ಹುಳಿಯಾರು ಸಮೀಪದ ಸೀಗೆಬಾಗಿಯಲ್ಲಿ ಶ್ರೀ ರಾಮಮಂದಿರ ನಿಧಿ ಸಮರ್ಪಣ ಅಭಿಯಾನಕ್ಕೆ ಶ್ರೀ ವರದರಾಜಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವರದರಾಜಸ್ವಾಮಿ ದೇವಾಲಯದ ಕನ್ವೀನಿಯರ್ ಶಂಕರಣ್ಣ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ರಾಮ ಮಂದಿರಕ್ಕೆ ಎಲ್ಲೆಡೆ ನಿಧಿ ಸಂಗ್ರಹಣೆಗೆ ಮುಂದಾಗಿದ್ದು ಅಂತೆಯೇ ಸೀಗೆಬಾಗಿ ಗ್ರಾಮದಲ್ಲೂ ಸಹ ನಿಧಿ ಸಂಗ್ರಹ ಮಾಡಲಾಗುತ್ತಿದ್ದು ಪ್ರತಿಯೊಬ್ಬ ಗ್ರಾಮಸ್ಥರು ಸಹ ತಮ್ಮ ಕೈಲಾದಷ್ಟು ಮಟ್ಟಿಗೆ ದೇಣಿಗೆ ನೀಡುವಂತೆ ಕೋರಿದರು.ಪ್ರತಿಯೊಬ್ಬರು ಸಮರ್ಪಣಾ ಮನೋಭಾವದಿಂದ ಇದಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ದೇವಸ್ಥಾನ ಸಮಿತಿಯವರು, ಶ್ರೀರಾಮ ಸದ್ಭಕ್ತರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ