ತುಮಕೂರು: ತುಮಕೂರು ಜಿಲ್ಲೆಗೂ ಬಹು ನಿರೀಕ್ಷಿತ ಕೋವಿಡ್ ವ್ಯಾಕ್ಸಿನ್ ಆಗಮನವಾಗಿದ್ದು ಜನತೆ ನಿಟ್ಟಿಸುರು ಬಿಡುವ ಸಮಯ ಬಂದಂತಾಗಿದೆ.
ಕೋವಿಡ್ ವ್ಯಾಕ್ಸಿನ್ ಲಸಿಕೆಯನ್ನು ತುಮಕೂರು ನಗರದ ಡಿಎಚ್ಒ ಕಚೇರಿಯ ಆವರಣದಲ್ಲಿರುವ ಜಿಲ್ಲಾ ಲಸಿಕಾ ಉಗ್ರಾಣಕ್ಕೆ ಬುಧವಾರ ರಾತ್ರಿ ಎಂಟು ಗಂಟೆಗೆ ಬೆಂಗಳೂರಿನಿಂದ ಪೋಲಿಸ್ ಭದ್ರತೆಯಲ್ಲಿ ತರಲಾಯಿತು.
ಈ ಸಂದರ್ಭದಲ್ಲಿ ಡಿಎಚ್ಒ ಡಾ. ನಾಗೇಂದ್ರಪ್ಪ , ಆರ್ ಸಿ ಎಚ್ ಓ ಡಾ. ಕೇಶವರಾಜ್, ಡಿ ಎಸ್ ಓ ಡಾ. ಮೋಹನ ದಾಸ್ ಮತ್ತಿತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ