ಶ್ರೀ ಸಿದ್ಧರಾಮೇಶ್ವರ ಶ್ರವಣ ದೋಷ ಮಕ್ಕಳ ವಸತಿ ಶಾಲೆ,ಹಾಲುಗೋಣ ಮಜುರೆ ಬಿ. ಪಾಳ್ಯ ಹಾಗೂ ವಾಣೀ ಫೌಂಡೇಷನ್ ಬೆಂಗಳೂರು ಮತ್ತು ಗೀವ್ ಇಂಡಿಯಾ ಸಂಸ್ಥೆಗಳ ಸಹಯೋಗದೊಂದಿಗೆ, ವಿಕಲಚೇತನ ಮಕ್ಕಳ ಪೋಷಕರಿಗೆ ಆಹಾರ ಕಿಟ್‌ಗಳನ್ನು ಶ್ರೀ ಸಿದ್ಧರಾಮೇಶ್ವರ ಶ್ರವಣ ದೋಷ ಮಕ್ಕಳ ವಸತಿ ಶಾಲೆಯಲ್ಲಿ ವಿತರಿಸಲಾಯಿತು. ಕೋರೋನಾ ಮಹಾಮಾರಿಯನ್ನು ಹೋಗಲಾಡಿಸಲು ದೇವರಲ್ಲಿ ಪ್ರಾರ್ಥಿಸಲಾಯಿತು.ಸಂಸ್ಥೆಯು ಸಂಪೂರ್ಣ ಉಚಿತ ವಸತಿಯೊಂದಿಗೆ ಶಿಕ್ಷಣ ತರಬೇತಿ ನೀಡುತ್ತಿದ್ದು ಶ್ರವಣ ದೋಷ ಮಕ್ಕಳನ್ನು ಗುರುತಿಸಿ ಈ ಶಾಲೆಗೆ ಕಳುಹಿಸಿಕೊಡಲು ಪೋಷಕರಿಗೆ ತಿಳಿಸಲಾಯಿತು.
ಸಂಸ್ಥೆಯ ಮುಖ್ಯಸ್ಥರಾದ ಸಿದ್ದೇಶ್ ಬಿ.ಸಿ. ಮಾತನಾಡಿ ಕೇವಲ ಶಾಲೆಯ ಸಿಬ್ಬಂದಿಗಳು ಸೇವೆ ಸಲ್ಲಿಸುವುದರಿಂದ ಮಾತ್ರ ವಿಕಲಚೇತನ ಮಕ್ಕಳಿಗೆ ಒಳಿತಾಗುವುದಿಲ್ಲ. ಬದಲಿಗೆ ಸಮಾಜದ ಪ್ರತಿಯೊಬ್ಬರು ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕಾರ್ಯಪ್ರವೃತ್ತರಾದರೆ ವಿಕಲಚೇತನರನ್ನು ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲು ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಸಿದ್ಧರಾಮೇಶ್ವರ ಶ್ರವಣದೋಷ ವಸತಿ ಶಾಲೆಯ ಮಕ್ಕಳ ಪೋಷಕರು ಗಳು ಹಾಗೂ ವಾಣಿ ಫೌಂಡೇಶನ್ ಮತ್ತು ಸಂಸ್ಥೆಗಳ ಸದಸ್ಯರುಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ