲು ತೀರ್ಮಾನಿಸಲಾಯಿತು.ತಾಲ್ಲೂಕಿನ ಪ್ರತಿ ಹೋಬಳಿ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ಹಳ್ಳಿಗಳಲ್ಲಿ ಇರುವ ಮಡಿವಾಳ ಬಂಧುಗಳನ್ನು ಸಂಪರ್ಕಿಸಿ ಅವರನ್ನು ಸಂಘದ ಸದಸ್ಯರನ್ನಾಗಿ ಮಾಡಿ ಅವರಿಗೆ ಐಡಿ ಕಾರ್ಡ್ ಗುರುತಿನ ಚೀಟಿ ನೀಡುವಂತೆ ಮಾರ್ಗದರ್ಶನ ನೀಡಲಾಯಿತು.ಮುಂದಿನ ದಿನಗಳಲ್ಲಿ ಮಡಿವಾಳ ನಿಗಮದಿಂದ ಬರುವ ಅನುಕೂಲ ಪಡೆಯುವ ಬಗ್ಗೆ ಚರ್ಚಿಸಲಾಯಿತು.ಸಮಾಜದ ಪೂರ್ತಿ ಕಡುಬಡವರನ್ನು ಗುರುತಿಸುವ ಮೂಲಕ ತಾಲ್ಲೂಕು ಮಡಿವಾಳ ಜನಾಂಗವನ್ನು ಅಭಿವೃದ್ಧಿ ಮಾಡುವುದಾಗಿ ತಿಳಿಸಲಾಯಿತು.ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಮುಖಂಡರುಗಳಾದ ರಂಗಸ್ವಾಮಯ್ಯ,ಗೋಪಾಲಯ್ಯ,ಬಸವಲಿಂಗಯ್ಯ,ಲಕ್ಷ್ಮೀಶ್ ಚಿನ್ನಿ ಗೋಡೆಕೆರೆ ಗಂಗಣ್ಣ,ಕಂದಿಕೆರೆ ಹೋಬಳಿ ಅಧ್ಯಕ್ಷರಾದ ಗುರುಮೂರ್ತಿ, ಹುಳಿಯಾರು ಹೋಬಳಿಯಾ ಅಧ್ಯಕ್ಷರಾದ ಪರಮೇಶ್, ದಸೂಡಿ ದೇವರಾಜಣ್ಣ, ಹೊಯ್ಸಳಕಟ್ಟೆ ಶ್ಯಾಮಣ್ಣ ,ಪ್ರಸನ್ನಕುಮಾರ್, ಶಿಕ್ಷಕರಾದ ಮೋಹನ್ ಕುಮಾರ್, ಬೆಳವಾಡಿ ಕುಮಾರ್, ರವಿರಾಜ್ ಕೆರೆಯ ರಾಕೇಶ್, ಸ್ವಾಮಿ, ರಂಗನಾಥ್,ಕಂಠೇಶ್ ಮತ್ತಿತರರು ಸೇರಿದಂತೆ ತಾಲ್ಲೂಕಿನ ಮಡಿವಾಳ ಜನಾಂಗದ ಮುಖಂಡರುಗಳು,ಪದಾಧಿಕಾರಿಗಳು,ಬಂಧುಗಳು ಪಾಲ್ಗೊಂಡಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ